ಲಖನೌ: ಉತ್ತರ ಪ್ರದೇಶದಲ್ಲಿ ಗ್ಯಾಸ್ ಹೀಟರ್ ಆನ್ ಇಟ್ಟು ಮಲಗಿದ ಒಂದೇ ಕುಟುಂಬದ ನಾಲ್ವರು ಚಿರನಿದ್ರೆಗೆ ಜಾರಿದ್ದಾರೆ. ಗ್ಯಾಸ್ ಹೀಟರ್ ಆನ್ (Gas Heater Tragedy) ಇರುವುದನ್ನು ಗಮನಿಸದೆಯೇ ಮಲಗಿದ್ದು, ಗ್ಯಾಸ್ ಸೋರಿಕೆಯಾದ ಕಾರಣ ಉಸಿರುಗಟ್ಟಿ ನಾಲ್ವರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಝಜ್ಜರ್ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಮದರಸಾವೊಂದರಲ್ಲಿ ಕ್ಲರ್ಕ್ ಆಗಿದ್ದ ಆಸಿಫ್ (35), ಪತ್ನಿ ಶಗುಫ್ತಾ (32), ಜೈದ್ (3) ಹಾಗೂ ಮಾಯ್ರಾ (2) ಮೃತರು. ಬೆಳಗ್ಗೆ ಹಾಲು ಹಾಕುವ ವ್ಯಕ್ತಿ ಬಂದು ಬಾಗಿಲು ಬಡಿದಿದ್ದು, ತುಂಬ ಹೊತ್ತಾದರೂ ಪ್ರತಿಕ್ರಿಯೆ ಬಾರದ ಕಾರಣ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಗಿದೆ.
ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಬಳಿಕ ಬಾಗಿಲು ಮುರಿದು ನೋಡಿದ್ದಾಗ ನಾಲ್ವರೂ ಮಲಗಿದ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಎಲ್ಲರೂ ಮೃತಪಟ್ಟಿದ್ದಾರೆ ಎಂಬುದಾಗಿ ವೈದ್ಯರು ಘೋಷಿಸಿದರು.
ಇದನ್ನೂ ಓದಿ | Accident in Khanapur | ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ; ಒಂದೇ ಕುಟುಂಬದ 28 ಜನರಿಗೆ ಗಾಯ