Site icon Vistara News

Morbi Bridge Collapse | ಪ್ರತ್ಯಕ್ಷದರ್ಶಿಗಳ ಕಣ್ಣಲ್ಲಿ ಮೋರ್ಬಿ ಸೇತುವೆ ದುರಂತದ ಕ್ಷಣಗಳು

Morbi

ನವದೆಹಲಿ: ಭಾನುವಾರ ಸಂಜೆ ಸಂಭವಿಸಿದ ಮೋರ್ಬಿ ಬ್ರಿಡ್ಜ್ ದುರಂತ (Morbi Bridge Collapse) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮೃತರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ದುರಂತಕ್ಕೆ ಸಾಕ್ಷಿಯಾದವರ ಮಾತುಗಳಲ್ಲಿ ಇಡೀ ಭೀಕರತೆಯನ್ನು ತಿಳಿಯಬಹುದಾಗಿದೆ. ಹಲವರ ನರಳಾಟ, ಸಂಬಂಧಿಕರ ಹುಡಕಾಟ, ರಕ್ಷಣೆಗೆ ಮೊರೆ, ಆಕ್ರಂದನ ಎಲ್ಲವೂ ಮನಕಲುಕುವಂತೆ ಮಾಡುತ್ತದೆ.

ದುರಂತಕ್ಕೆ ಸಾಕ್ಷಿಯಾದ ಚಹ ಮಾರಾಟಗಾರನ ಮಾತಿನಲ್ಲಿ ಹೇಳುವುದಾದರೆ, ಅದು ಎಂದಿನಂತಿದ್ದ ಮಾಮೂಲಿ ದಿನ. 140 ವರ್ಷಗಳಷ್ಟು ಹಳೆಯದಾದ ಈ ಸೇತುವೆಯನ್ನು ಆಗಷ್ಟೇ ಜೀರ್ಣೋದ್ಧಾರ ಮಾಡಿದ್ದರಿಂದ ಜನರು ಕೂಡ ಹೆಚ್ಚಿನ ಉಮೇದಿನಲ್ಲೇ ಬಂದಿದ್ದರು. ಸೇತುವೆ ಕುಸಿತ ಎಂಬುದು ಕೆಲವೇ ಕ್ಷಣಗಳಲ್ಲಿ ನನ್ನ ಕಣ್ಣು ಮಂದೆಯೇ ನಡೆಯಿತು. ಸೇತುವೆಯನ್ನು ಹಿಡಿದುಕೊಂಡವರು ಜಾರಿ ಜಾರಿ ನೀರಿಗೆ ಬೀಳುತ್ತಿದ್ದರು. ನನ್ನ ಕಣ್ಣ ಮುಂದೆಯೇ ಗರ್ಭಿಣಿ ಮೃತಪಟ್ಟ ಕ್ಷಣವನ್ನು ಮರೆಯಲಾಗುವುದಿಲ್ಲ. ಹಲವರನ್ನು ರಕ್ಷಿಸಿದ ಹೊರತಾಗಿಯೂ ಆಸ್ಪತ್ರೆಯಲ್ಲಿ ಬಹಳಷ್ಟು ಮಂದಿ ಮೃತಪಟ್ಟಿರುವುದಕ್ಕೆ ಅವರು ಕಂಬನಿ ಮಿಡಿದರು.

ಮತ್ತೊಬ್ಬ ವ್ಯಕ್ತಿಯ ಈ ಘಟನೆಯನ್ನು ವಿವರಿಸಿದ್ದು ಹೀಗೆ- ಇಂಥ ದುರಂತವನ್ನು ನಾನು ನನ್ನ ಜೀವಮಾನದಲ್ಲೇ ನೋಡಿಲ್ಲ. ಚಿಕ್ಕ ಬಾಲಕಿಯೊಬ್ಬಳ ನೀರನಲ್ಲಿ ಮುಳುಗುತ್ತಿದ್ದಳು. ನಾನು ಮತ್ತು ಮತ್ತೆ ಹಲವರು ಸೇರಿ ಅವಳನ್ನು ರಕ್ಷಿಸಿದೆವು. ಆದರೆ, ಅವಳ ಗಂಭೀರ ಪರಿಸ್ಥಿತಿಯನ್ನು ನೋಡಿ ಓಡೋಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದೆವು. ಈ ಘಟನೆಯಿಂದಾಗಿ ನಾನು ಈಗಲೂ ನಡುಗುತ್ತಿದ್ದೇನೆ.

ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ನೆರವು ನೀಡುತ್ತಿರುವ ಹಸೀನಾ ಬೆಹನ್ ಮತ್ತು ಅವರ ಇಬ್ಬರು ಮಕ್ಕಳು ಈ ದುರ್ಘಟನೆ ಶಾಕ್‌ನಿಂದ ಹೊರ ಬಂದಿಲ್ಲ. ಅತ್ತು ಅತ್ತು ಹಸೀನಾ ಅವರ ಕಣ್ಣಗಳು ಉಬ್ಬಿಕೊಂಡಿದ್ದವು. ಸಾವಿನ ಕೊನೆಕ್ಷಣದಲ್ಲಿದ್ದ ಮಕ್ಕಳನ್ನು ನೋಡಿ ಅವರಿಗೆ ಕರಳು ಕಿವಿಚಿದಂತಾಗುತ್ತಿತ್ತು. ಹೀಗೆ ಅಲ್ಲಿರುವ ಅನೇಕತರು ತಮ್ಮ ಮುಂದೆ ನಡೆದ ಈ ದುರ್ಘಟನೆಯನ್ನು ಮಾಧ್ಯಮಗಳೆದರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Morbi Bridge Collapse | ಮೋರ್ಬಿ ದುರ್ಘಟನೆಯಲ್ಲಿ ಬಿಜೆಪಿ ಸಂಸದ ಕುಟುಂಬದ 12 ಮಂದಿ ಸಾವು

Exit mobile version