Site icon Vistara News

ಯೂನಿವರ್ಸಿಟಿಯಲ್ಲಿ ಸೆಕ್ಯೂರಿಟಿ ಗಾರ್ಡ್​​ಗಳು, ವಿದ್ಯಾರ್ಥಿಗಳ ಮಧ್ಯೆ ಬಡಿದಾಟ, ವಾಹನಗಳು ಧ್ವಂಸ; 33 ಜನರ ಬಂಧನ

Fight Between Guards And Students

#image_title

ನವ ದೆಹಲಿ: ಕಾಲೇಜುಗಳಲ್ಲಿ, ಯೂನಿವರ್ಸಿಟಿಗಳಲ್ಲಿ ಹೊಡೆದಾಟ-ಗಲಾಟೆ ನಡೆಯುತ್ತಿರುತ್ತದೆ. ಎಂಥಾ ಸಣ್ಣಸಣ್ಣ ಕಾರಣಗಳೆಲ್ಲ ದೊಡ್ಡದಾಗಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟುಬಿಡುತ್ತವೆ. ಹಾಗೇ, ಗ್ರೇಟರ್​ ನೊಯ್ಡಾದ ಗೌತಮ ಬುದ್ಧ ಯೂನಿವರ್ಸಿಟಿ (ಸರ್ಕಾರಿ)ಯಲ್ಲೂ ಒಂದಷ್ಟು ವಿದ್ಯಾರ್ಥಿಗಳು ಮತ್ತು ಅದೇ ಯೂನಿವರ್ಸಿಟಿಯ ಸೆಕ್ಯೂರಿಟಿ ಗಾರ್ಡ್​​ಗಳ ಮಧ್ಯೆ ಮಾರಾಮಾರಿ ಜಗಳ (Fight Between Security Guards And Students) ನಡೆದು, ಸದ್ಯ ಪೊಲೀಸರು 33 ಜನರನ್ನು ವಶಕ್ಕೆ ಪಡೆದಿದ್ದಾರೆ.

‘ಭಾನುವಾರ ಬೆಳಗ್ಗೆ 10.30ರ ಹೊತ್ತಿಗೆ ಒಂದಷ್ಟು ವಿದ್ಯಾರ್ಥಿಗಳು ಯೂನಿವರ್ಸಿಟಿಯ ಕ್ಯಾಂಪಸ್​​ನಲ್ಲಿರುವ ಮುಂಶಿ ಪ್ರೇಮಚಂದ್​ ಹಾಸ್ಟೆಲ್​​​ ಮುಂಭಾಗ ನಿಂತು ಸಿಗರೇಟ್​ ಸೇದುತ್ತಿದ್ದರು. ಅಲ್ಲೆಲ್ಲ ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದೆಲ್ಲ ಕಟ್ಟುನಿಟ್ಟಾಗಿ ನಿಷಿದ್ಧ. ಅಂಥದ್ದರಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್​​ ಬಳಿ ಸ್ಮೋಕಿಂಗ್ ಮಾಡುತ್ತಿರುವದನ್ನು ನೋಡಿ ಅಲ್ಲಿನ ಸೆಕ್ಯೂರಿಟಿ ಗಾರ್ಡ್​ಗಳು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ. ಇದೇ ಸಂಘರ್ಷಕ್ಕೆ ಕಾರಣವಾಯಿತು. ವಿದ್ಯಾರ್ಥಿಗಳು ಸೆಕ್ಯೂರಿಟಿ ಸಿಬ್ಬಂದಿಯನ್ನೇ ತರಾಟೆಗೆ ತೆಗೆದುಕೊಂಡರು. ಮಾತಿಗೆ ಮಾತು ಬೆಳೆದು ಮಾರಾಮಾರಿ ಹೊಡೆದಾಡಿಕೊಂಡಿದ್ದಾರೆ. ಸದ್ಯ 33ಜನರನ್ನು ವಶಕ್ಕೆ ಪಡೆದಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: MS Dhoni : ಇನ್ನು ಮುಂದೆ ಧೋನಿಗೆ ಕಾಲು ನೋವು ಬರದು; ಮುಂಬಯಿ ವೈದ್ಯರು ಹೀಗೆ ಹೇಳಿದ್ದು ಯಾಕೆ?

ಕಾಲೇಜು ವಿದ್ಯಾರ್ಥಿಗಳು ಮತ್ತು ಖಾಸಗಿ ಏಜೆನ್ಸಿಗೆ ಸೇರಿದ ಭದ್ರತಾ ಸಿಬ್ಬಂದಿ ನಡುವಿನ ಸಂಘರ್ಷದ ಹಲವು ವಿಡಿಯೊಗಳು ವೈರಲ್ ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಹರಿದಾಡುತ್ತಿವೆ. ಕೆಲವರು ಬಡಿಗೆಗಳನ್ನು ಹಿಡಿದುಕೊಂಡು ಬೈಕ್​, ಕಾರುಗಳಿಗೆ ಬಡಿದು ಹಾನಿಗೊಳಿಸುತ್ತಿರುವುದನ್ನೂ ವಿಡಿಯೊದಲ್ಲಿ ನೋಡಬಹುದು. ಹುಡುಗರ ಬಾಯಯಲ್ಲಿ ಬರಿ ಬೈಗುಳವೇ ಕೇಳುತ್ತಿದೆ.

Exit mobile version