ನವದೆಹಲಿ: ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ಜತೆಗೆ ಸುಪ್ರೀಂ ಕೋರ್ಟೇ (Supreme Court) ಹೊರಡಿಸಿದೆ ಎನ್ನಲಾದ ನಕಲಿ ಆದೇಶದ ಪ್ರತಿಯೊಂದನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ನಕಲಿ ಆದೇಶದ ಪ್ರತಿ (Fake Court Order) ಸಲ್ಲಿಸಿದ ಕುರಿತು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಆದೇಶಿಸಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಹಾಗೂ ಪಂಕಜ್ ಮಿತ್ತಲ್ ಅವರು ಸ್ಪೆಷಲ್ ಲೀವ್ ಪಿಟಿಷನ್ (SLP) (ಅಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಸುವ ವಿಶೇಷ ಅರ್ಜಿ) ವಿಚಾರಣೆ ವೇಳೆ ಅರ್ಜಿಯ ಜತೆ ನಕಲಿ ಆದೇಶದ ಪ್ರತಿ ಸಲ್ಲಿಸಿರುವುದು ಗೊತ್ತಾಗಿದೆ. ತನಿಖೆ ಬಳಿಕ ಅರ್ಜಿ ಎ ಹಾಗೂ ಬಿ ವಿಭಾಗದಲ್ಲಿ ಸಲ್ಲಿಸಿದ ಆದೇಶದ ಪ್ರತಿಯು ನಕಲಿ ಎಂಬುದು ತಿಳಿದುಬಂದಿದೆ. ಹಾಗಾಗಿ, ನ್ಯಾಯಾಲಯವು ಕ್ರಿಮಿನಲ್ ವಿಚಾರಣೆ ನಡೆಸಲು ಅದೇಶಿಸಿದೆ.
Shocking case of fake order being produced in #SupremeCourt.
— Live Law (@LiveLawIndia) September 28, 2023
In a petition, two orders were produced as annexures. While one order is of dismissal, surprisingly, the other is of allowing the very same petition.
This arouses suspicion of #SupremeCourt, which orders enquiry. pic.twitter.com/oLI14eEObO
ವಕೀಲೆಗೆ ನೋಟಿ ಜಾರಿ
ನ್ಯಾಯಾಂಗ ರಿಜಿಸ್ಟ್ರಾರ್ ವಿಭಾಗವು (Judicial Registrar), ಅರ್ಜಿ ಸಲ್ಲಿಸಿದವರ ವಿರುದ್ಧ ಕ್ರಿಮಿನಲ್ ವಿಚಾರಣೆಯಾಗಬೇಕು. ಹಾಗೆಯೇ, ವಿಚಾರಣೆ ಬಳಿಕ ವಿಸ್ತೃತ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಆದೇಶಿಸಿದೆ. ಅಷ್ಟೇ ಅಲ್ಲ, ನಕಲಿ ಆದೇಶದ ಪ್ರತಿ ಲಗತ್ತಿಸಿರುವುದರ ಹಿಂದೆ ವಕೀಲರ ಕೈವಾಡ ಇರುವ ಶಂಕೆಯೂ ಇದೆ. ಹಾಗಾಗಿ, ವಿಚಾರಣೆಗೆ ಹಾಜರಾಗದ ವಕೀಲೆ ಪ್ರೀತಿ ಮಿಶ್ರಾ ಅವರಿಗೆ ನೋಟಿಸ್ ಕೂಡ ಜಾರಿ ಮಾಡಿದೆ.
“ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆಯಾಗಬೇಕು. ಹಾಗೆಯೇ, ಇದರ ಹಿಂದೆ ವಕೀಲರ ಪಾತ್ರ ಎಷ್ಟಿದೆ ಎಂಬುದರ ಬಗ್ಗೆಯೂ ತನಿಖೆಯಾಗಬೇಕು” ಎಂದು ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ. ಡಿಸೆಂಬರ್ 1ಕ್ಕೆ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠವು ಸ್ಪಷ್ಟಪಡಿಸಿತು. ಆಯಾ ನ್ಯಾಯಾಂಗ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಬಳಿಕ ತನಿಖೆಯ ವರದಿ ಸಲ್ಲಿಕೆಯಾಗುತ್ತದೆ ಎಂದು ತಿಳಿದುಬಂದಿದೆ.