ನವ ದೆಹಲಿ: ಕಳೆದ ವರ್ಷ ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತರು ಭಾರೀ ಪ್ರತಿಭಟನೆ ಮಾಡಿದ್ದರು. ಪಂಜಾಬ್‌ನಲ್ಲಂತೂ ಪರಿಸ್ಥಿತಿ ತುಂಬ ಗಂಭೀರವಾಗಿತ್ತು. ಕೊನೆಗೆ ಕೇಂದ್ರ ಸರ್ಕಾರ ಕೃಷಿ ಕಾಯಿದೆಗಳನ್ನು ಹಿಂಪಡೆದಿತ್ತು. ಆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಪಂಜಾಬ್ ಪ್ರವಾಸ ಕೈಗೊಂಡಿದ್ದರು. ರೈತರು ಪ್ರಧಾನಿ ಫಿರೋಜ್‌ಪುರಕ್ಕೆ ಹೋಗುವ ದಾರಿಯನ್ನು ಅಡ್ಡಗಟ್ಟಿದ್ದರಿಂದ ಸೇತುವೆಯೊಂದರ ಮೇಲೆ ಪ್ರಧಾನಿ ವಾಹನ ಸುಮಾರು 15ರಿಂದು 20 ನಿಮಿಷ ನಿಂತಿತ್ತು. ಈ ಪಿಎಂ ಭದ್ರತಾ ವೈಫಲ್ಯ (PM security breach) ಕ್ಕೆ ಸಂಬಂಧಿಸಿದಂತೆ ಈಗ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಪಂಜಾಬ್‌ನ ಫಿರೋಜಪುರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಭದ್ರತೆಯನ್ನು ಕೈಗೊಳ್ಳಲು ಸಂಪೂರ್ಣವಾಗಿ ವಿಫಲರಾಗಿದ್ದಾರೆಂದು ತಿಳಿಸಿದೆ. ಇದರ ಪರಿಣಾಮವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ವೈಫಲ್ಯಕ್ಕೆ ಕಾರಣವಾಯಿತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಭಟಿಂಡಾದಿಂದ ಫಿರೋಜಪುರ್‌ಗೆ ಚುನಾವಣಾ ರಾಲಿಯಲ್ಲಿ ಪಾಲ್ಗೊಳ್ಳಲು ಮತ್ತು ನವದೆಹಲಿ -ಅಮೃತಸರ-ಕಾತ್ರಾ ಎಕ್ಸ್‌ಪ್ರೆಸ್ ವೇ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಹೊರಟಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಫಿರೋಜಪುರ್‌ಗೆ ರಸ್ತೆ ಮಾರ್ಗದ ಮೂಲಕ ಹೊರಟ್ಟಿದ್ದರು. ಈ ಸಂದರ್ಭದಲ್ಲಿ ಕೆಲವು ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಹಾಗೂ ಭದ್ರತಾ ಸಿಬ್ಬಂದಿ ಇದ್ದ ವಾಹನಗಳನ್ನು ದಾರಿ ಮಧ್ಯೆ ತಡೆದಿದ್ದರು. ಇದರಿಂದಾಗಿ ಪ್ರಧಾನಿ ದಾರಿ ಮಧ್ಯೆಯೇ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಉಳಿಯಬೇಕಾಯಿತು. flyover for 15-20 minutes.
ಪ್ರತಿಕೂಲ ಹವಾಮಾನ ಪರಿಣಾಮದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೆಲಿಕಾಪ್ಟರ್ ಮೂಲಕ ಫಿರೋಜ್‌ಪುರಗೆ ತೆರಳಲು ಸಾಧ್ಯವಾಗಿರಲಿಲ್ಲ. ಪ್ರಧಾನಿಯ ಪಂಜಾಬ್ ಪ್ರವಾಸದ ವೇಳೆ ಭಾರಿ ಭದ್ರತಾ ವೈಫಲ್ಯ ಸಂಭವಿಸಿತು. ಇದರಿಂದಾಗಿ ಪ್ರಧಾನಿ ಬೆಂಗಾವಲು ಪಡೆಯು ಫಿರೋಜ್‌ಪುರ ಪ್ರವಾಸವನ್ನು ರದ್ದು ಮಾಡಿ, ವಾಪಸ್ ಬರುವ ಬಗ್ಗೆ ನಿರ್ಧರಿಸಿತ್ತು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ರಾಜಕೀಯ ವಾಗ್ವಾದಕ್ಕೆ ಕಾರಣ
ಪ್ರಧಾನಿಯ ಭದ್ರತಾ ವೈಫಲ್ಯ ಅಂದು ರಾಜಕೀಯ ವಾಗ್ವಾದಕ್ಕೂ ಕಾರಣವಾಗಿತ್ತು. ಅಂದು ಪಂಜಾಬ್ ಸಿಎಂ ಆಗಿದ್ದ ಚರಣಜೀತ್ ಸಿಂಗ್ ಚೆನ್ನಿ ಅವರು ಯಾವುದೇ ಭದ್ರತಾ ವೈಫಲ್ಯ ಆಗಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಪ್ರಧಾನಿ ಕೂಡ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತಲುಪಿದ್ದೇನೆ ಎಂದು ನಿಮ್ಮ ಸಿಎಂ(ಚೆನ್ನಿ) ಅವರಿಗೆ ತಿಳಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದರೆಂದು ವರದಿಯಾಗಿತ್ತು.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯಿದೆಗಳ್ನು ವಿರೋಧಿಸಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ ರೈತರು ನವ ದೆಹಲಿಯಲ್ಲಿ ಭಾರೀ ಪ್ರತಿಭಟನೆ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಪಿಎಂ ಭದ್ರತಾ ವೈಫಲ್ಯ ಸಂಭವಿಸಿದ್ದು ರಾಜಕೀಯ ಮೇಲಾಟಕ್ಕೂ ಕಾರಣವಾಗಿತ್ತು.
ಇದನ್ನೂ ಓದಿ | ಪ್ರಧಾನಿ ಮೋದಿ ಮಂಗಳೂರಿಗೆ ಬಂದು ಏನು ಸಾಧಿಸುತ್ತಾರೆ: ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ