ನವದೆಹಲಿ: ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಿಂದ(Assembly Elections) ಚುನಾವಣಾ ಆಯೋಗವು (Election Commission) 1760 ಕೋಟಿ ರೂ.ಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದೆ. 2018ರ ಚುನಾವಣೆಗೆ ಹೋಲಿಸಿದರೆ ಇದು ಏಳು ಪಟ್ಟು ಹೆಚ್ಚು ಎಂದು ಚುನಾವಣಾ ಆಯೋಗವು ಹೇಳಿದೆ. ಇದು ಉಚಿತ ಕೊಡುಗೆಗಳು, ಡ್ರಗ್ಸ್, ನಗದು, ಮದ್ಯ ಮತ್ತು ಚಿನ್ನದಂತ ಬೆಲೆ ಬಾಳುವ ವಸ್ತುಗಳು ಇದರಲ್ಲಿ ಸೇರಿವೆ. ಮಿಜೋರಾಮ್(Mizoram), ಮಧ್ಯ ಪ್ರದೇಶ(Madhya Pradesh), ಛತ್ತೀಸ್‌ಗಢ(Chhattisgarh), ರಾಜಸ್ಥಾನ (Rajasthan) ಮತ್ತು ತೆಲಂಗಾಣದಲ್ಲಿ (Telangana) ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಒಡ್ಡಿದ ಆಮಿಷಗಳಾಗಿವೆ. ಈ ರಾಜ್ಯಗಳ ಚುನಾವಣಾ ಫಲಿತಾಂಶವು ಡಿಸೆಂಬರ್ 3ರಂದು ಪ್ರಕಟವಾಗಲಿದೆ(Election Result).
ಚುನಾವಣೆ ಘೋಷಣೆಯಾದಾಗಿನಿಂದ ಐದು ರಾಜ್ಯಗಳಲ್ಲಿ 1760 ಕೋಟಿ ರೂ.ಗೂ ಹೆಚ್ಚು ವಶಪಡಿಸಿಕೊಳ್ಳಲಾಗಿದೆ. 2018 ವಿಧಾನಸಭೆ ಚುನಾವಣೆಗೆ ಹೋಲಿಸಿದರೆ, ಇದು ಏಳು ಪಟ್ಟು ಹೆಚ್ಚಾಗಿದೆ. ಆಗ 239.15 ಕೋಟಿ ರೂ. ವಶಪಡಿಸಿಕೊಳ್ಳಲಾಗಿತ್ತು. ಗುಜರಾತ್, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ಮತ್ತು ಕರ್ನಾಟಕದಲ್ಲಿ ಕಳೆದ ಆರು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ 1400 ಕೋಟಿ ರೂ.ಗೂ ಹೆಚ್ಚು ವಶಪಡಿಸಿಕೊಳ್ಳಲಾಗಿದೆ. ಈ ರಾಜ್ಯಗಳಲ್ಲಿ ಈ ಹಿಂದೆ ನಡೆದ ಎಲೆಕ್ಷನ್‌ಗೆ ಹೋಲಿಸಿದರೆ ಇದು 11 ಪಟ್ಟು ಹೆಚ್ಚಳ ಎಂದು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಧ್ಯ ಪ್ರದೇಶ, ಛತ್ತೀಸ್‌ಗಢ ಮತ್ತು ಮಿಜೋರಾಂ ವಿಧಾನಸಭೆಗೆ ಇತ್ತೀಚೆಗಷ್ಟೇ ಚುನಾವಣೆ ಮುಗಿದಿದೆ. ರಾಜಸ್ಥಾನದಲ್ಲಿ ನವೆಂಬರ್ 25 ಮತ್ತು ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಈ ಐದು ರಾಜ್ಯಗಳ ಮತ ಎಣಿಕೆಯು ಡಿಸೆಂಬರ್ ಮೂರರಂದು ನಡೆಯಲಿದೆ.
ತೆಲಂಗಾಣವು 659.2 ಕೋಟಿ ರೂ. ವಶಪಡಿಸಿಕೊಳ್ಳಲಾಗಿದ್ದು ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ನಂತರ ಸ್ಥಾನದಲ್ಲಿ ರಾಜಸ್ಥಾನ 650.7 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಮಿಜೋರಾಂನಲ್ಲಿ ಯಾವುದೇ ನಗದು ಅಥವಾ ಚಿನ್ನವನ್ನು ವಶಪಡಿಸಿಕೊಂಡಿಲ್ಲ. ಹಾಗಿದ್ದೂ, 29.82 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಾರಿ ಆಯೋಗವು ಚುನಾವಣಾ ವೆಚ್ಚ ನಿರ್ವಹಣಾ ವ್ಯವಸ್ಥೆ (ESMS) ಮೂಲಕ ಮೇಲ್ವಿಚಾರಣಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಎಂದು ಆಯೋಗವು ತಿಳಿಸಿದೆ.
ಈ ಸುದ್ದಿಯನ್ನೂ ಓದಿ: ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಹೇಳಿಕೆ! ನೋಟಿಸ್ ನೀಡಿದ ಚುನಾವಣಾ ಆಯೋಗ