ನವದೆಹಲಿ: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆಯಲ್ಲಿಯೇ ಬೋಧನೆ ಮಾಡಬೇಕು ಎಂಬ ಕುರಿತು ಸಂಸದೀಯ ಸಮಿತಿ ಶಿಫಾರಸು ಮಾಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ (Narendra Modi) ಮೋದಿ ಅವರೂ “ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಿ” ಎಂದು ಕರೆ ನೀಡಿದ್ದಾರೆ. ಹಾಗೆಯೇ, “ಇಂಗ್ಲಿಷ್ ಒಂದು ಮಾಧ್ಯಮ ಅಷ್ಟೆ, ಅದು ಬೌದ್ಧಿಕ ಸಾಮರ್ಥ್ಯದ ಅಳತೆಗೋಲು ಅಲ್ಲ” ಎಂದೂ ಹೇಳಿದ್ದಾರೆ.
ಗುಜರಾತ್‌ನ ಗಾಂಧಿನಗರದಲ್ಲಿ ಆಯೋಜಿಸಿದ್ದ ಮಿಷನ್ ಸ್ಕೂಲ್ಸ್ ಆಪ್ ಎಕ್ಸಲೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮೊದಲು ಬೌದ್ಧಿಕ ಸಾಮರ್ಥ್ಯಕ್ಕೆ ಇಂಗ್ಲಿಷ್ ಮಾನದಂಡವಾಗಿತ್ತು. ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡುವವರು ಬುದ್ಧಿಜೀವಿಗಳು ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ, ಈಗ ಇಂಗ್ಲಿಷ್ ಈಗ ಕೇವಲ ಸಂವಹನ ಮಾಧ್ಯಮವಾಗಿ ಉಳಿದಿದೆ. ಹಿಂದಿ ಚೆನ್ನಾಗಿ ಮಾತನಾಡಲು, ಓದಲು, ಬರೆಯಲು ಬಂದು, ಇಂಗ್ಲಿಷ್‌ನಲ್ಲಿ ಉತ್ತಮವಾಗಿಲ್ಲ ಎಂದರೆ ಯಾರೂ ತಾವು ಹಿಂದುಳಿದೆವು ಎಂಬುದಾಗಿ ಭಾವಿಸುವ ಅಗತ್ಯವಿಲ್ಲ” ಎಂದಿದ್ದಾರೆ.
“ಇಂಗ್ಲಿಷ್ ಸಂವಹನ ಸೇತುವೆಯಾಗುವ ಬದಲು ಅದು ಬೌದ್ಧಿಕ ಸಾಮರ್ಥ್ಯ ಅಳೆಯುವ ಮಾಪನವಾಗಿದೆ. ಎಷ್ಟೋ ಗ್ರಾಮೀಣ ಯುವ ಪ್ರತಿಭೆಗಳು ಇಂಗ್ಲಿಷ್ ಮೇಲೆ ಹಿಡಿತವಿಲ್ಲ ಎಂಬ ಕಾರಣಕ್ಕಾಗಿ ಡಾಕ್ಟರ್, ಎಂಜಿನಿಯರ್ ಆಗುವುದಿಲ್ಲ. ಅಷ್ಟರಮಟ್ಟಿಗೆ ನಾವು ಇಂಗ್ಲಿಷ್‌ಗೆ ಗುಲಾಮರಾಗಿದ್ದೇವೆ. ಇಂತಹ ಮನಸ್ಥಿತಿಯೇ ತೊಲಗಬೇಕು ಎಂಬ ಕಾರಣಕ್ಕಾಗಿ ನೂತನ ಶಿಕ್ಷಣ ನೀತಿ (NEP) ಜಾರಿಗೆ ತಂದಿದ್ದೇವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಔಷಧದ ಮೇಲೆ ಶ್ರೀ ಹರಿ ಎಂದು ಬರೆಯುವ ಜತೆಗೆ ಹೆಸರು ಹಿಂದಿಯಲ್ಲಿರಲಿ, ಇದು ಸಿಎಂ ಚೌಹಾಣ್ ಭಾಷಾ ಪ್ರೇಮ