ನವದೆಹಲಿ: ದೇಶದಲ್ಲಿ ಕೋಟ್ಯಂತರ ಜನರ ನೆಚ್ಚಿನ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ (Facebook) ಹಾಗೂ ಇನ್‌ಸ್ಟಾಗ್ರಾಂಗಳ (Instagram) ಸರ್ವರ್ ಮತ್ತೆ ಡೌನ್ (Server Down) ಆಗಿದೆ. ಮೊಬೈಲ್ ಆ್ಯಪ್ ಹಾಗೂ ಕಂಪ್ಯೂಟರ್‌ನಲ್ಲಿ ಕೂಡ ಲಾಗಿನ್ ಆಗುತ್ತಿಲ್ಲ ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ನೂರಾರು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ವಾರಗಳ ಹಿಂದಷ್ಟೇ ಎರಡೂ ಜಾಲತಾಣಗಳ ಸರ್ವರ್ ಡೌನ್ ಆಗಿತ್ತು. ಈಗ ಮತ್ತೆ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ.
ಇಂಟರ್‌ನೆಟ್ ಟ್ರಾಫಿಕ್ ಮೇಲೆ ನಿಗಾ ಇರಿಸುವ ಡೌನ್ ಡಿಟೆಕ್ಟರ್ ಸಂಸ್ಥೆಯು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಬಳಕೆದಾರರ ಸಮಸ್ಯೆ ಕುರಿತು ಮಾಹಿತಿ ನೀಡಿದೆ. ಇನ್‌ಸ್ಟಾಂಗ್ರಾಂನಲ್ಲಿ ಹೊಸ ಫೀಡ್‌ಗಳನ್ನು ವೀಕ್ಷಿಸಲು ರಿಫ್ರೆಶ್ ಮಾಡಲು ಆಗುತ್ತಿಲ್ಲ. ಲಾಗಿನ್ ಸಮಸ್ಯೆ ಎದುರಾದರೆ ಹೊಸ ಪಾಸ್‌ವರ್ಡ್ ಸೆಟ್ ಮಾಡಲು ಆಗುತ್ತಿಲ್ಲ. ಫೇಸ್‌ಬುಕ್ ಕೂಡ ಲಾಗಿನ್ ಆಗುತ್ತಿಲ್ಲ. ಒಂದಷ್ಟು ಜನ, ಲಾಗಿನ್ ಇದ್ದರೂ ಹೊಸ ಪೋಸ್ಟ್‌ಗಳನ್ನು ವೀಕ್ಷಿಸಲು ಆಗುತ್ತಿಲ್ಲ ಎಂಬುದಾಗಿ ಎಕ್ಸ್ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
#instagramdownis instagram down AGAIN or am i crazy……….#instagramdown pic.twitter.com/SqXkDENLq0
— Devansh | #CSKhive (@devansh__x) March 20, 2024
ಭಾರತ ಸೇರಿ ಹಲವು ದೇಶಗಳಲ್ಲಿ ಸಾವಿರಾರು ಬಳಕೆದಾರರು ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಇದುವರೆಗೆ ಎರಡೂ ಕಂಪನಿಗಳ ಮಾತೃಸಂಸ್ಥೆಯಾದ ಮೆಟಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ, ಎಕ್ಸ್‌ನಲ್ಲಿ ಜನ, “ಮತ್ತೆ ಇನ್‌ಸ್ಟಾಗ್ರಾಂ ಡೌನ್ ಆಗಿದೆಯೇ?”, “ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಏಕೆ ಲಾಗಿನ್ ಆಗುತ್ತಿಲ್ಲ” ಎಂಬುದು ಸೇರಿ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಇನ್ನೂ ಕೆಲವರು, ಸಾಮಾಜಿಕ ಜಾಲತಾಣಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
#instagramdown again ?
— Infinity Partnerr India (@InfnityPartnerr) March 20, 2024
ಇದನ್ನೂ ಓದಿ: YouTube: ಫೇಸ್‌ಬುಕ್ ಸಮಸ್ಯೆ ಬಗೆಹರಿದ ಬೆನ್ನಲ್ಲೇ ಯುಟ್ಯೂಬ್ ಸರ್ವರ್ ಡೌನ್, ಜನರಿಗೆ ಪರದಾಟ
ಕೆಲ ದಿನಗಳ ಹಿಂದಷ್ಟೇ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಯುಟ್ಯೂಬ್ ಸರ್ವರ್ ಡೌನ್ ಆಗಿದ್ದವು. ಮಾರ್ಚ್ 5ರಂದು ಸಂಜೆ ಮೊದಲು ಫೇಸ್‌ಬುಕ್ ಸರ್ವರ್ ಡೌನ್ ಆಯಿತು. ಇದಾದ ಕೆಲ ಹೊತ್ತಿನಲ್ಲಿಯೇ ಇನ್‌ಸ್ಟಾಗ್ರಾಂ ಬಳಕೆದಾರರಿಗೂ ಸರ್ವರ್ ಡೌನ್ ಬಿಸಿ ತಾಕಿತು. ಮೊಬೈಲ್, ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್ ಸೇರಿ ಎಲ್ಲೆಡೆ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳು ಲಾಗ್‌ಔಟ್ ಆಗಿದ್ದವು. ಬಳಿಕ ಲಾಗ್‌ಇನ್ ಕೂಡ ಆಗಲಿಲ್ಲ. ಇದಾದ ಕೆಲವೇ ನಿಮಿಷಗಳಲ್ಲಿ ಯುಟ್ಯೂಬ್ ಸರ್ವರ್ ಕೂಡ ಡೌನ್ ಆಗಿದ್ದು, ಜಾಲತಾಣಗಳ ಪ್ರಿಯರ ಅಸಮಾಧಾನ ಹೆಚ್ಚಾಗುವಂತೆ ಮಾಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ