ನವದೆಹಲಿ: 90ರ ದಶಕದ ಮಕ್ಕಳಿಗೆ ರೆನಾಲ್ಡ್ಸ್ ಪೆನ್ (Reynolds Pen) ಮೇಲಿನ ಮೋಹ ಎಂಥದ್ದು ಎಂಬುದನ್ನು ಯಾರೂ ಅರಿಯಲಾರರು. ಅಂದಿನ ಶಾಲೆಗೆ ಹೋಗುವ ಪ್ರತಿಯೊಬ್ಬ ಮಕ್ಕಳ ಕೈಯಲ್ಲಿ ರೆನಾಲ್ಡ್ಸ್ ಪೆನ್ ಇರಲೇಬೇಕಿತ್ತು. ಅದೊಂದು ರೀತಿಯ ಹೆಮ್ಮೆ. ಆದರೆ, ರೆನಾಲ್ಡ್ಸ್ ಪೆನ್ ಇನ್ನು ಮುಂದೆ ಭಾರತದಲ್ಲಿ (Indian Market) ಸಿಗುವುದಿಲ್ಲ! ಈ ಕಾಡ್ಗಿಚ್ಚಿನಂತೆ ಹಬ್ಬಿ ಬಹಳಷ್ಟು ಜನರು ತಮ್ಮ ಬಾಲ್ಯದ ದಿನಗಳಿಗೆ ಜಾರಿದರು. ಪೆನ್‌ನೊಂದಿಗಿನ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು. ಆದರೆ, ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ರೆನಾಲ್ಡ್ಸ್ ಪೆನ್ ಭಾರತೀಯ ಮಾರುಕಟ್ಟೆಯನ್ನು ತೊರೆಯುವುದಿಲ್ಲ! ಹೌದು, ಕಂಪನಿಯ ಸ್ವತಃ ಈ ರೀತಿಯ ಹೇಳಿಕೆಯನ್ನು ನೀಡಿ, ತಪ್ಪು ವರದಿಯಾಗಿದೆ ಎಂದು ಹೇಳಿದೆ(Fact-Check).
ಸುದ್ದಿ ಹರಡಿದ್ದು ಹೇಗೆ?
ನ್ಯೂ ಇಂಡಿಯಾ ಎಕ್ಸ್‌ಪ್ರೆಸ್ ದಿನ ಪತ್ರಿಕೆಯು ಗುಡ್ ಬೈ ರೆನಾಲ್ಡ್ಸ್ ಎವರೀಬಡೀಸ್ ಚಾಲ್ಡ್‌ಹುಡ್ ಫ್ರೆಂಡ್ ಎಂಬ ಶೀರ್ಷಿಕೆಯಡಿ ವರದಿಯನ್ನು ಪ್ರಕಟಿಸಿತ್ತು. ಈ ವರದಿಯನ್ನು ಎಕ್ಸ್ ವೇದಿಕೆಯಲ್ಲಿ ಷೇರ್ ಆಗಿತ್ತು. ಈ ಸುದ್ದಿ ವ್ಯಾಪಕವಾಗಿ ಹರಡಿ, ರೆನಾಲ್ಡ್ಸ್ ಪೆನ್ ಇನ್ನು ಮುಂದೆ ಭಾರತದಲ್ಲಿ ಸಿಗುವುದಿಲ್ಲ ಎಂಬ ಮಾಹಿತಿಯೂ ಎಲ್ಲಡೆ ಹರಡಿತು. ಕೆಲವರು ರೆನಾಲ್ಡ್ಸ್ ಕಂಪನಿಯು ಸಂಪೂರ್ಣವಾಗಿ ಭಾರತೀಯ ಮಾರುಕಟ್ಟೆಯನ್ನು ತೊರೆಯಲಿದೆ ಎಂಬ ಸುದ್ದಿಯನ್ನು ಹರಡಿದರು.
ಹಾಗಿದ್ದರೆ ರೆನಾಲ್ಡ್ಸ್ ಪೆನ್ ಇನ್ನು ಇರುವುದಿಲ್ಲವೇ?
ರೆನಾಲ್ಡ್ಸ್ ಪೆನ್ ಭಾರತೀಯ ಮಾರುಕಟ್ಟೆಯನ್ನು ತೊರೆಯಲಿದೆ ಎಂಬ ಮಾಹಿತಿ ಜೋರಾಗಿ ಸದ್ದು ಮಾಡುತ್ತಿರುವಂತೆ ಕಂಪನಿಯೇ ಸ್ವತಃ ಹೇಳಿಕೆಯನ್ನು ನೀಡಬೇಕಾದ ಪ್ರಮೇಯ ಉದ್ಬವವಾಯಿತು. ರೆನಾಲ್ಡ್ಸ್ ಪೆನ್ ಭಾರತೀಯ ಮಾರುಕಟ್ಟೆಯನ್ನು ತೊರೆಯಲಿದೆ ಎಂಬ ಸುದ್ದಿ ಸಂಪೂರ್ಣ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಸ್ವತಃ ರೆನಾಲ್ಡ್ಸ್ ಕಂಪನಿಯೇ ಹೇಳಿಕೆಯನ್ನು ನೀಡಿದೆ.
ಈ ಸುದ್ದಿಯನ್ನೂ ಓದಿ: Fact Check Unit: ಪೊಲೀಸರಿಂದಲೇ ಫ್ಯಾಕ್ಟ್ ಚೆಕ್ ಯುನಿಟ್, ಇನ್ನು ಫೇಕ್ ನ್ಯೂಸ್ ಹರಡಿದ್ರೆ ಹುಷಾರ್!
ರೆನಾಲ್ಡ್ಸ್ ಕಂಪನಿ ಹೇಳಿದ್ದೇನು?
ರೆನಾಲ್ಡ್ಸ್ ಪೆನ್ ಕುರಿತು ಇತ್ತೀಚೆಗೆ ಅನೇಕ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಲ್ಲಿನ ಮಾಹಿತಿಯು ತಪ್ಪಾಗಿದೆ. ಭಾರತದಲ್ಲಿ ಸುಮಾರು 45 ವರ್ಷಗಳ ಪರಂಪರೆಯನ್ನು ಹೊಂದಿರುವ ರೆನಾಲ್ಡ್ಸ್ ಗುಣಮಟ್ಟು ಮತ್ತು ಹೊಸತನಕ್ಕೆ ತನ್ನ ಪ್ರಥಮ ಆದ್ಯತೆಯನ್ನು ನೀಡಿದೆ. ಭಾರತದಲ್ಲಿ ರೈಟಿಂಗ್ ಬಿಸಿನೆಸ್ ವಿಸ್ತರಣೆ ಮಾಡುವುದಕ್ಕೆ ನಾವು ಭವಿಷ್ಯವನ್ನು ಹೊಂದಿದ್ದೇವೆ. ಹಾಗಾಗಿ, ಸರಿಯಾದ ಮಾಹಿತಿಗಾಗಿ ನಮ್ಮ ಜಾಲತಾಣ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿನ ನಮ್ಮ ಖಾತೆಗಳನ್ನು ಪರಿಶೀಲಿಸುವಂತೆ ಕೇಳಿಕೊಳ್ಳುತ್ತೇವೆ. ನೀವು ನಮ್ಮಲ್ಲಿ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದೇ ನಮ್ಮ ಆದ್ಯತೆಯಾಗಿದೆ. ನೀವು ತೋರಿದ ಬೆಂಬಲಕ್ಕೆ ಸದಾ ಚಿರಋಣಿ ಎಂದು ರೆನಾಲ್ಡ್ಸ್ ಇಂಡಿಯಾ ಮ್ಯಾನೇಜ್‌ಮೆಂಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.