ಅಯೋಧ್ಯೆ: ಜನವರಿ 22ರಂದು ಲೋಕಾರ್ಪಣೆಯಾದ ರಾಮ ಮಂದಿರವು (Ayodhya Ram Mandir) ಇನ್ನು ಮುಂದೆ ನಿತ್ಯ ಮಧ್ಯಾಹ್ನ ಒಂದು ಗಂಟೆ ಮುಚ್ಚಲಿದೆ ಎಂದು ದೇಗುಲದ ಮುಖ್ಯ ಅರ್ಚಕರು ಘೋಷಣೆ ಮಾಡಿದ್ದಾರೆ(chief priest). ಪ್ರಾಣ ಪ್ರತಿಷ್ಠಾಪನೆಯ (Pran Pratishta) ಬಳಿಕ, ರಾಮ ದೇವರ (Ram Lalla) ದರ್ಶನಕ್ಕೆ ಆಗಮಿಸುತ್ತಿರುವ ಭಕ್ತಾಧಿಗಳ ಸಂಖ್ಯೆ ಹೆಚ್ಚಿದೆ. ಆ ಕಾರಣಕ್ಕಾಗಿ ದೇವರ ದರ್ಶನದ ಸಮಯವನ್ನು ಟ್ರಸ್ಟ್ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ವಿಸ್ತರಿಸಿತ್ತು.
ಜನವರಿ 23ರಿಂದ ದೇವರಿಗೆ ಬೆಳಗಿನ ಆಚರಣೆಗಳು ಮುಂಜಾನೆ 4 ಗಂಟೆಗೆ ಪ್ರಾರಂಭವಾಗುತ್ತದೆ, ನಂತರ ಭಕ್ತರಿಗೆ ‘ದರ್ಶನ’ಕ್ಕಾಗಿ ಎರಡು ಗಂಟೆಗಳ ಕಾಯುವ ಅವಧಿ ಇದ್ದು, ಈ ವೇಳಾಪಟ್ಟಿ ರಾತ್ರಿ 10ರವರೆಗೆ ಮುಂದುವರಿಯುತ್ತದೆ.
ಶ್ರೀ ರಾಮ ಲಲ್ಲಾ ಐದು ವರ್ಷದ ಮಗುವಾಗಿದ್ದು, ಇಷ್ಟು ಗಂಟೆಗಳ ಕಾಲ ಎಚ್ಚರವಾಗಿರುವ ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಬಾಲ ದೇವರಿಗೆ ಸ್ವಲ್ಪ ವಿಶ್ರಾಂತಿ ನೀಡಲು, ದೇವಾಲಯದ ಬಾಗಿಲುಗಳನ್ನು ಮುಚ್ಚಲು ಟ್ರಸ್ಟ್ ನಿರ್ಧರಿಸಿದೆ. ಮಧ್ಯಾಹ್ನ 12:30 ರಿಂದ 1:30 ರವರೆಗೆ ದೇವರು ವಿಶ್ರಾಂತಿ ಪಡೆಯುತ್ತಾನೆ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದರು.
ಯೋಗಿ ನೇತೃತ್ವದಲ್ಲಿ ಆಯೋಧ್ಯೆಗೆ ಭೇಟಿ ನೀಡಿದ ಉತ್ತರ ಪ್ರದೇಶ ಶಾಸಕರು
ಉತ್ತರ ಪ್ರದೇಶದ ಸ್ಪೀಕರ್ ಸತೀಶ್ ಮಹಾನಾ ಅವರು ಆಯೋಜಿಸಿದ್ದ ಅಯೋಧ್ಯೆ ರಾಮ ಮಂದಿರ (Ram Mandir) ಪ್ರವಾಸದ ಭಾಗವಾಗಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಶಾಸಕರು ಮತ್ತು ಎಂಎಲ್ಸಿಗಳು ಭಾನುವಾರ ಅಯೋಧ್ಯೆಯ ರಾಮ ಮಂದಿರದ ದರ್ಶನ ಮಾಡಿದರು. ಬಿಜೆಪಿ ಅಲ್ಲದೆ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ರಾಷ್ಟ್ರೀಯ ಲೋಕ ದಳ (ಆರ್ಎಲ್ಡಿ) ಕಾರ್ಯಕರ್ತರು ಭಾನುವಾರ ದೇವಾಲಯ ಪಟ್ಟಣಕ್ಕೆ ಪ್ರಯಾಣ ಬೆಳೆಸಿದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರವಾಸ ತಪ್ಪಿಸಿಕೊಂಡಿದ್ದಾರೆ. ಹೀಗಾಗಿ ಅವರ ಪಕ್ಷದ ಶಾಸಕರು ಗೈರುಹಾಜರಾಗಿದ್ದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಹಾನಾ ಅವರು ಶಾಸಕರನ್ನು ರಾಮ ಮಂದಿರ ಸಂಕೀರ್ಣಕ್ಕೆ ಕರೆದೊಯ್ದರು, ಸಿಎಂ ಪುಣೆಯಿಂದ ಅಯೋಧ್ಯೆಗೆ ವಿಮಾನದ ಮೂಲಕ ಆಗಮಿಸಿದರು. ಮಹಾನಾ ಅವರು ಲಕ್ನೋದಿಂದ ಅಯೋಧ್ಯೆಗೆ 10 ಬಸ್ಗಳಲ್ಲಿ ಶಾಸಕರನ್ನು ಮುನ್ನಡೆಸಿದರು. ಕಾಂಗ್ರೆಸ್ ಶಾಸಕ ಆರಾಧನಾ ಮಿಶ್ರಾ ಮೋನಾ ಮತ್ತು ಬಿಎಸ್ಪಿ ಶಾಸಕ ಉಮಾಶಂಕರ್ ಸಿಂಗ್ ಮತ್ತು ಆರ್ಎಲ್ಡಿ ಶಾಸಕರು ಮಹಾನಾ ಅವರೊಂದಿಗೆ ಪ್ರಯಾಣಿಸಿದರು.
ಅಖಿಲೇಶ್ ಯಾದವ್ ಶನಿವಾರ ವಿಧಾನಸಭೆಯಲ್ಲಿ ಸ್ಪೀಕರ್ಗೆ ಹೀಗೆ ಹೇಳಿದ್ದರು: “ನಿಮ್ಮ ಆಹ್ವಾನದ ಮೇರೆಗೆ ನಾನು ಅಯೋಧ್ಯೆಗೆ ಹೋಗುವುದಿಲ್ಲ. ರಾಮ್ ಲಲ್ಲಾ ನನ್ನನ್ನು ಕರೆದಾಗ ನಾನು ಹೋಗುತ್ತೇನೆ. ಮೊದಲು ನಾನು ಶಿವನ ಆರಾಧನಾ ಮಾಡುತ್ತೇನೆ. ನಂತರ ನನ್ನ ಇಡೀ ಕುಟುಂಬದೊಂದಿಗೆ ಅಯೋಧ್ಯೆಗೆ ಹೋಗುತ್ತೇನೆ” ಎಂದು ಹೇಳಿದ್ದಾರೆ.
ಯಾದವ್ ಹೋಗಲು ನಿರ್ಧರಿಸಿದಾಗ ಎಲ್ಲಾ ಎಸ್ಪಿ ಶಾಸಕರು ಅಯೋಧ್ಯೆಗೆ ಹೋಗುತ್ತಾರೆ ಎಂದು ಮೂಲಗಳು ತಿಳಿಸಿವೆ. ಎಸ್ಪಿ ಶಾಸಕರ ಅನುಪಸ್ಥಿತಿಯನ್ನು ಬಿಜೆಪಿ ಟೀಕಿಸಿದ್ದು, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, 1990ರಲ್ಲಿ ರಾಮಭಕ್ತರ ಮೇಲೆ ಗುಂಡು ಹಾರಿಸಲು ಆದೇಶಿಸಿದವರು ಇವರೇ ಎಂದು ಕಿಡಿಕಾರಿದ್ದಾರೆ.
ಎಸ್ಪಿ ಶಾಸಕರೊಂದಿಗೆ ಯಾದವ್ ಅವರನ್ನು ಆಹ್ವಾನಿಸಿದ್ದೆ ಆದರೆ ದುರದೃಷ್ಟವಶಾತ್ ಅವರು ಆಹ್ವಾನವನ್ನು ತಿರಸ್ಕರಿಸಿದರು ಎಂದು ಮಹಾನಾ ಹೇಳಿದ್ದಾರೆ. ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠಾನ ಸಮಾರಂಭದ ಆಹ್ವಾನವನ್ನು ಯಾದವ್ ಈ ಹಿಂದೆ ತಿರಸ್ಕರಿಸಿದ್ದರು. ಅಯೋಧ್ಯೆಯಲ್ಲಿ, ಸಿಎಂ ಮತ್ತು ಸ್ಪೀಕರ್, ಶಾಸಕರೊಂದಿಗೆ ಹನುಮಾನ್ ಗರ್ಹಿ ದೇವಾಲಯ ಮತ್ತು ರಾಮ್ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ರಾಮ್ ಲಲ್ಲಾ ದರ್ಶನ ಪಡೆಯಲು ಮತ್ತು ದೇವಾಲಯದ ಸಂಕೀರ್ಣದಲ್ಲಿ ಭೋಗ್ ಸೇವಿಸಲು ನಾಲ್ಕು ಗಂಟೆಗಳ ಕಾಲ ಕಳೆಯಲಿದ್ದಾರೆ.
ಈ ಸುದ್ದಿಯನ್ನೂ ಓದಿ : Ayodhya Ram Mandir: ರಾಮ ಮಂದಿರದ ಕನಸು ನನಸು ಮಾಡಿದ್ದಕ್ಕೆ ಮೋದಿಗೆ ಧನ್ಯವಾದ ತಿಳಿಸಿದ ಶಿಲ್ಪಾ ಶೆಟ್ಟಿ; ಪತ್ರ ವೈರಲ್