Site icon Vistara News

RSS | ಭಾರತದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಹಿಂದೂ: ಆರೆಸ್ಸೆಸ್ ಸರಸಂಘಚಾಲಕ ಮೋಹನ್‌ ಭಾಗವತ್

mohan bhagavat

ಶಿಲ್ಲೋಂಗ್:‌ ಭಾರತದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಹಿಂದೂಗಳೇ (RSS) ಆಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್‌ ಭಾಗವತ್‌ ಅವರು ಹೇಳಿದ್ದಾರೆ.

ಹಿಂದೂ ಧರ್ಮ ಎಂದರೆ ಒಂದು ಮತವಲ್ಲ, ಇದು ಜೀವನ ವಿಧಾನ ಎಂದು ಶಿಲ್ಲೋಂಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ತಿಳಿಸಿದರು. ಹಿಮಾಲಯದಿಂದ ಹಿಂದೂ ಮಹಾಸಾಗರದ ತನಕ, ಸಿಂಧೂ ನದಿ ದಂಡೆಯಲ್ಲಿ ಹರಡಿರುವ ಭಾರತದಲ್ಲಿ ವಾಸಿಸುತ್ತಿರುವ ಎಲ್ಲರನ್ನೂ ಸಾಂಪ್ರದಾಯಿಕವಾಗಿ ಹಿಂದೂಗಳು ಎನ್ನುತ್ತಾರೆ. ಮೊಗಲು ಇಸ್ಲಾಮ್‌ ಅನ್ನೂ, ಬ್ರಿಟಿಷರು ಕ್ರೈಸ್ತ ಮತವನ್ನು ಪ್ರಚುರಪಡಿಸಿದರೂ, ಹಿಂದೂಗಳು ಮೊದಲೇ ಇಲ್ಲಿದ್ದರು ಎಂದರು.

ಹಿಂದೂ ಧರ್ಮದ ಬಗ್ಗೆ ಆರೆಸ್ಸೆಸ್‌ನ ನಿಲುವನ್ನು ಪ್ರತಿಪಾದಿಸಿದ ಅವರು, ಹಿಂದೂಗಳು ಎಂದರೆ ಭಾರತಮಾತೆಯ ಎಲ್ಲ ಮಕ್ಕಳೂ ಆಗಿದ್ದಾರೆ. ಹಾಗೂ ಭಾರತೀಯರು ಪೂರ್ವಿಕರು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಬಾಳಿ ಬದುಕಿದವರು ಎಂದು ವಿವರಿಸಿದರು.

ಮತಾಂತರದ ಭೀತಿಯಿಂದ ಹೊರಗೆ ಬರಬೇಕು, ಹಿಂದೂ ಯಾವತ್ತೂ ಬದಲಾಗುವುದಿಲ್ಲ, ಏಕೆಂದರೆ ಭಾರತದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿದ್ದಾರೆ. ಭಾರತ ಎಂದರೆ ಪಾಶ್ಚಿಮಾತ್ಯ ಪರಿಕಲ್ಪನೆಯ ದೇಶವಲ್ಲ, ಅನಾದಿ ಕಾಲದಿಂದಲೂ ಭಾರತವು ಸಾಂಸ್ಕೃತಿಕ ರಾಷ್ಟ್ರವಾಗಿತ್ತು. ಹಿಂದೂ ಧರ್ಮ ಮಾನವೀಯತೆಯನ್ನು ಜಗತ್ತಿಗೆ ಬೋಧಿಸಿದೆ ಎಂದು ವಿವರಿಸಿದರು.

ಆರೆಸ್ಸೆಸ್‌ನ ಮೇಘಾಲಯದ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಲವು ಹಿಂದೂಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಕ್ರೈಸ್ತ ಮತೀಯರ ಸಂಖ್ಯೆ ಹೆಚ್ಚಿರುವ ಮೇಘಾಲಯದಲ್ಲಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ.

Exit mobile version