Site icon Vistara News

Gujarat Election Result 2022 | ಸೇತುವೆ ದುರಂತದಲ್ಲಿ 140 ಮಂದಿ ಸಾವು ಕಂಡ ಮೋರ್ಬಿಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ

Kantibhai Amrutiya @ Gujarat election Morbi

ಮೋರ್ಬಿ: ಕಳೆದ ತಿಂಗಳು ಮೋರ್ಬಿಯಲ್ಲಿ ಸಂಭವಿಸಿದ ಭೀಕರ ಸೇತುವೆ ದುರಂತದಲ್ಲಿ 140 ಜನರು ಸಾವಿಗೀಡಾಗಿದ್ದರು. ಈ ಮೋರ್ಬಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾಂತಿಭಾಯಿ ಅಮೃತಿಯಾ ಅವರು ಮುನ್ನಡೆಯಲ್ಲಿದ್ದಾರೆ. ಐದು ಬಾರಿ ಶಾಸಕಾರಾಗಿದ್ದ ಕಾಂತಿಭಾಯಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿತ್ತು(Gujarat Election Result 2022).

ಈ ಕ್ಷೇತ್ರದಲ್ಲಿ ಪಾಟಿದಾರ್ ಮತಗಳು ನಿರ್ಣಾಯಕವಾಗಿವೆ. ಹಾಲಿ ಶಾಸಕ ಬ್ರಿಜೇಶ್ ಮಿಶ್ರಾ ಅವರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಅವರ ಬದಲಿಗೆ ಕಾಂತಿಭಾಯಿ ಅಮೃತಿಯಾ ಅವರಿಗೆ ಟಿಕೆಟ್ ನೀಡಿತ್ತು. ಬ್ರಿಜೆಶ್ ಮಿಶ್ರಾ ಅವರು ಭೂಪೇಂದ್ರ ಪಟೇಲ್ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಈ ಮೊದಲು ಇವರು ಕಾಂಗ್ರೆಸ್‌ನಲ್ಲಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಜಯಂತಿ ಪಟೇಲ್ ಅವರು ಅಮೃತಿಯಾ ಅವರ ವಿರುದ್ಧ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಪಂಕಜ್ ರಣ್ಸಿರಿಯಾ ಅವರನ್ನು ಆಪ್ ಸ್ಪರ್ಧೆಗೆ ಇಳಿಸಿದೆ. ವಿಶೇಷ ಎಂದರೆ, ಇವರು ಬಿಜೆಪಿ ಅಭ್ಯರ್ಥಿಯ ಅಮೃತಿಯಾ ಅವರ ಸಂಬಂಧಿಯೂ ಹೌದು. ಈ ಮೊದಲು ಬಿಜೆಪಿಯಲ್ಲಿದ್ದರು.

ಇದನ್ನೂ ಓದಿ | Election Results Live Updates | ಗುಜರಾತ್​​ನಲ್ಲಿ ಶೇ.52ರಷ್ಟು ಮತ ಪಡೆದ ಬಿಜೆಪಿ; ಹಿಮಾಚಲ ಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್​ ಬಿಗ್​ ಫೈಟ್​

Exit mobile version