ಬೆಂಗಳೂರು: 2024ರ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದಿದ್ದು, ಎಕ್ಸಿಟ್ ಪೋಲ್ಸ್ ಪ್ರಕಟವಾಗಿವೆ. ಮತಗಟ್ಟೆ ಸಮೀಕ್ಷೆಗಳ ಪ್ರಕಾರ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದ್ದರೆ, ತೆಲಂಗಾಣದ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರಕ್ಕೇರುವ ಸಾಧ್ಯತೆಗಳಿವೆ. ಮಧ್ಯ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಫೋಟೋ ಫಿನಿಶ್ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ. ಮಿಜೋರಾಮ್‌ನಲ್ಲಿ ಅತಂತ್ರ ವಿಧಾನಸಭೆಯನ್ನು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ.
230 ಕ್ಷೇತ್ರಗಳನ್ನು ಹೊಂದಿರುವ ಮಧ್ಯ ಪ್ರದೇಶದಲ್ಲಿ ಅಧಿಕಾರಕ್ಕೇರಲು 116 ಸ್ಥಾನಗಳು ಬೇಕು. ಆದರೆ, ಬಹುತೇಕ ಎಕ್ಸಿಟ್ ಪೋಲ್‌ಗಳು ಬಿಜೆಪಿ ಮತ್ತು ಕಾಂಗ್ರೆಸ್ ತುರುಸಿನ ಸ್ಪರ್ಧೆಯನ್ನು ನಿರೀಕ್ಷಿಸಿವೆ. ಹಾಗಾಗಿ, ರಿಸಲ್ಟ್ ಡೇ ದಿನ ಅನಿರೀಕ್ಷಿತ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ. ಹಾಗೆಯೇ, ಎಕ್ಸಿಟ್ ಪೋಲ್ ಪ್ರಕಾರ, ತೆಲಂಗಾಣ ಅಚ್ಚರಿಯ ಫಲಿತಾಂಶವನ್ನು ನೀಡಿದೆ. ಕಾಂಗ್ರೆಸ್ ಪುಟಿದೆದಿದ್ದು, ಬಿಆರ್‌ಎಸ್‌ಗೆ ಹಿನ್ನಡೆಯಾಗುತ್ತಿದೆ. ಕೆಲವು ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ಗೆ ಪೂರ್ಣ ಬಹುಮತ ಕೂಡ ದೊರೆಯಲಿದೆ. ತೆಲಂಗಾಣದಲ್ಲಿ 119 ಬಲಾಬಲ ಇದ್ದು, ಬಹುಮತಕ್ಕೆ 60 ಕ್ಷೇತ್ರಗಳನ್ನು ಗೆಲ್ಲಬೇಕು.
ಇನ್ನು ಛತ್ತೀಸ್‌ಗಢ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಕೆಲವು ಸಮೀಕ್ಷೆಗಳು ಬಿಜೆಪಿ-ಕಾಂಗ್ರೆಸ್ ಫೋಟೋ ಫಿನಿಶ್ ಫಲಿತಾಂಶವನ್ನು ಊಹಿಸಿವೆ. ಮತ್ತೆ ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಪೂರ್ಣ ಬಹುಮತ ನೀಡಿವೆ. ಛತ್ತೀಸ್‌ಗಢ 90 ಸ್ಥಾನಗಳನ್ನು ಹೊಂದಿದ್ದು, ಅಧಿಕಾರ ಪಡೆಯಲು 46 ಕ್ಷೇತ್ರಗಳನ್ನು ಗೆಲ್ಲಬೇಕು. 40 ಕ್ಷೇತ್ರಗಳನ್ನು ಹೊಂದಿರುವ ಮಿಜೋರಾಮ್‌ನಲ್ಲಿ ಅಧಿಕಾರ ಪಡೆಯಲು 21 ಕ್ಷೇತ್ರಗಳನ್ನು ಗೆಲ್ಲಬೇಕು. ಎಕ್ಸಿಟ್ ಪೋಲ್ ಪ್ರಕಾರ ಅತಂತ್ರ ವಿಧಾನಸಭೆ ಆಗುವ ನಿರೀಕ್ಷೆ ಇದೆ.
ವಿವಿಧ ಮತಗಟ್ಟೆ ಸಮೀಕ್ಷೆಗಳ ವಿವರ ಇಲ್ಲಿದೆ…
ಮಧ್ಯ ಪ್ರದೇಶ
ಒಟ್ಟು ಸ್ಥಾನ: 230, ಮ್ಯಾಜಿಕ್ ನಂಬರ್: 116
ಸಿಎನ್ಎನ್ ಎಕ್ಸಿಟ್ ಪೋಲ್ಸ್
ಬಿಜೆಪಿ-112
ಕಾಂಗ್ರೆಸ್-113
ಬಿಎಸ್ಪಿ-0
ರಿಪಬ್ಲಿಕ್ ಟಿವಿ
ಬಿಜೆಪಿ; 118-130
ಕಾಂಗ್ರೆಸ್; 97-107
ಟಿವಿ9 ಭರತವರ್ಷ
ಬಿಜೆಪಿ; 106-116
ಕಾಂಗ್ರೆಸ್;111-121
ರಾಜಸ್ಥಾನ
ಒಟ್ಟು ಸ್ಥಾನ: 200, ಮ್ಯಾಜಿಕ್ ನಂಬರ್: 101
ಸಿಎನ್ಎನ್ ಎಕ್ಸಿಟ್ ಪೋಲ್
ಬಿಜೆಪಿ- 111
ಕಾಂಗ್ರೆಸ್- 74
ಬಿಎಸ್ಪಿ- 0
ಇತರರು- 14
ಜನ್ ಕಿ ಬಾತ್
ಬಿಜೆಪಿ; 100-112
ಕಾಂಗ್ರೆಸ್; 62-85
ಟಿವಿ 9 ಭರತವರ್ಷ ಮತ್ತು ಪೋಲ್‌ಸ್ಟಾರ್ಟ್
ಬಿಜೆಪಿ;100-110
ಕಾಂಗ್ರೆಸ್; 90-100
ಛತ್ತೀಸ್‌ಗಢ
ಒಟ್ಟು ಕ್ಷೇತ್ರ: 90 ಮ್ಯಾಜಿಕ್ ನಂಬರ್: 46
ಸಿಎನ್ಎನ್
ಬಿಜೆಪಿ-40
ಕಾಂಗ್ರೆಸ್- 47
ಇತರರು-03
ಇಂಡಿಯಾ ಟುಡೇ
ಬಿಜೆಪಿ- 36-46
ಕಾಂಗ್ರೆಸ್- 40-50
ಇತರರು- 1-5
ಇಂಡಿಯಾ ಟಿವಿ-ಸಿಎನ್‌ಎಕ್ಸ್
ಬಿಜೆಪಿ-30-40
ಕಾಂಗ್ರೆಸ್-46-56
ಜನ್ ಕಿ ಬಾತ್
ಬಿಜೆಪಿ; 34-45
ಕಾಂಗ್ರೆಸ್: 42-53
ತೆಲಂಗಾಣ
ಒಟ್ಟು ಕ್ಷೇತ್ರ: 119, ಮ್ಯಾಜಿಕ್ ನಂಬರ್: 60
ಸಿಎನ್ಎನ್ ಎಕ್ಸಿಟ್ ಪೋಲ್
ಬಿಆರ್‌ಎಸ್-48
ಕಾಂಗ್ರೆಸ್- 56
ಬಿಜೆಪಿ-0
ಇತರರು-1
ಜನ್ ಕಿ ಬಾತ್
ಬಿಆರ್‌ಎಸ್- 45-55
ಕಾಂಗ್ರೆಸ್- 48-64
ಬಿಜೆಪಿ- 7-13
ಎಐಎಂಐಎಂ- 4-7
ಮಿಜೋರಾಮ್
ಒಟ್ಟು ಕ್ಷೇತ್ರ: 40, ಮ್ಯಾಜಿಕ್ ನಂಬರ್: 21
ಜನ್ ಕಿ ಬಾತ್:
ಎಂಎನ್‌ಪಿ-14
ಜೆಪಿಎಂ-15-25
ಕಾಂಗ್ರೆಸ್-5-9
ಬಿಜೆಪಿ-02