ನವದೆಹಲಿ: ರಾಜಸ್ಥಾನದ (Rajasthan Election) ಚುನಾವಣಾ ಪ್ರಚಾರಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರನ್ನು ಜೇಬುಗಳ್ಳ (Pickpocket) ಮತ್ತು ಅಶಕುನ (bad omen) ಎಂದು ಕರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರಿಗೆ ಚುನಾವಣಾ ಆಯೋಗವು (election Commission) ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ(Show Cause Notice). ರಾಹುಲ್ ಗಾಂಧಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಭಾರತೀಯ ಜನತಾ ಪಾರ್ಟಿಯು ಆಯೋಗಕ್ಕೆ ದೂರು ನೀಡಿತ್ತು.
ರಾಹುಲ್ ಗಾಂಧಿ ಹೇಳಿದ್ದೇನು?
2023ರ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್ಗಳ ಸೋಲನುಭವಿಸಲು ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೋಗಿದ್ದೇ ಕಾರಣ. ಅವರೊಬ್ಬ ಅಪಶಕುನ ವ್ಯಕ್ತಿ ಎಂಬುದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಟೀಕಿಸಿದ್ದರು. ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತವು ಪಂದ್ಯವನ್ನು ಸೋಲುವಂತೆ ಮಾಡಿದ್ದು “ಪನೌತಿ” (ಕೆಟ್ಟ ಶಕುನ) ಎಂದು ರಾಹುಲ್ ಹೇಳಿದ್ದಾರೆ.
ಪನೌತಿ… ಪನೌತಿ… ಪನೌತಿ… (ಅಪ ಶಕುನ, ಅಪಶಕುನ, ಅಪಶಕುನ). ನಮ್ಮ ತಂಡದ ಆಟಗಾರರು ವಿಶ್ವಕಪ್ ಗೆಲ್ಲುವ ಹಾದಿಯಲ್ಲಿದ್ದರು ಆದರೆ ಅಪಶಕಮು ಅವರನ್ನು ಸೋಲುವಂತೆ ಮಾಡಿದರು … ಈ ವಿಷಯ ದೇಶದ ಜನರಿಗೆ ತಿಳಿದಿದೆ” ಎಂದು ರಾಹುಲ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಹೇಳಿಕೆಯ ವೀಡಿಯೊವನ್ನು ಹಂಚಿಕೊಂಡಿದೆ.
ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಮೋದಿ ಮತ್ತು ಅಮಿತ್ ಶಾ ಕ್ರೀಡಾಂಗಣಕ್ಕೆ ಹೋಗಿದ್ದರು. ಆದಾಗ್ಯೂ, ಭಾರತದ ಸೋಲಿನ ನಂತರ, ಮೋದಿ ತಮ್ಮ ಡ್ರೆಸ್ಸಿಂಗ್ ಕೋಣೆಯಲ್ಲಿ ತಂಡದ ಸದಸ್ಯರನ್ನು ಸಂತೈಸುತ್ತಿರುವುದನ್ನು ಕಾಣಬಹುದು. ಕ್ರಿಕೆಟಿಗರೊಂದಿಗಿನ ಅವರ ಸಂವಾದದ ವೀಡಿಯೊಗಳು ವೈರಲ್ ಆಗಿವೆ.
ಮೋದಿ ಜೇಬುಗಳ್ಳ ಅಂದಿದ್ದ ರಾಹುಲ್
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ಮೋದಿ ಅವರನ್ನು ಜೇಬುಗಳ್ಳರಿಗೆ ಹೋಲಿಸಿದ್ದರು. ”ಜೇಬುಗಳ್ಳ ಎಂದಿಗೂ ಒಬ್ಬನೇ ಬರುವುದಿಲ್ಲ. ಅವರು ಮೂರು ಜನರು ಇರ್ತಾರೆ. ಒಬ್ಬ ಎದುರಿಗೆ ಬರ್ತಾನೆ, ಮತ್ತೊಬ್ಬ ಹಿಂದಿನಿಂದ ಬರ್ತಾನೆ. ಇನ್ನೊಬ್ಬ ದೂರದಲ್ಲಿರುತ್ತಾನೆ.. ಪ್ರಧಾನಿ ಮೋದಿ ಅವರದ್ದು ನಿಮ್ಮ ಗಮನವನ್ನು ಬೇರೇಡೆಗೆ ಸೆಳೆಯುವುದಾಗಿದೆ. ಅವರು ಟಿವಿಯಲ್ಲಿ ಬರುತ್ತಾರೆ ಮತ್ತು ಹಿಂದೂ-ಮುಸ್ಲಿಮ್, ನೋಟು ಅಮಾನ್ಯೀಕರಣ, ಜಿಎಸ್ಟಿ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಾರ್ವಜನಿಕರ ಗಮನವನ್ನು ಬೇರೇಡೆ ಸೆಳೆಯುತ್ತಾರೆ. ಈ ಮಧ್ಯೆ, ಅದಾನಿ ಹಿಂದಿನಿಂದ ಬಂದು ನಿಮ್ಮ ದುಡ್ಡು ಹೊಡ್ಕೊಂಡು ಹೋಗುತ್ತಾರೆ” ಎಂದು ಟೀಕಿಸಿದ್ದರು.
ಚುನಾವಣಾ ಸಮಿತಿಗೆ ಪತ್ರ ಬರೆದಿರುವ ಭಾರತೀಯ ಜನತಾ ಪಾರ್ಟಿಯು, ಪ್ರಧಾನಿಯೊಬ್ಬರನ್ನು ರಾಹುಲ್ ಗಾಂಧಿ, ಜೇಬುಕಳ್ಳ ಮತ್ತು ಅಪಶಕುನಕ್ಕೆ ಹೋಲಿಸಿದ್ದಾರೆ. ಇದು ರಾಜಕೀಯ ಚರ್ಚೆಯ ಹಂತಗಳ ಕುಸಿತದ ಲಕ್ಷಣವಾಗಿದೆ ಎಂದು ಹೇಳಿದೆ. ಯಾವುದೇ ವ್ಯಕ್ತಿಯನ್ನು ಜೇಬುಗಳ್ಳ ಎಂದು ಕರೆಯುವುದು ಕೆಟ್ಟ ನಿಂದನೆ ಮತ್ತು ವೈಯಕ್ತಿಕ ದಾಳಿ ಮಾತ್ರವಲ್ಲದೆ ಅವರ ಪ್ರತಿಷ್ಠೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವ ಸ್ಪಷ್ಟ ಉದ್ದೇಶವಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯು ಆಯೋಗಕ್ಕೆ ನೀಡಿರುವ ದೂರಿನಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: PM Narendra Modi: ರಾಹುಲ್ ಗಾಂಧಿ ಮೂರ್ಖರ ಸರದಾರ! ಪಿಎಂ ನರೇಂದ್ರ ಮೋದಿ ವಾಗ್ದಾಳಿ