Site icon Vistara News

Rajamouli Speech | ಕುಟುಂಬ, ಜೈಹಿಂದ್‌, ಮೇರಾ ಭಾರತ್‌ ಮಹಾನ್‌; ರಾಜಮೌಳಿ ಭಾಷಣಕ್ಕೆ ಕಂಗನಾ ಸೇರಿ ಹಲವರ ಮೆಚ್ಚುಗೆ

RRR Movie Rajamouli Speech

ನವದೆಹಲಿ: ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರವು ಪ್ರತಿಷ್ಠಿತ 28ನೇ ‌ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನ ‘ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರʼ ಹಾಗೂ ʼನಾಟು ನಾಟುʼ ಹಾಡಿಗೆ ʼಅತ್ಯುತ್ತಮ ಮೂಲ ಗೀತೆʼ ಪ್ರಶಸ್ತಿ ದೊರೆತಿವೆ. ಇದೇ ವೇಳೆ ಪ್ರಶಸ್ತಿ ಸ್ವೀಕರಿಸುವಾಗ ರಾಜಮೌಳಿ ಮಾಡಿದ ಪ್ರಶಸ್ತಿ ಸ್ವೀಕಾರ ಭಾಷಣಕ್ಕೆ (Rajamouli Speech) ಬಾಲಿವುಡ್‌ ನಟಿ ಕಂಗನಾ ರಣಾವತ್‌ ಸೇರಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಲ್ಲರಿಗೂ ನಮಸ್ಕಾರ ಎಂದು ತೆಲುಗಿನಲ್ಲಿ ಹೇಳಿಯೇ ಇಂಗ್ಲಿಷ್‌ನಲ್ಲಿ ಭಾಷಣ ಆರಂಭಿಸಿದ ರಾಜಮೌಳಿ, ತಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಹೆಣ್ಣುಮಕ್ಕಳನ್ನು ನೆನೆದರು. “ನನ್ನ ಜೀವನದಲ್ಲಿ ಹೆಣ್ಣುಮಕ್ಕಳು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ನನ್ನ ತಾಯಿ ರಾಜನಂದಾನಿ ಶಿಕ್ಷಣ ನೀಡಿದರು. ಪುಸ್ತಕ ಕೊಟ್ಟು ಸೃಜನಶೀಲತೆ ಹೆಚ್ಚಿಸಿದರು. ನನ್ನ ನಾದಿನಿ ಶ್ರೀವಲ್ಲಿ ಎರಡನೇ ತಾಯಿಯಂತೆ ಪ್ರೋತ್ಸಾಹಿಸಿದರು. ನನ್ನ ಹೆಂಡತಿ ರಮಾ, ಅವಳಿಲ್ಲದಿದ್ದರೆ ನಾನಿಲ್ಲಿ ಇರುತ್ತಿರಲಿಲ್ಲ. ಇನ್ನು ನನ್ನ ಪುತ್ರಿಯರು, ಅವರು ನಕ್ಕರೆ ಸಾಕು, ನನ್ನ ಜೀವನವೇ ಬೆಳಗಿದಂತೆ” ಎಂದರು. ಹಾಗೆಯೇ, ಕೊನೆಗೆ ಮೇರಾ ಭಾರತ್‌ ಮಹಾನ್‌, ಜೈಹಿಂದ್‌ ಎಂದು ಭಾಷಣ ಮುಗಿಸಿದರು. ಇದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ರಾಜಮೌಳಿ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಂಗನಾ, “ಭಾರತೀಯರು ಹೇಗೆ ಇಷ್ಟನ್ನೆಲ್ಲ ಸಾಧಿಸುತ್ತಾರೆ ಎಂದರೆ, ನಮಗೆ ಬಲಿಷ್ಠವಾದ ಕುಟುಂಬ ವ್ಯವಸ್ಥೆಯ ಸಹಕಾರ ಇರುತ್ತದೆ. ಕುಟುಂಬಗಳಿಂದ ನಾವು ಹಣಕಾಸು, ಭಾವನಾತ್ಮಕ ಬೆಂಬಲ ಪಡೆಯುತ್ತೇವೆ. ಅದರಲ್ಲೂ, ಕುಟುಂಬಗಳನ್ನು ಕಟ್ಟುವಲ್ಲಿ, ಸಂರಕ್ಷಣೆ ಮಾಡುವಲ್ಲಿ ಮಹಿಳೆಯರ ಪಾತ್ರ ದೊಡ್ಡದಿರುತ್ತದೆ” ಎಂದಿದ್ದಾರೆ. ಇನ್ನೂ ಕೆಲವರು, ಮೇರಾ ಭಾರತ್‌ ಮಹಾನ್‌, ಜೈಹಿಂದ್‌ ಎಂದು ಹೇಳಿರುವುದಕ್ಕೆ ಶ್ಲಾಘಿಸಿದ್ದಾರೆ.

ಇದನ್ನೂ ಓದಿ | RRR Movie | ʻಮೇರಾ ಭಾರತ್ ಮಹಾನ್, ಜೈ ಹಿಂದ್ ʼ ಎಂದ ರಾಜಮೌಳಿ: ಸ್ವೀಕಾರ ಭಾಷಣ ಹೇಗಿತ್ತು?

Exit mobile version