Site icon Vistara News

India Bloc Meeting: ಇಂಡಿಯಾ ಕೂಟದ ಸಭೆಯಲ್ಲಿ ‘ಕೈ’ ಮಾಜಿ ನಾಯಕ ಕಪಿಲ್ ಸಿಬಲ್ ಪ್ರತ್ಯಕ್ಷ, ಕಾಂಗ್ರೆಸ್ ಆಕ್ಷೇಪ

Kapil Sibal In India bloc Meeting

ಮುಂಬೈ, ಮಹಾರಾಷ್ಟ್ರ: ಪ್ರತಿಪಕ್ಷಗಳ (Opposition Parties) ಇಂಡಿಯಾ ಕೂಟದ ಮೂರನೇ ಸಭೆಯ (INDIA Bloc Meeting) ಎರಡನೇ ದಿನವಾದ ಶುಕ್ರವಾರ, ಕಾಂಗ್ರೆಸ್‌ನ ಮಾಜಿ ನಾಯಕ ಕಪಿಲ್ ಸಿಬಲ್ (Ex Congress Leader Kapil Sibal) ಅವರು ಕಾಣಿಸಿಕೊಂಡು ಕೆಲವು ಕಾಲ ಗೊಂದಲಕ್ಕೆ ಕಾರಣರಾದರು. ಕಪಿಲ್ ಸಿಬಲ್ ಅವರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಅಧಿಕೃತ ಆಹ್ವಾನ ಇರಲಿಲ್ಲ. ಹಾಗಿದ್ದೂ ಅವರು ದಿಢೀರ್‌ನೇ ಸಭೆಯಲ್ಲಿ ಪಾಲ್ಗೊಂಡಿದ್ದು ಕಾಂಗ್ರೆಸ್‌ನ (Congress Party) ಅವರ ಮಾಜಿ ಸಹೋದ್ಯೋಗಿಗಳಿಗೆ ಇರಸು ಮುರಸು ಉಂಟಾಯಿತು ಎಂದು ತಿಳಿದು ಬಂದಿದೆ.

ಹಿರಿಯ ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್ ಅವರು ವಿರೋಧ ಪಕ್ಷದ ನಾಯಕರ ಫೋಟೋ ಶೂಟ್ ಮೊದಲು ಮಹಾರಾಷ್ಟ್ರದ ಮಾಜಿ ಸಚಿವ ಉದ್ಧವ್ ಠಾಕ್ರೆ ಅವರಿಗೆ ಸಿಬಲ್ ಅವರ ಉಪಸ್ಥಿತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಶಿವಸೇನೆಯ ಉದ್ಧವ್ ಠಾಕ್ರೆ ಬಣವೇ ಮುಂಬೈನಲ್ಲಿ ಪ್ರತಿಪಕ್ಷಗಳ ಈ ಮೂರನೇ ಸಭೆಯನ್ನು ಆಯೋಜಿಸಿದೆ.

ಈ ಸುದ್ದಿಯನ್ನೂ ಓದಿ: INDIA Bloc Meeting: ಚುನಾವಣೆಯಲ್ಲಿ ಸಾಧ್ಯವಾದಷ್ಟು ಒಂದಾಗಿ ಸ್ಪರ್ಧೆ! ಇಂಡಿಯಾ ಕೂಟ ನಿರ್ಣಯ

ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು. ಮುಂದಿನ ವರ್ಷದ ಚುನಾವಣೆಗೆ ಮುಂಚಿತವಾಗಿ ಎಲ್ಲಾ ವಿರೋಧ ರಾಜಕಾರಣಿಗಳನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿರುವ ಸಭೆಯಲ್ಲಿ ಸಿಬಲ್ ಅವರ ಉಪಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ವೇಣುಗೋಪಾಲ್ ಮನವೊಲಿಸಿದರು. ಸಿಬಲ್ ಉಪಸ್ಥಿತಿಯ ಬಗ್ಗೆ ತಮಗೇನೂ ಆಕ್ಷೇಪ ಇಲ್ಲ ಎಂದು ರಾಹುಲ್ ಗಾಂಧಿ ಕೂಡ ಹೇಳಿದ್ದರಿಂದ ಪ್ರತಿಪಕ್ಷಗಳ ನಾಯಕರ ಸಾಲಿನಲ್ಲಿ ಸಿಬಲ್ ಕೂಡ ಫೋಟೋಗೆ ಪೋಸ್ ನೀಡಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version