ನವದೆಹಲಿ: ಕಾಂಗ್ರೆಸ್ ನಾಯಕ ಮಣಿಶಂಕರ್ ಅವರ ಪುತ್ರಿ ಯಾಮಿನಿ ಅಯ್ಯರ್ (Yamini Aiyar) ಅವರಿಗೆ ಸಂಬಂಧಿಸಿದ ಸರ್ಕಾರೇತರ ಸಂಸ್ಥೆ (NGO) ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನ (CPR) ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಎಫ್‌ಸಿಆರ್‌ಎ ನಿಯಮಗಳನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಯಾಮಿನಿ ಅಯ್ಯರ್ ಅವರು ಎನ್‌ಜಿಒ ಅಧ್ಯಕ್ಷೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಿಪಿಆರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದರು.
ಫೋರ್ಡ್ ಫೌಂಡೇಷನ್ ಸೇರಿ ಹಲವು ವಿದೇಶಿ ಸಂಸ್ಥೆಗಳಿಂದ ನಿಯಮ ಪಾಲಿಸದೆಯೇ ಸಿಪಿಆರ್ ದೇಣಿಗೆ ಸ್ವೀಕರಿಸಿದೆ ಎಂದು ತಿಳಿದುಬಂದಿದೆ. ಅಲ್ಲದೆ, ತೀಸ್ತಾ ಸೆಟಲ್ವಾಡ್ ಅವರಿಗೆ ಸಂಬಂಧಿಸಿದ ಎನ್‌ಜಿಒ ಸಬ್ರಂಗ್ ಟ್ರಸ್ಟ್‌ನ ಎಫ್‌ಸಿಆರ್‌ಎ ಪರವಾನಗಿ ರದ್ದುಗೊಳಿಸಿದ್ದರೂ, ಅದಕ್ಕೆ ಸಿಪಿಆರ್ ದೇಣಿಗೆ ನೀಡಿದೆ ಎಂಬ ಆರೋಪವಿದೆ. ಹಾಗಾಗಿ, ಸಿಪಿಆರ್‌ನ ಎಫ್‌ಸಿಆರ್‌ಎ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸ್ಟಾರ್ ಹೋಟೆಲ್‌ಗಳಲ್ಲಿ ಭದ್ರತಾ ವೈಫಲ್ಯವಾದರೆ ಪರವಾನಗಿ ರದ್ದು: ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ