ಗಾಂಧಿನಗರ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳಲ್ಲೂ ಪಕ್ಷಾಂತರ ಪರ್ವ ಆರಂಭವಾಗಿದೆ. ಲೋಕಸಭೆ ಟಿಕೆಟ್ ಸಿಗದಿರುವ ಕುರಿತು ಮುನ್ಸೂಚನೆ ಪಡೆಯುತ್ತಲೇ ರಾಜಕೀಯ ನಾಯಕರು ಬೇರೆ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಗುಜರಾತ್ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಾಧ್ಯಕ್ಷ ಅರ್ಜುನ್ ಮೊಡ್ವಾಡಿಯಾ (Arjun Modhwadia) ಅವರು ಕಾಂಗ್ರೆಸ್ ತೊರೆದಿದ್ದಾರೆ. “ಭಗವಾನ್ ಶ್ರೀರಾಮನಿಗೆ (Lord Ram) ಕಾಂಗ್ರೆಸ್ ಅವಮಾನ ಮಾಡಿರುವ ಕಾರಣ ಪಕ್ಷ ತೊರೆದಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅರ್ಜುನ್ ಮೊಡ್ವಾಡಿಯಾ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. “ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ ಕುರಿತು ಜನವರಿ 11ರಂದೇ ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ. ಪ್ರಭು ಶ್ರೀರಾಮನು ಹಿಂದುಗಳಿಗೆ ಮಾತ್ರ ಪೂಜ್ಯನೀಯವಾಗಿಲ್ಲ. ರಾಮನು ಇಡೀ ಭಾರತದ ಅಸ್ಮಿತೆಯಾಗಿದ್ದಾನೆ. ಆದರೆ, ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಬಹಿಷ್ಕರಿಸುವ ಮೂಲಕ ಕಾಂಗ್ರೆಸ್ ರಾಮನ ಭಕ್ತರಿಗೆ ಅವಮಾನ ಮಾಡಿದೆ” ಎಂದು ದೂರಿದ್ದಾರೆ.
Gujarat Congress leader Arjun Modhwadia resigns from the Congress party.
— ANI (@ANI) March 4, 2024
His letter to party chief Mallikarjun Kharge reads, "…Prabhu Ram is not just Pujaniya to Hindus, but he is the Aastha of Bharat. Declining the invitation to witness pran pratishtha mahotsav has hurt the… pic.twitter.com/jHCpn6nOD1
“ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಕಾಂಗ್ರೆಸ್ ಬಹಿಷ್ಕರಿಸುವ ಮೂಲಕ ದೇಶದ ಜನರ ಭಾವನೆಗಳಿಗೆ ಬೆಲೆ ಕೊಡಲಿಲ್ಲ. ಇದರಿಂದಾಗಿ ನಾವು ಪಕ್ಷದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಆಗುತ್ತಿಲ್ಲ. ಪಕ್ಷದ ಧೋರಣೆಗಳು ನಮಗೆ ಮುಜುಗರ ತಂದಿವೆ. ಅಷ್ಟೇ ಅಲ್ಲ, ನನ್ನ ಪೋರ್‌ಬಂದರ್ ಜಿಲ್ಲೆ ಹಾಗೂ ಇಡೀ ರಾಜ್ಯದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಲು ಆಗುತ್ತಿಲ್ಲ. ಜನರಿಗೆ ಮುಖ ತೋರಿಸಲು ಕೂಡ ಆಗುತ್ತಿಲ್ಲ” ಎಂದು ಅರ್ಜುನ್ ಮೊಡ್ವಾಡಿಯಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕ ಸ್ಥಾನಕ್ಕೂ ಅರ್ಜುನ್ ರಾಜೀನಾಮೆ
Gandhinagar | Gujarat Congress leader Arjun Modhwadia resigns as an MLA of the party. pic.twitter.com/lCclfdP36X
— ANI (@ANI) March 4, 2024
ಇದನ್ನೂ ಓದಿ: FSL Report: ರಾಷ್ಟ್ರ ದ್ರೋಹಿಗಳ ರಕ್ಷಣೆಯೇ ಆದ್ಯತೆಯೇ; ಸಿಎಂ ಸಿದ್ದರಾಮಯ್ಯಗೆ ಬಿ.ವೈ. ವಿಜಯೇಂದ್ರ ಪ್ರಶ್ನೆ
“ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಸ್ಸಾಂನಲ್ಲಿ ಗಲಾಟೆ ಮಾಡಿದರು. ಹಾಗಾಗಿ, ಪಕ್ಷದ ನಾಯಕತ್ವದ ಮೇಲೆ ನನಗೆ ಅಸಮಾಧಾನ ಉಂಟಾಗಿದೆ. ಕಳೆದ 40 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದು, ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಇದಕ್ಕಾಗಿ, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೇನೆ. ಭಾರವಾದ ಮನಸ್ಸಿನಿಂದಲೇ ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡುತ್ತಿದ್ದೇನೆ” ಎಂದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ