Site icon Vistara News

Amit Shah | ದೇಶದ ಪ್ರತಿ ರಾಜ್ಯದಲ್ಲೂ 2024ರ ವೇಳೆಗೆ ಎನ್‌ಐಎ ಕಚೇರಿ, ಅಮಿತ್‌ ಶಾ ಘೋಷಣೆ

If congress has evidence against adani than go to court, Says Amit Shah

ಚಂಡೀಗಢ: ಉಗ್ರ ಕೃತ್ಯಗಳ ಪ್ರಕರಣಗಳ ಕುರಿತ ತನಿಖೆಗೆ ಬಲ ನೀಡುವ ದಿಸೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಪ್ರಮುಖ ಘೋಷಣೆ ಮಾಡಿದ್ದಾರೆ. 2024ರ ವೇಳೆಗೆ ದೇಶದ ಪ್ರತಿಯೊಂದು ರಾಜ್ಯಗಳಲ್ಲೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಘಟಕ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ಹರಿಯಾಣದಲ್ಲಿ ಗುರುವಾರದಿಂದ ಆರಂಭವಾದ ಎರಡು ದಿನಗಳ ಚಿಂತನಾ ಶಿಬಿರದಲ್ಲಿ ಮಾತನಾಡಿದ ಅವರು, “ದೇಶದಲ್ಲಿ ಉಗ್ರ ಕೃತ್ಯಗಳ ಪ್ರಕರಣಗಳ ಕುರಿತು ತನಿಖೆಗೆ ಚುರುಕು ನೀಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಅಲ್ಲದೆ, ಆಯಾ ರಾಜ್ಯ ಸರ್ಕಾರಗಳ ಅನುಮತಿ ಇಲ್ಲದೆ ತನಿಖೆ ನಡೆಸುವ ಅಧಿಕಾರ ನೀಡಲಾಗಿದೆ. ಹಾಗೆಯೇ, ಎರಡು ವರ್ಷದಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಎನ್‌ಐಎ ಘಟಕ ಸ್ಥಾಪಿಸುವ ಮೂಲಕ ತನಿಖೆಗೆ ಮತ್ತಷ್ಟು ವೇಗ ನೀಡಲಾಗುವುದು” ಎಂದು ತಿಳಿಸಿದರು. ಸದ್ಯ ದೇಶದ 12 ನಗರಗಳಲ್ಲಿ ಎನ್‌ಐಎ ಘಟಕಗಳಿವೆ.

ಅಪರಾಧ ನಿಗ್ರಹಕ್ಕೆ ಜಂಟಿ ಯೋಜನೆ

“ದೇಶದಲ್ಲಿ ವಿವಿಧ ರೀತಿಯ ಅಪರಾಧಗಳನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಜಂಟಿ ಯೋಜನೆ ರೂಪಿಸುತ್ತಿದೆ. ಸೈಬರ್‌ ಅಪರಾಧ, ಮಾದಕ ವಸ್ತು ನಿಯಂತ್ರಣ, ಗಡಿ ಭಯೋತ್ಪಾದನೆ ನಿಗ್ರಹ ಹಾಗೂ ದೇಶದ್ರೋಹ ಸೇರಿ ಹಲವು ಅಪರಾಧಗಳನ್ನು ನಿಗ್ರಹಿಸುವ ದಿಸೆಯಲ್ಲಿ ಜಂಟಿ ಯೋಜನೆ ರೂಪಿಸಲಾಗುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ | ಪಿಎಫ್​ಐ ಆಯ್ತು, ಈಗ ಇನ್ನೊಂದು ಕಾರ್ಯಾಚರಣೆಗೆ ಇಳಿದ ಎನ್​ಐಎ; 3 ರಾಜ್ಯಗಳ, 50 ಸ್ಥಳಗಳಲ್ಲಿ ರೇಡ್​​

Exit mobile version