Site icon Vistara News

ನಕಲಿ ಜನನ ಪ್ರಮಾಣ ಪತ್ರ ಕೇಸ್: ಎಸ್‌ಪಿ ನಾಯಕ ಅಜಮ್ ಖಾನ್, ಪತ್ನಿ, ಪುತ್ರನಿಗೆ 7 ವರ್ಷ ಜೈಲು ಶಿಕ್ಷೆ

Fake birth Certificate case azam khan and his family get 7 year jail term

ರಾಮಪುರ, ಉತ್ತರ ಪ್ರದೇಶ: ನಕಲಿ ಜನನ ಪ್ರಮಾಣ ಪತ್ರ ಪ್ರಕರಣಕ್ಕೆ (Fake birth Certificate case) ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್(Samajwadi Party leader Azam Khan), ಅವರ ಪತ್ನಿ ತಂಝೀಮ್ ಫಾತಿಮಾ (Tanzeem Fatima) ಮತ್ತು ಪುತ್ರ ಅಬ್ದುಲ್ಲಾ ಅಜಮ್ ಖಾನ್ (Abdullah Azam Khan) ಅವರಿಗೆ ರಾಮಪುರ ನ್ಯಾಯಾಲಯವು (Rampur Court) 7 ವರ್ಷ ಶಿಕ್ಷೆಯನ್ನು ಬುಧವಾರ ಪ್ರಕಟಿಸಿದೆ. ಅಬ್ದುಲ್ಲಾ ಅಜಮ್ ಖಾನ್ ಅವರು ಎರಡು ಜನನ ಪ್ರಮಾಣ ಪತ್ರವನ್ನು ಹೊಂದಿದ್ದಾರೆ.

ಎರಡು ಜನನ ಪ್ರಮಾಣ ಪತ್ರಗಳ ಪೈಕಿ ಮೊದಲನೇ ಜನನ ಪ್ರಮಾಣ ಪತ್ರದ ಮೂಲಕ ಅಜಮ್ ಖಾನ್ ಅವರ ಪುತ್ರ ಅಬ್ದುಲ್ಲಾ ಅಜಮ್ ಖಾನ್ ಅವರು ಪಾಸ್‌ಪೋರ್ಟ್ ಮತ್ತು ವಿದೇಶಿ ಟೂರ್‌ಗಳನ್ನು ಮಾಡುತ್ತಿದ್ದರು. ಎರಡನೇ ಜನ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳಿಗೆ ಬಳಸುತ್ತಿದ್ದರು. ಆದರೆ, ಅಬ್ದುಲ್ಲಾ ಅಜಮ್ ಖಾನ್ ಅವರ ಬಳಿ ಇರುವ ಎರಡೂ ಜನನ ಪ್ರಮಾಣ ಪತ್ರಗಳು ನಕಲಿಯಾಗಿದ್ದು, ವಾಮ ಮಾರ್ಗದಿಂದ ಅವುಗಳನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಮೊದಲೇ ಜನನ ಪ್ರಮಾಣ ಪತ್ರವನ್ನು 2012 ಜೂನ್ 28ರಂದು ರಾಮಪುರದ ನಗರ ಪಾಲಿಕೆ ನೀಡಿದೆ ಮತ್ತು ರಾಮಪುರ ಜನ್ಮಸ್ಥಳ ಎಂಬ ಮಾಹಿತಿಯನ್ನೂ ಒದಗಿಸಲಾಗಿದೆ. ಆದರೆ, 2015ರಲ್ಲಿ ಒದಗಿಸಲಾದ ಜನನ ಪ್ರಮಾಣ ಪತ್ರದಲ್ಲಿ ಜನ್ಮ ಸ್ಥಳವನ್ನು ಲಕ್ನೋ ಎಂದು ನಮೂದಿಸಲಾಗಿದೆ. ಈ ಹಿನ್ನೆಲೆಯಲ್ಲೇ ಅಬ್ದುಲ್ಲಾ ಅಜಮ್ ಖಾನ್ ಹಾಗೂ ಅವರ ತಂದೆ ತಾಯಿ ವಿರುದ್ಧ 420, 467, 468 ಮತ್ತು 471 ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: ಅಜಂ ಖಾನ್‌ ಕೊನೆಗೂ ಜೈಲಿನಿಂದ ಹೊರಕ್ಕೆ; ಸ್ವಾಗತಿಸಲು ಬಾರದ ಅಖಿಲೇಶ್‌ ಯಾದವ್

ದ್ವೇಷ ಭಾಷಣ ಪ್ರಕರಣದಲ್ಲೂ ಶಿಕ್ಷೆ

ನಕಲಿ ಜನನ ಪ್ರಮಾಣ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾಗಿರುವ ಅಜಮ್ ಖಾನ್ ಹಾಗೂ ಅವರ ಪುತ್ರ ಈ ಹಿಂದೆ ದ್ವೇಷ ಭಾಷಣ ಪ್ರಕರಣದಲ್ಲೂ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರಿಬ್ಬರಿಗೂ ರಾಮಪುರ ಕೋರ್ಟ್ 2019ರಲ್ಲಿ ದೋಷಿಗಳು ಎಂದು ತೀರ್ಪು ನೀಡಿದೆ. ಈ ಆರೋಪಗಳ ಜತೆಗೆ ಭೂ ಕಬಳಿಕೆ ಆರೋಪವನ್ನೂ ಅವರು ಎದುರಿಸುತ್ತಿದ್ದಾರೆ.

ಈ ಹಿಂದೆ, ಅಜಂ ಖಾನ್ ಮತ್ತು ಅಬ್ದುಲ್ಲಾ ಅವರ ವಿರುದ್ಧದ ಹಲವಾರು ಪ್ರಕರಣಗಳಿಂದಾಗಿ ಅನರ್ಹಗೊಳ್ಳುವ ಮೊದಲು ರಾಂಪುರ ಜಿಲ್ಲೆಯ ಸುವಾರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version