ನವದೆಹಲಿ: ಖ್ಯಾತ ನ್ಯಾಯವಾದಿ ಶಾಂತಿ ಭೂಷಣ್ ಅವರು ಮಂಗಳವಾರ ಸಂಜೆ 7 ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು(Shanti Bhushan Passes Away). ಅವರಿಗೆ 97 ವರ್ಷ ವಯಸ್ಸಾಗಿತ್ತು. ಶಾಂತಿ ಭೂಷಣ್ ಅವರು ಪ್ರಧಾನಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಕೇಂದ್ರ ಕಾನೂನು ಸಚಿವರಾಗಿ 1977ರಿಂದ 79ರವರೆಗೆ ಕಾರ್ಯ ನಿರ್ವಹಿಸಿದ್ದರು.
ಶಾಂತಿ ಭೂಷಣ್ ಅವರು 1980ರಲ್ಲಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಎನ್‌ಜಿಒ ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಅನೇಕ ಪಿಐಎಲ್‌ಗಳನ್ನು ದಾಖಲಿಸಿ, ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಿದ್ದರು. ಶಾಂತಿ ಭೂಷಣ್ ಅವರ ಪುತ್ರ ಪ್ರಶಾಂತ್ ಭೂಷಣ್ ಅವರೂ ಖ್ಯಾತ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ.
ಇದನ್ನೂ ಓದಿ: BBC Documentary on Modi: ಬಿಬಿಸಿ ಸಾಕ್ಷ್ಯ ಚಿತ್ರ ನಿಷೇಧ ಪ್ರಶ್ನಿಸಿ ಪಿಐಎಲ್, ಫೆ.6ಕ್ಕೆ ವಿಚಾರಣೆ ಎಂದ ಸುಪ್ರೀಂ ಕೋರ್ಟ್
1974ರಲ್ಲಿ ಇಂದಿರಾ ಗಾಂಧಿ ಅಧಿಕಾರದಿಂದ ಕೆಳಗಿಳಿಯಲು ಕಾರಣರಾದ ರಾಜ್ ನಾರಾಯಣ್ ಅವರ ಪರವಾಗಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಶಾಂತಿ ಭೂಷಣ್ ಅವರು ವಾದ ಮಾಡಿದ್ದರು. ಇದೊಂದು ಐತಿಹಾಸಿಕ ಘಟನೆಯಾಗಿ ದಾಖಲಾಗಿದೆ. ನಾಗರಿಕ ಸ್ವಾತಂತ್ರ್ಯ ಪ್ರತಿಪಾದಕರಾಗಿದ್ದ ಅವರು ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದರು.