ನವದೆಹಲಿ: 26/11 ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್‌ಗೂ ಮುಕ್ತ ಮತ್ತು ನ್ಯಾಯ ಸಮ್ಮತ ವಿಚಾರಣೆಗೆ ಅವಕಾಶ ನೀಡಲಾಗಿತ್ತು. ಆದರೆ, ನನ್ನ ವಿಷಯದಲ್ಲಿ ಹಾಗಾಗುತ್ತಿಲ್ಲ ಎಂದು ಹವಾಲಾ ಹಗರಣದಲ್ಲಿ ಜೈಲುಪಾಲಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ಸಚಿವ ಸತ್ಯೇಂದ್ರ ಜೈನ್ (Satyendar Jain) ಕೋರ್ಟ್‌ಗೆ ಹೇಳಿದ್ದಾರೆ.
ತಿಹಾರ್ ಜೈಲಿಗೆ ಬಂದಾಗಿನಿಂದ ನನ್ನ ತೂಕ 23 ಕೆ.ಜಿ. ಕಡಿಮೆಯಾಗಿದೆ. ಸರಿಯಾದ ಆಹಾರ ಮತ್ತು ವೈದ್ಯಕೀಯ ತಪಾಸಣೆಯನ್ನು ನಿರಾಕರಿಸಲಾಗುತ್ತಿದೆ. ಕೋರ್ಟ್ ಅನುಸಾರ ಪಡೆದ ಸೌಲಭ್ಯದ ಹೊರತಾಗಿಯೂ ಜಾರಿ ನಿರ್ದೇಶನಾಲಯವು(ಇ.ಡಿ) ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದೆ. ಆ ಮೂಲಕ ನನ್ನ ಬಗ್ಗೆ ಪೂರ್ವಾಗ್ರಹ ಅಭಿಪ್ರಾಯ ಮೂಡುವಂತೆ ಮಾಡಲಾಗುತ್ತಿದೆ. ಪ್ರತಿ ನಿಮಿಷವು ಇ.ಡಿ.ಯಿಂದಾಗಿ ನಾನು ಅವಮಾನಿತಗೊಳ್ಳುತ್ತಿದ್ದೇನೆ ಎಂದು ಕೋರ್ಟ್‌ಗೆ ಸತ್ಯೇಂದ್ರ ಜೈನ್ ತಿಳಿಸಿದರು.
ಮಾರಣಹೋಮ ನಡೆಸಿದ 26/11 ಮುಂಬೈ ದಾಳಿಯ ಭಯೋತ್ಪಾದಕ ಅಜ್ಮಲ್ ಕಸಬ್‌ಗೂ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ನನ್ನ ವಿಷಯದಲ್ಲಿ ಹಾಗಾಗುತ್ತಿಲ್ಲ. ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡುವ ಮೂಲಕ ಪೂರ್ವಾಗ್ರಹ ಅಭಿಪ್ರಾಯ ಮೂಡುವಂತೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ | Satyendra Jain | ಜೈಲಿನಲ್ಲಿ ಆಪ್‌ನ ಸತ್ಯೇಂದ್ರ ಜೈನ್ ಐಷಾರಾಮಿ ಜೀವನ, ಜೈಲಾಧಿಕಾರಿ ಸಸ್ಪೆಂಡ್