Site icon Vistara News

Election Result 2022 | ಹಿಮಾಚಲದಲ್ಲಿ ಕಾಂಗ್ರೆಸ್ 33, ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ, ನೆಕ್ ಟು ನೆಕ್ ಸ್ಪರ್ಧೆ!

Phalodi satta market

ನವದೆಹಲಿ: ಹಿಮಾಚಲ ಪ್ರದೇಶದ ಈ ವರೆಗಿನ ರಿಸಲ್ಟ್ ಪ್ರಕಾರ, ಕಾಂಗ್ರೆಸ್ 33 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದರೆ, ಬಿಜೆಪಿ 32 ಕ್ಷೇತ್ರಗಳಲ್ಲಿ ಮುಂದಿದೆ. ಎಕ್ಸಿಟ್ ಪೋಲ್ ನಿರೀಕ್ಷೆ ಮಾಡಿದ ರೀತಿಯಲ್ಲಿ ಹಿಮಾಚಲ ಪ್ರದೇಶವು ನೆಕ್ ಟು ನೆಕ್ ಸ್ಪರ್ಧೆಗೆ ಸಾಕ್ಷಿಯಾಗುತ್ತಿದೆ(Election Result 2022).

ಹಿಮಾಚಲ ಸಿಎಂ, ಬಿಜೆಪಿ ಅಭ್ಯರ್ಥಿ ರಾಮ್ ಠಾಕೂರ್ ಅವರು ಸೇರಾಜ್ ಕ್ಷೇತ್ರದಲ್ಲಿ 7664 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಸಚಿವ ರಾಕೇಶ್ ಪಠಾಣೀಯಾ ಅವರು 2667 ಮತಗಳಿಂದ ಕಾಂಗ್ರಾ ಕ್ಷೇತ್ರದಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ದೆರ್ಹಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಹೋಶ್ಯಾರ್ ಸಿಂಗ್ ಮುನ್ನಡೆಯಲ್ಲಿದ್ದಾರೆ.

ಬಿಜೆಪಿ ಸಚಿವ ಸರ್ವೀನ್ ಚೌಧರಿ ಅವರು ಶಹ್ಪುರ್ ಕ್ಷೇತ್ರದಲ್ಲಿ 2771 ಮತಗಳ ಹಿನ್ನಡೆಯಲ್ಲಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಸಂಭಾವ್ಯ ಸಿಎಂ ಅಭ್ಯರ್ಥಿ ಆಶಾ ಕುಮಾರಿ ಅವರು ಚಂಬಾ ಜಿಲ್ಲೆಯ ಡಾಲ್‌ಹೌಸಿ ಕ್ಷೇತ್ರದಲ್ಲಿ 3293 ಮತಗಳಿಂದ ಹಿನ್ನಡೆಯನ್ನು ಕಾಣುತ್ತಿದ್ದಾರೆ. ಇದೊಂದು ಕಾಂಗ್ರೆಸ್ ಪಾಲಿಗೆ ಶಾಂಕಿಂಗ್ ನ್ಯೂಸ್.

ಇನ್ನು ಶಿಮ್ಲಾ ಜಿಲ್ಲೆಯ ಕಸ್ಮುಪಟಿ ಕ್ಷೇತ್ರದಲ್ಲಿ ಬಿಜೆಪಿಯ ಸಚಿವ ಸುರೇಶ್ ಭಾರದ್ವಾಜ್ ಅವರು 3784 ಮತಗಳ ಅಂತರದಲ್ಲಿ ಹಿಂದೆ ಇದ್ದಾರೆ. ಮತ್ತೊಂದೆಡೆ, ನಲಗಢ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಕೆ.ಎಲ್. ಠಾಕೂರ್ ಅವರು 4180 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಟಿಕೆಟ್ ನೀಡದ್ದಕ್ಕೆ ಬಿಜೆಪಿಯಿಂದ ಹೊರ ಬಂದು ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ. ಬಿಜೆಪಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕರಿಗೆ ಟಿಕೆಟ್ ನೀಡಿತ್ತು.

ಇದನ್ನೂ ಓದಿ | Election Result 2022 | ಗುಜರಾತ್‌ನಲ್ಲಿ ಬಿಜೆಪಿ ಮುನ್ನಡೆ, ಹಿಮಾಚಲದಲ್ಲಿ ಸಮ ಬಲ ಸ್ಪರ್ಧೆ, ಇದು ಆರಂಭಿಕ ಟ್ರೆಂಡ್

Exit mobile version