Site icon Vistara News

Sukhjinder Singh Randhawa: ಮೋದಿಯನ್ನು ಕೊಂದರೆ ಮಾತ್ರ ದೇಶಕ್ಕೆ ಉಳಿವು, ಕಾಂಗ್ರೆಸ್‌ ನಾಯಕ ವಿವಾದಾತ್ಮಕ ಹೇಳಿಕೆ

Finish Modi, country will be saved: Rajasthan Congress leader Sukhjinder Singh Randhawa

Finish Modi, country will be saved: Rajasthan Congress leader Sukhjinder Singh Randhawa

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ರಾಜಸ್ಥಾನ ಕಾಂಗ್ರೆಸ್‌ ನಾಯಕ ಸುಖಜಿಂದರ್‌ ಸಿಂಗ್‌ ರಂಧಾವ (Sukhjinder Singh Randhawa) ವಿವಾದಾತ್ಮಕ ಹೇಳಿದ್ದಾರೆ. “ನರೇಂದ್ರ ಮೋದಿ ಅವರನ್ನು ಕೊಂದರೆ ಮಾತ್ರ ಭಾರತ ಉಳಿಯಲು ಸಾಧ್ಯ” ಎಂದು ರಾಜಸ್ಥಾನದಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ರಂಧಾವ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

“ಮೋದಿ ಅವರನ್ನು ಕೊಂದರೆ ಮಾತ್ರ ದೇಶ ಉಳಿಯುತ್ತದೆ. ಹಾಗೊಂದು ವೇಳೆ ಮೋದಿ ಉಳಿದರೆ, ದೇಶವೇ ಉಳಿಯುವುದಿಲ್ಲ. ಮೋದಿ ಅವರಿಗೆ ದೇಶಭಕ್ತಿ ಎಂದರೇನು ಎಂಬುದೇ ಗೊತ್ತಿಲ್ಲ. ದೇಶದಲ್ಲಿ ಸರಿಯಾದ ಶಿಸ್ತು, ಕಾನೂನು ಇದ್ದರೆ ಅದಾನಿಯನ್ನು ಒಂದೇ ದಿನದಲ್ಲಿ ಭಾರತದಿಂದ ಹೊರಹಾಕುತ್ತೇವೆ” ಎಂದು ಹೇಳಿದ್ದಾರೆ.

ರಂಧಾವ ನೀಡಿದ ಹೇಳಿಕೆ

“ಬಿಜೆಪಿಯ ಕತೆ ಮುಗಿಸಿದರೆ, ಅದಾನಿಯ ಕತೆ ತಾನೇ ಮುಗಿಯುತ್ತದೆ. ಮೋದಿಯು ದೇಶವನ್ನು ಮಾರಾಟ ಮಾಡುತ್ತಿದ್ದಾರೆ. ನಮ್ಮ ಹೋರಾಟ ಅದಾನಿ ವಿರುದ್ಧ ಅಲ್ಲ. ಆದರೆ, ಅಂಬಾನಿ ಹಾಗೂ ಅದಾನಿಯನ್ನು ಜೈಲಿಗೆ ಕಳುಹಿಸಬೇಕು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇವರಿಬ್ಬರನ್ನು ದೂರ ಇಡಲಾಗುವುದು” ಎಂದು ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಿನಿಂದಲೇ ಕಾಂಗ್ರೆಸ್‌ ರ‍್ಯಾಲಿಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: Gujarat riots | ಗುಜರಾತ್‌ ಹತ್ಯಾಕಾಂಡ ಹಿಂದುಗಳ ಪರಾಕ್ರಮ: ವಿವಾದಾತ್ಮಕ ಹೇಳಿಕೆ ನೀಡಿದ ವಿಹಿಂಪ ನಾಯಕ ಶರಣ್‌ ಪಂಪ್‌ವೆಲ್‌

Exit mobile version