Site icon Vistara News

Vir Savarkar Row | ಬ್ರಿಟಿಷರಿಗೆ ಗಾಂಧೀಜಿ ವಿಧೇಯರಾಗಿದ್ದರೇ? ರಾಹುಲ್‌ ಹೇಳಿಕೆಗೆ ಫಡ್ನವಿಸ್‌ ತಿರುಗೇಟು ಏನು?

Devendra Fadnavis On Vir Savarkar

ಮುಂಬೈ: ದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅವರ ಕುರಿತು ಮತ್ತೆ ವಿವಾದ ಭುಗಿಲೆದ್ದಿದೆ. ಅದರಲ್ಲೂ, ರಾಹುಲ್‌ ಗಾಂಧಿ ಅವರು ಸಾವರ್ಕರ್‌ (Vir Savarkar Row) ಕುರಿತು ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷ ಶಿವಸೇನೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಇದರ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಿವಿಸ್‌ ಅವರು ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರಿಗೆ ಪತ್ರವೊಂದನ್ನು ಉಲ್ಲೇಖಿಸಿ ರಾಹುಲ್‌ ಗಾಂಧಿ ಅವರಿಗೆ ತಿರುಗೇಟು ನೀಡಿದ್ದಾರೆ.

“ಗೌರವಾನ್ವಿತ ಮಹಾತ್ಮ ಗಾಂಧೀಜಿ ಅವರೂ 1920ರಲ್ಲಿ ಬ್ರಿಟಿಷರಿಗೆ ಪತ್ರದ ಕೊನೆಯಲ್ಲಿ, ನಾನು ನಿಮ್ಮ ವಿಧೇಯ ಸೇವಕ ಎಂಬುದಾಗಿ ಬರೆದಿದ್ದರು. ನೀವು ಸಾವರ್ಕರ್‌ ಪತ್ರ ಬಗ್ಗೆ ಮಾತನಾಡಿದ್ದೀರಿ. ನೀವು ಗಾಂಧೀಜಿ ಅವರು ಬರೆದಿದ್ದ ಪತ್ರವನ್ನು ಓದಿದ್ದೀರಾ? ನಾನೇ ನಿಮಗೆ ಓದಿ ಹೇಳಬೇಕಾ?” ಎಂದಿದ್ದಾರೆ. ಅಲ್ಲದೆ, ಗಾಂಧೀಜಿ ಅವರು ಬರೆದ ಪತ್ರದ ಫೋಟೊಗಳನ್ನು ಟ್ವೀಟ್‌ ಮಾಡಿದ್ದಾರೆ. ‌

ಇದರ ಜತೆಗೆ, ಇಂದಿರಾ ಗಾಂಧಿ ಅವರು ಸಾವರ್ಕರ್‌ ಬಗ್ಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೊಗಳಿರುವುದನ್ನೂ ಫಡ್ನವಿಸ್‌ ಉಲ್ಲೇಖಿಸಿದ್ದಾರೆ. ಇಂದಿರಾ ಗಾಂಧಿ ಬರೆದ ಪತ್ರದಲ್ಲಿ, “ಸಾವರ್ಕರ್‌ ಅವರು ಭಾರತ ಮಾತೆಯ ವೀರ ಪುತ್ರ. ಅವರು ಸ್ವಾತಂತ್ರ್ಯ ಹೋರಾಟದ ಆಧಾರಸ್ತಂಭವಾಗಿದ್ದರು” ಎಂದು ಇಂದಿರಾ ಪತ್ರಗಳನ್ನು ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು?

“ವೀರ ಸಾವರ್ಕರ್‌ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಹಾಗೆಯೇ, ನಾನು ನಿಮ್ಮ ವಿಧೇಯ ಸೇವಕ ಎಂಬುದಾಗಿ ಕ್ಷಮಾಪಣೆ ಕೇಳಿದ್ದರು. ಅವರು ಪತ್ರದಲ್ಲಿ ಸಹಿ ಮಾಡಿರುವ ದಾಖಲೆಯು ನನ್ನ ಬಳಿ ಇದೆ” ಎಂದು ಸುದ್ದಿಗೋಷ್ಠಿಯಲ್ಲಿ ರಾಹುಲ್‌ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ | Veer Savarkar | ರಾಹುಲ್‌ ಗಾಂಧಿ ವಿರುದ್ಧ ವೀರ ಸಾವರ್ಕರ್‌ ಮೊಮ್ಮಗ ಕೇಸ್‌, ಉದ್ಧವ್‌ ಠಾಕ್ರೆ ಕೂಡ ಆಕ್ಷೇಪ

Exit mobile version