Site icon Vistara News

Fact Check: ಮೊಬೈಲ್‌ಗಳಿಗೆ ಸರ್ಕಾರ ಹೊಸ ಭದ್ರತಾ ಮಾನದಂಡ ರಚಿಸುತ್ತಿಲ್ಲವೇ?

Social media must act against deepfake video Says Union Minister Rajeev Chandrashekhar

ನವದೆಹಲಿ: ಮೊಬೈಲ್‌ ಫೋನ್‌ಗಳಲ್ಲಿರುವ ಪ್ರಿ ಇನ್‌ಸ್ಟಾಲ್ಡ್ ಆ್ಯಪ್‌ಗಳಿಂದ (pre-installed apps) ಡೇಟಾ ಕದಿಯುವ ಹಾಗೂ ಗೂಢಚಾರ ನಡೆಸುವ ಸಾಧ್ಯತೆಗಳಿ ಇರುವುದರಿಂದ ಕೇಂದ್ರ ಸರ್ಕಾರವು ಮೊಬೈಲ್ ಫೋನುಗಳ ಭದ್ರತಾ ಮಾನದಂಡವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂದಾಗಿದೆ ಎಂಬ ಸುದ್ದಿ ಭಾರೀ ಸಂಚಲನ ಸೃಷ್ಟಿಸಿತ್ತು. ಆದರೆ, ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಕ್ನಾಲಜಿ ಸಚಿವ ರಾಜೀವ್ ಚಂದ್ರಶೇಖರ್ ಅವರು ಇದು ಆಧಾರ ರಹಿತ ಸುದ್ದಿ ಎಂದು ಹೇಳಿದ್ದಾರೆ(Fact Check).

ರಾಯಿಟರ್ಸ್ ಸುದ್ದಿಯೊಂದಿಗೆ ಟ್ವೀಟ್ ಮಾಡಿರುವ ರಾಜೀವ್ ಚಂದ್ರಶೇಖರ್ ಅವರು, ಈ ನ್ಯೂಸ್ ಸ್ಟೋರಿ ತಪ್ಪು. BIS ಸ್ಟ್ಯಾಂಡರ್ಡ್ IS17737 (ಭಾಗ-3) 2021 ರ ಮೊಬೈಲ್ ಭದ್ರತಾ ಮಾರ್ಗಸೂಚಿಗಳ ಮೇಲೆ ಸಚಿವಾಲಯ ಮತ್ತು ಉದ್ಯಮಗಳ ನಡುವೆ ಸಮಾಲೋಚನೆ ನಡೆಯುತ್ತಿದೆ. ಇದನ್ನೇ ತಪ್ಪಾಗಿ ಭಾವಿಸಿ, ವರದಿ ಮಾಡಲಾಗಿದೆ. ವರದಿ ಸೂಚಿಸುವಂತೆ ಯಾವುದೇ ಭದ್ರತಾ ಪರೀಕ್ಷೆ ಅಥವಾ ದಾಳಿಯನ್ನು ಕೈಗೊಳ್ಳುತ್ತಿಲ್ಲ. @GoI_MeitY ವ್ಯವಹಾರವನ್ನು ಸುಲಭಗೊಳಿಸಲು ಶೇ.100 ಬದ್ಧವಾಗಿದೆ. 2026ರ ವೇಳೆಗೆ 300 ಶತಕೋಟಿ ಡಾಲರ್ ಗುರಿ ತಲುಪಲಿದೆ ಎಂದು ಹೇಳಿದ್ದಾರೆ. ಪಿಐಬಿ ಫ್ಯಾಕ್ಟ್ ಚೆಕ್ ಟ್ವಿಟರ್ ಹ್ಯಾಂಡಲ್ ಕೂಡ ರಾಯ್ಟರ್ಸ್ ಮಾಡಿದ ವರದಿ ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದು ಹೇಳಿದೆ.

ರಾಜೀವ್ ಚಂದ್ರಶೇಖರ್ ಅವರ ಟ್ವೀಟ್

ರಾಯ್ಟರ್ಸ್ ವರದಿ ಮಾಡಿದ್ದು ಏನು?

ಮೊಬೈಲ್ ಫೋನ್‌ ಬಳಕೆದಾರರಿಗೆ ಸೂಕ್ತ ಭದ್ರತಾ ಗುಣಮಟ್ಟವನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸ ವ್ಯವಸ್ಥೆಯನ್ನು ರೂಪಿಸುವತ್ತ ಚಿಂತಿಸುತ್ತಿದೆ. ಮೊಬೈಲ್‌ ಫೋನ್‌ಗಳಲ್ಲಿರುವ ಪ್ರಿ ಇನ್‌ಸ್ಟಾಲ್ಡ್ ಆ್ಯಪ್‌ಗಳಿಂದ (pre-installed apps) ಡೇಟಾ ಕದಿಯುವ ಹಾಗೂ ಗೂಢಚಾರ ನಡೆಸುವ ಸಾಧ್ಯತೆಗಳು ಇರುವುದರಿಂದ ಕೇಂದ್ರ ಸರ್ಕಾರವು ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂದಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ(Meity) ಈ ಬಗ್ಗೆ ಟ್ವೀಟ್ ಮಾಡಿ, ಮೊಬೈಲ್ ಫೋನುಗಳ ಸುರಕ್ಷತೆಯನ್ನು ಹೆಚ್ಚಿಸುವುದು ಮಹತ್ವದ್ದಾಗಿದೆ ಮತ್ತು ಸಾಕಷ್ಟು ಭದ್ರತಾ ಮಾನದಂಡಗಳನ್ನು ಹೆಚ್ಚಿಸುವ ಸಂಬಂಧ ಮೊಬೈಲ್ ಕಂಪನಿಗಳ ಜತೆಗೆ ಸರ್ಕಾರವು ಮಾತುಕತೆ ನಡೆಸುತ್ತಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.

ಭಾರತವು ಎಲೆಕ್ಟ್ರಾನಿಕ್ಸ್‌ನ ಜಾಗತಿಕ ಮೌಲ್ಯ ಸರಪಳಿಯಲ್ಲಿ ವಿಶ್ವಾಸಾರ್ಹ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಮೊಬೈಲ್ ಫೋನ್‌ಗಳು ಮತ್ತು ಅಪ್ಲಿಕೇಶನ್‌ಗಳ ಸುರಕ್ಷತೆಯು ಮುಖ್ಯವಾಗಿದೆ. ಸಾಕಷ್ಟು ಭದ್ರತಾ ಮಾನದಂಡಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಎಂದು ಮೆಯ್ಟಿ(Meity) ಟ್ವೀಟ್ ಮಾಡಿದೆ.

ಇದನ್ನೂ ಓದಿ: Mobile Phone Export | ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಕೋಟಿ ರೂ. ಮೊಬೈಲ್ ಫೋನ್ ರಫ್ತು ಗುರಿ: ರಾಜೀವ್ ಚಂದ್ರಶೇಖರ್

ಪ್ರಿ ಇನ್‌ಸ್ಟಾಲ್ಡ್ ಆ್ಯಪ್‌ಗಳ ಮೂಲಕ ಡೇಟಾ ಕದಿಯುವುದು ಮತ್ತು ಗೂಢಚಾರ ನಡೆಸುತ್ತಿರುವ ಬಗ್ಗೆ ಸಾಕಷ್ಟು ಬಳಕೆದಾರರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಭದ್ರತಾ ಮಾನದಂಡಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂದಾಗಿದೆ. ಡೇಟಾ ದುರುಪಯೋಗವನ್ನು ಪರಿಶೀಲಿಸುವ ಸರ್ಕಾರದ ಉದ್ದೇಶಕ್ಕೆ ನಮ್ಮ ಬೆಂಬಲವಿದೆ ಎಂದು ಮೊಬೈಲ್ ಫೋನ್ ತಯಾರಕರು ಹೇಳಿಕೊಂಡಿದ್ದಾರೆ. ಆದರೆ, ಈ ಪ್ರಕ್ರಿಯೆಯು ಹೊಸ ಹ್ಯಾಂಡ್‌ಸೆಟ್‌ಗಳ ಬಿಡುಗಡೆಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು. ಪ್ರಿ ಇನ್‌ಸ್ಟಾಲ್ಡ್‌‌ಗಳಿಂದ ಬರುವ ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಹೀಗಿದೆ

Exit mobile version