ನವದೆಹಲಿ: ಎಕ್ಸಿಟ್ ಪೋಲ್‌ಗಳು ನಿರೀಕ್ಷೆ ಮಾಡಿದಂತೆ ಈಗ ಗುಜರಾತ್ ಮತ್ತ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್ ಆರಂಭವಾಗಿದೆ. ಗುಜರಾತ್‌ನಲ್ಲಿ ನಿರೀಕ್ಷೆಯಂತೆ ಬಿಜೆಪಿ ಸುಮಾರು 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿಕೊಂಡಿದೆ. ಅದೇ ರೀತಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಸ್ಪರ್ಧೆ ನಡೆಯುತ್ತಿದೆ. (Election Result 2022).
ಗುಜರಾತ್‌ನಲ್ಲಿ ಕಾಂಗ್ರೆಸ್ 36 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಳ್ಳುತ್ತಿದೆ, ಬಿಜೆಪಿ 125 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಆಪ್ ನಾಲ್ಕು ಕ್ಷೇತ್ರಗಳಲ್ಲಿ ಪ್ರದರ್ಶನ ತೋರುತ್ತಿದೆ.
ಇನ್ನು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 39 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ 27 ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಆರಂಭಿಕ ಟ್ರೆಂಡ್‌ನಲ್ಲಿ ಆಪ್ ಯಾವುದೇ ಮುನ್ನಡೆಯನ್ನು ತೋರಿಲ್ಲ. ಸದ್ಯಕ್ಕೆ ಎಕ್ಸಿಟ್ ಪೋಲ್‌ಗಳ ಪ್ರಿಡಿಕ್ಟ್ ನಿಜವಾಗುವಂತಿದೆ. ಮತ ಎಣಿಕೆ ಮುಂದುವರಿದಂತೆ ಪರಿಸ್ಥಿತಿಯು ಬದಲಾಗಬಹುದು.
ಇದನ್ನೂ ಓದಿ | Election Result 2022 | ಗುಜರಾತ್, ಹಿಮಾಚಲ ಪ್ರದೇಶ ವಿಧಾನ ಸಭೆ ಚುನಾವಣೆ ಮತ ಎಣಿಕೆ ಶುರು