ನವದೆಹಲಿ: ಈಶಾನ್ಯ ಭಾರತದ ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬುಧವಾರ ಮಧ್ಯಾಹ್ನ 2.30ಕ್ಕೆ ಕೇಂದ್ರ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು (Election Commission) ಘೋಷಣೆ ಮಾಡಲಿದೆ.
ನಾಗಾಲ್ಯಾಂಡ್ ವಿಧಾನಸಭೆ ಅವಧಿಯು ಮಾರ್ಚ್ 12ಕ್ಕೆ ಮುಕ್ತಾಯವಾಗಲಿದೆ, ಇದೇ ವೇಳೆ, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆ ಅವಧಿಯು ಕ್ರಮವಾಗಿ ಮಾರ್ಚ್ 15 ಮತ್ತು ಮಾರ್ಚ್ 22ಕ್ಕೆ ಕೊನೆಗೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸಕ್ತ ಸಾಲಿನಲ್ಲಿ ಒಟ್ಟು 9 ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ಮಾತ್ರವಲ್ಲದೇ, ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಮ್, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ | Election 2023 | ಕರ್ನಾಟಕದಲ್ಲಿ ಚುನಾವಣೆ ಗೆಲ್ಲುವ ಮಾತನಾಡುವ ಸಿದ್ದು ಬಾದಾಮಿಯನ್ನೇಕೆ ಬಿಡುತ್ತಿದ್ದಾರೆ: ಬಿಎಸ್‌ವೈ ಪ್ರಶ್ನೆ