ಮುಂಬೈ: ವಿಡಿಯೊಕಾನ್ ಗ್ರೂಪ್‌ಗೆ (Videocon Group) ಅಕ್ರಮವಾಗಿ ಸಾಲ ನೀಡಿ ಐಸಿಐಸಿಐ ಬ್ಯಾಂಕ್‌ಗೆ ಮೂರು ಸಾವಿರ ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚರ್ (Chanda Kochhar) ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಮುಂಬೈನ ವಿಶೇಷ ನ್ಯಾಯಾಲಯವು ಮೂರು ದಿನ ಸಿಬಿಐ ಕಸ್ಟಡಿಗೆ ವಹಿಸಿದೆ.
ಚಂದಾ ಕೊಚ್ಚರ್ ಅವರು ಐಸಿಐಸಿಐ ಬ್ಯಾಂಕ್ ಸಿಇಒ ಹಾಗೂ ಎಂಡಿ ಆಗಿದ್ದಾಗ 2009ರಿಂದ 2011ರ ಅವಧಿಯಲ್ಲಿ ವಿಡಿಯೊಕಾನ್ ಗ್ರೂಪ್‌ಗೆ 3,250 ಕೋಟಿ ರೂ. ಸಾಲ ನೀಡಿದ್ದಾರೆ. ಇದರಿಂದ ಬ್ಯಾಂಕ್‌ಗೆ ಇಷ್ಟು ಹಣ ನಷ್ಟವಾಗಿದೆ ಎಂಬ ಆರೋಪವಿದೆ. ಆರೋಪ ಕೇಳಿಬಂದ ಬಳಿಕ ಚಂದಾ ಕೊಚ್ಚರ್ ಅವರು 2018ರಲ್ಲಿ ಹುದ್ದೆ ತೊರೆದಿದ್ದರು.
ವಿಡಿಯೊಕಾನ್ ಪ್ರಮೋಟರ್ ವೇಣುಗೋಪಾಲ್ ಧೂತ್ ಅವರು ನ್ಯೂಪವರ್ ರಿನಿವೇಬಲ್ ಕಂಪನಿಯಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದಾರೆ. ಈ ಕಂಪನಿಯಲ್ಲಿ ದೀಪಕ್ ಕೊಚ್ಚರ್ ಶೇ.50ರಷ್ಟು ಷೇರು ಹೊಂದಿದ್ದಾರೆ. ಹಾಗಾಗಿ, ವಂಚನೆ ಪ್ರಕರಣದಲ್ಲಿ ಇಬ್ಬರದ್ದೂ ಪಾಲಿದೆ ಎಂಬ ಆರೋಪವಿರುವ ಕಾರಣ ಸಿಬಿಐ ವಿಚಾರಣೆ ನಡೆಸುತ್ತಿದೆ. ಇಬ್ಬರನ್ನೂ ಸಿಬಿಐ ಅಧಿಕಾರಿಗಳು ಶುಕ್ರವಾರ ರಾತ್ರಿ (ಡಿಸೆಂಬರ್ 23)ರಂದು ಬಂಧಿಸಿದ್ದಾರೆ.
ಇದನ್ನೂ ಓದಿ | Bank Fraud | ಹೂಡಿಕೆ ಮಾಡಿದ್ದ ಹಣ ವಾಪಸ್ ಕೇಳಿದರೆ ಧಮ್ಕಿ; ಕೋಆಪರೇಟಿವ್ ಬ್ಯಾಂಕ್‌ನಿಂದ ವಂಚನೆ ಆರೋಪ