Site icon Vistara News

Narendra Modi: ಮೋದಿ ಕರುಣಾಮಯಿ: ಶ್ಲಾಘಿಸಿದ ಗುಲಾಂ ನಬಿ ಆಜಾದ್

Ghulam Nabi Azad

Hinduism Much Older Than Islam, Indian Muslims Are A Result Of Conversion; Says Ghulam Nabi Azad

ನವ ದೆಹಲಿ: ಮಾಜಿ ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ʼʼನಾನು ಮಾಡಿದ್ದಕ್ಕೆ ಹೋಲಿಸಿದರೆ, ಪ್ರಧಾನಿ ಮೋದಿ ಅವರು ನನ್ನ ಬಗ್ಗೆ ತುಂಬ ಕರುಣಾಮಯಿಯಾಗಿ ನಡೆದುಕೊಂಡಿದ್ದಾರೆʼʼ ಎಂದು ಅವರು ಹೇಳಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ತಮ್ಮ ಹಾಗೂ ಮೋದಿ ಬಾಂಧವ್ಯವನ್ನು ಪ್ರಸ್ತಾಪಿಸಿದ್ದಾರೆ. ʼʼನಾನು ಮೋದಿ ಅವರನ್ನು ಗೌರವಿಸಲೇಬೇಕು. ನಾನು ಮಾಡಿದ್ದನ್ನು ನೋಡಿದರೆ, ಅವರು ನನ್ನ ಬಗ್ಗೆ ತುಂಬಾ ಮೃದುಮನಸ್ಸಿನವರಾಗಿದ್ದರು. ಪ್ರತಿಪಕ್ಷದ ನಾಯಕನಾಗಿದ್ದು ನಾನು ಅವರನ್ನು ಯಾವುದೇ ವಿಚಾರದಲ್ಲಿ ಎದುರಿಸುವುದನ್ನು ಬಿಟ್ಟಿರಲಿಲ್ಲ. ಆರ್ಟಿಕಲ್‌ 370 ಇರಬಹುದು, ಸಿಎಎ ಅಥವಾ ಹಿಜಾಬ್‌ ವಿಚಾರ ಇರಬಹುದು; ಹಲವಾರು ವಿಧೇಯಕಗಳು ಸೋತುಹೋಗುವಂತೆ ಸದನದಲ್ಲಿ ಮಾಡಿದ್ದೇನೆ. ಆದರೆ ಅವರು ಮುತ್ಸದ್ಧಿಯಂತೆ ವರ್ತಿಸಿದ್ದು, ನನ್ನ ಮೇಲೆ ಯಾವುದೇ ಬಗೆಯ ಸೇಡು ತೀರಿಸಿಕೊಂಡಿಲ್ಲʼʼ ಎಂದು ಗುಲಾಂ ಪ್ರಶಂಸಿಸಿದ್ದಾರೆ.

ಆಜಾದ್‌ ಅವರು ಮೋದಿಯವರನ್ನು ಶ್ಲಾಘಿಸುತ್ತಿರುವುದು ಇದೇ ಮೊದಲಲ್ಲ. 2021ರಲ್ಲಿ ಅವರು ʼಪ್ರಧಾನಿ ಮೋದಿ ತಮ್ಮ ಹಿನ್ನೆಲೆಯನ್ನು ಅಡಗಿಸಿಟ್ಟಿಲ್ಲ. ತಮ್ಮ ಪೂರ್ವೇತಿಹಾಸದ ಬಗ್ಗೆ ಅವರು ಹೆಮ್ಮೆ ಹೊಂದಿದ್ದಾರೆ. ಹಳ್ಳಿಯ ಹಾಗೂ ಟೀ ಮಾರುತ್ತಿದ್ದ ಹಿನ್ನೆಲೆಯ ಬಗೆಗ ಹೇಳಿಕೊಂಡಿದ್ದಾರೆ. ನಾವು ರಾಜಕೀಯ ಶತ್ರುಗಳಾದರೂ ಅದನ್ನು ಮೆಚ್ಚುತ್ತೇನೆʼ ಎಂದಿದ್ದರು.

2022ರಲ್ಲಿ ʼಮೋದಿಯವರು ಕಠಿಣ ಮನುಷ್ಯ ಎಂದು ತಿಳಿದಿದ್ದೆ. ಆದರೆ ಈಗ ನನ್ನ ಅಭಿಪ್ರಾಯ ಬದಲಾಗಿದೆʼ ಎಂದಿದ್ದರು. ಗುಲಾಂ ಅವರು ಸಂಸತ್ತಿನಿಂದ ನಿವೃತ್ತರಾದಾಗ, ಮೋದಿಯವರು ಭಾವನಾತ್ಮಕ ಭಾಷಣ ಮಾಡಿದ್ದರು.

ಗುಲಾಂ ಅವರು ಕಾಂಗ್ರೆಸ್‌ನ ಎಲ್ಲ ಸ್ಥಾನಗಳಿಗೆ ಕಳೆದ ಆಗಸ್ಟ್‌ನಲ್ಲಿ ರಾಜೀನಾಮೆ ನೀಡಿದ್ದಾರೆ. ಪಕ್ಷದ ವರಿಷ್ಠರನ್ನು, ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಕೂಡ ಕಟುವಾಗಿ ಟೀಕಿಸಿ ಹೊರಬಂದಿದ್ದರು. ʼಪಕ್ಷದ ಆಂತರಿಕ ಚುನಾವಣೆ ಹೆಸರಿನಲ್ಲಿ ವಂಚಿಸಲಾಗುತ್ತಿದೆʼ ಎಂದು ಟೀಕಿಸಿದ್ದರು.

Exit mobile version