Site icon Vistara News

ಬೆಂಗಳೂರಿನ ಜವಳಿ ವ್ಯಾಪಾರಿ ಈಗ ರಾಜಸ್ಥಾನದಲ್ಲಿ ಶಾಸಕ!

Election Results 2023, Bengaluru businessman is now mla in Rajasthan

ಬೆಂಗಳೂರು: ಇಲ್ಲಿನ ಚಿಕ್ಕಪೇಟೆಯಲ್ಲಿ (Chikkapet) ಬಟ್ಟೆ ವ್ಯಾವಾರಿಯಾಗಿದ್ದ (Bengaluru Businessman) ಲಾಡುಲಾಲ್ ಪಿಟ್ಲಿಯಾ (Ladulal Pitliya) ಅವರು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಜನತಾ ಪಾರ್ಟಿ ಮೂಲಕ ಸಹಾರಾ ಕ್ಷೇತ್ರದಲ್ಲಿ (sahara assembly constituency) ಸ್ಪರ್ಧಿಸಿದ್ದ ಲಾಡುಲಾಲ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದಾರೆ. 2018ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಲಾಡುಲಾಲ್(Textile Marchant), ಕಾಂಗ್ರೆಸ್ ಎದುರು ಪರಾಭವಗೊಂಡಿದ್ದರು. ಆದರೆ, ಈ ಬಾರಿ ವಿಜಯ ನಗೆ ಬೀರಿದ್ದಾರೆ.

ಬೆಂಗಳೂರಿನ ರಾಜಾಜಿ ನಗರದ ಜುಗನಹಳ್ಳಿಯ 2ನೇ ಬ್ಲಾಕ್‌ನಲ್ಲಿ ವಾಸಿಯಾಗಿರುವ ಲಾಡುಲಾಲ್ ಅವರು, ಚಿಕ್ಕಪೇಟೆಯಲ್ಲಿ ದೊಡ್ಡ ಜವಳಿ ವ್ಯಾಪಾರಿಯಾಗಿದ್ದಾರೆ. ರಾಜಕೀಯವಾಗಿ ಮಹತ್ವಾಕಾಂಕ್ಷಿಯಾಗಿರುವ ಲಾಡುಲ್ ಅವರು ಕೊನೆಗೂ ರಾಜಸ್ಥಾನದ ಶಾಸಕರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಲಾಡುಲಾಲ್‌ ಅವರು ಶಾಸಕರಾಗಿರುವ ಕಾರಣ, ಅವರ ಮಕ್ಕಳು ಚಿಕ್ಕಪೇಟೆಯಲ್ಲಿ ಜವಳಿ ವ್ಯಾಪಾರ ಮುನ್ನಡೆಸಿಕೊಂಡು ಹೋಗಲಿದ್ದಾರೆಂದು ತಿಳಿದು ಬಂದಿದೆ.

52 ವರ್ಷದ ಲಾಡುಲಾಲ್ ಪಿಟ್ಲಿಯಾ ಅವರು ಸಹಾರಾ ಕ್ಷೇತ್ರದಲ್ಲಿ 1.17 ಲಕ್ಷ ಮತಗಳನ್ನು ಪಡೆದುಕೊಂಡರೆ, ಅವರ ಎದುರಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜೇಂದ್ರ ತ್ರಿವೇದಿ ಅವರು ಕೇವಲ 54, 684 ಮತಗಳನ್ನು ಪಡೆದುಕೊಂಡು ಸೋಲೋಪ್ಪಿಕೊಂಡಿದ್ದಾರೆ.

ರಾಜಸ್ಥಾನ ಚುನಾವಣೆಯಲ್ಲಿ ಗೆದ್ದ ನಾಲ್ವರು ಸಂಸದರ ರಾಜೀನಾಮೆಗೆ ಬಿಜೆಪಿ ಸೂಚನೆ?

ಕಾಂಗ್ರೆಸ್‌ನ (Congress Party) ಅಶೋಕ್ ಗೆಹ್ಲೋಟ್ (Ashok Geholt) ಸರ್ಕಾರವನ್ನು ಕಿತ್ತೊಗೆಯುವಲ್ಲಿ ಯಶಸ್ವಿಯಾಗಿರುವ ಭಾರತೀಯ ಜನತಾ ಪಾರ್ಟಿಯು(BJP Party), ವಿಧಾನಸಭೆ ಚುನಾವಣೆಯಲ್ಲಿ (election Result 2023) ಗೆದ್ದಿರುವ ಸಂಸತ್ ಸದಸ್ಯರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ. ಒಟ್ಟು ಏಳು ಸಂಸದರನ್ನು (Member of Parliament) ಬಿಜೆಪಿ ಕಣಕ್ಕಿಳಿಸಿತ್ತು, ಈ ಪೈಕಿ ನಾಲ್ವರು ಗೆದ್ದಿದ್ದರು. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ (CM Candidate) ಪ್ರಕ್ರಿಯೆ ಆರಂಭಿಸಿರುವ ಬಿಜೆಪಿ, ರಾಜಸಮಂದ್ ಸಂಸದೆ ದಿಯಾ ಕುಮಾರಿ, ಜೈಪುರ ಗ್ರಾಮೀಣ ಸಂಸದ ರಾಜವರ್ಧನ್ ರಾಥೋಡ್ ಮತ್ತು ಅಲ್ವಾರ್ ಕ್ಷೇತ್ರದ ಸಂಸದ ಬಾಬಾ ಬಾಲಕನಾಥ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ.

ಗೆಲ್ಲುವ ಸಂಸದರು ರಾಜ್ಯ ರಾಜಕೀಯದ ಮೇಲೆ ಕೇಂದ್ರೀಕರಿಸಬೇಕೆಂದು ಬಿಜೆಪಿ ಉದ್ದೇಶಿಸಿದೆ. ಮೂಲಗಳ ಪ್ರಕಾರ, ಈ ನಾಯಕರಿಗೆ ಪಕ್ಷವು ಉನ್ನತ ಜವಾಬ್ದಾರಿಗಳನ್ನು ಹೊರಿಸಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ವಿಶೇಷ ಎಂದರೆ, ಗೆದ್ದಿರುವ ನಾಲ್ಕು ಸಂಸದರ ಪೈಕಿ ಮೂವರು ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ ಎಂದು ಹೇಳಬಹುದು.

ಈ ಸುದ್ದಿಯನ್ನೂ ಓದಿ: Assembly Elections 2023: ಬಿಜೆಪಿಗೆ ನಾಲ್ಕನೇ ಮೂರು ಬಹುಮತ, ಕಾಂಗ್ರೆಸ್‌ಗೆ ಒಂದೇ ಗ್ಯಾರಂಟಿ!

Exit mobile version