Site icon Vistara News

Farmers Protest: 5 ವರ್ಷ ಎಂಎಸ್‌ಪಿ ಆಫರ್‌ಗೆ ರೈತರ ತಿರಸ್ಕಾರ! ನಾಳೆಯಿಂದ ಮತ್ತೆ ದಿಲ್ಲಿ ಚಲೋ ಶುರು

Farmers Leaders

ಚಂಡೀಗಢ: ಐದು ವರ್ಷಗಳ ಎಂಎಸ್‌ಪಿ ಒಪ್ಪಂದದ ಆಫರ್ (5 Year MSP contact offer) ಅನ್ನು ಸಂಯುಕ್ತ ಕಿಸಾನ್ ಮೋರ್ಚಾ(ದಿಲ್ಲಿ ಚಲೋ ಪ್ರತಿಭಟನೆಯಿಂದ ದೂರ ಉಳಿದ ಸಂಘ) ತಿರಸ್ಕರಿಸಿದ ಬೆನ್ನಲ್ಲೇ ‘ದಿಲ್ಲಿ ಚಲೋ’ (Delhi Chalo) ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಗಳು ಕೂಡ ತಿರಸ್ಕರಿಸಿವೆ(Farmers Protest). ಸರ್ಕಾರವು ಮುಂದಿನ ಐದು ವರ್ಷಗಳವರೆಗೆ ಮೆಕ್ಕೆ ಜೋಳ, ಹತ್ತಿ ಮತ್ತು ಮೂರು ನಮೂನೆಯ ಧಾನ್ಯಗಳನ್ನು ಹಳೆಯ ಬೆಂಬಲ ಬೆಲೆ ಖರೀದಿ ಒಪ್ಪಂದದ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಇದೀಗ 200ಕ್ಕೂ ಅಧಿಕ ರೈತ ಸಂಘಟನೆಗಳನ್ನು ಒಳಗೊಂಡಿರುವ ಒಕ್ಕೂಟವು ಈ ಪ್ರಸ್ತಾಪವನ್ನು ತಿರಸ್ಕಿರಿಸಿದ್ದು, ದಿಲ್ಲಿ ಚಲೋ ಚಳವಳಿಯನ್ನು ಬುಧವಾರದಿಂದ ಮುಂದುವರಿಸಲಾಗುವುದು ಎಂದು ಹೇಳಿದೆ.

ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್, ಸರ್ಕಾರದ ಪ್ರಸ್ತಾಪವು ನಮಗೆ ಸ್ವೀಕಾರಾರ್ಹವಲ್ಲ ಮತ್ತು ಪ್ರತಿಭಟನಾನಿರತ ರೈತರು ಬುಧವಾರದಿಂದ ಶಾಂತಿಯುತ ರೀತಿಯಲ್ಲಿ ದೆಹಲಿಯತ್ತ ತಮ್ಮ ಪಾದಯಾತ್ರೆಯನ್ನು ಪುನರಾರಂಭಿಸಲಿದ್ದಾರೆ ಎಂದು ಘೋಷಿಸಿದರು.

ಪ್ರಸ್ತಾವನೆಯನ್ನು ತಿರಸ್ಕರಿಸಲು ಕಾರಣಗಳನ್ನು ವಿವರಿಸಿದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು, ಸರ್ಕಾರವು (ಭಾನುವಾರ ರಾತ್ರಿ) ಪ್ರಸ್ತಾವನೆಯನ್ನು ಮುಂದಿಟ್ಟಿದೆ. ನಾವು ಅದನ್ನು ಅಧ್ಯಯನ ಮಾಡಿದ್ದೇವೆ. ಬೆಂಬಲ ಬೆಲೆಯನ್ನು ಕೇವಲ ಕೇವಲ ಎರಡೋ, ಮೂರಕ್ಕೋ ಅನ್ವಯಿಸುವುದರಲ್ಲಿ ಅರ್ಥವಿಲ್ಲ. ಇತರ ರೈತರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಡಬೇಕು ಎಂದು ಅವರು ಹೇಳಿದರು.

ಆರೋಗ್ಯಕ್ಕೆ ಹಾನಿಕಾರಕವಾಗಿರುವ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರವು ವರ್ಷಕ್ಕೆ 1.75 ಲಕ್ಷ ರೂಪಾಯಿ ವೆಚ್ಚ ಮಾಡುತ್ತದೆ. ಎಣ್ಣೆಕಾಳುಗಳನ್ನು ಬೆಳೆಯಲು ರೈತರಿಗೆ ಸಹಾಯ ಮಾಡಲು ಅದೇ ಮೊತ್ತವನ್ನು ಖರ್ಚು ಮಾಡಬಹುದು, ಇದಕ್ಕಾಗಿ ಎಂಎಸ್‌ಪಿಯನ್ನು ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.

ಬೆಳೆ ವೈವಿಧ್ಯೀಕರಣವನ್ನು ಆಯ್ಕೆ ಮಾಡಿಕೊಳ್ಳುವ ರೈತರಿಗೆ ಮಾತ್ರ ಬೆಂಬಲ ಬೆಲೆ ನೀಡಲು ಸರ್ಕಾರ ಯೋಜಿಸುತ್ತಿದೆ. ಈ ಬೆಳೆಗಳನ್ನು ಬೆಳೆಯಲು ಮುಂದಾಗುವರಿಗೆ ಮಾತ್ರ ನೀಡಲು ಹೊರಟಿದೆ. ಈಗಾಗಲೇ ಬೆಳೆಗಳನ್ನು ಬೆಳೆಯುತ್ತಿರುವ ರೈತರಿಗೆ ಇದು ಅನ್ವಯಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.

ಸರ್ಕಾರದ ಪ್ರಸ್ತಾಪವನೆಯಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. 23 ಬೆಳೆಗಳಿಗೆ ಎಂಎಸ್‌ಪಿ ಬೇಡಿಕೆ ಇಟ್ಟಿದ್ದೇವೆ. ನೀಡಲಾಗುವ ಮೊತ್ತವು ‘ಕನಿಷ್ಠ’ ಬೆಂಬಲ ಬೆಲೆಯಾಗಿದೆ, ಅದು ಜೀವನಾಧಾರಕ್ಕೆ ಸಹಾಯ ಮಾಡುತ್ತದೆ, ಆದಾಯವಲ್ಲ. ಕಾನೂನಾತ್ಮಕ ಖಾತ್ರಿಗೆ ಒಪ್ಪಿಗೆ ನೀಡದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರ್ಥ. ಹೀಗಾಗಿ, ಪ್ರಸ್ತಾವನೆಯನ್ನು ತಿರಸ್ಕರಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Farmers Protest: ಕೇಂದ್ರ ಸರ್ಕಾರದ 5 ವರ್ಷಗಳ ಎಂಎಸ್‌ಪಿ ಆಫರ್ ತಿರಸ್ಕರಿಸಿದ ರೈತ ಸಂಘಟನೆ

Exit mobile version