ಭೋಪಾಲ್: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ ಶೇ.40ರಷ್ಟು ಕಮಿಷನ್ ಆರೋಪದಂತೆ ಮಧ್ಯಪ್ರದೇಶದಲ್ಲೂ ಕಮಲ್ ನಾಥ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ (Priyanka Vadra) ಅವರು ಶೇ.50ರಷ್ಟು ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಹೀಗೆ ಭ್ರಷ್ಟಾಚಾರದ ಆರೋಪ ಮಾಡಿದ ಪ್ರಿಯಾಂಕಾ ವಾದ್ರಾ ವಿರುದ್ಧ ಮಧ್ಯಪ್ರದೇಶದ 41 ಜಿಲ್ಲೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
“ಕರ್ನಾಟದಲ್ಲಿ ಶೇ.40ರಷ್ಟು ಭ್ರಷ್ಟಾಚಾರ ಇತ್ತು. ಅಲ್ಲಿನ ಜನ ಬಿಜೆಪಿ ಸರ್ಕಾರವನ್ನು ಸೋಲಿಸಿದರು. ಹಾಗೆಯೇ, ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವಿದೆ. ಇದು ಕೂಡ ಶೇ.50ರಷ್ಟು ಕಮಿಷನ್ ಸರ್ಕಾರವಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯೂ ಸೋಲಾಗುವುದಿಲ್ಲ” ಎಂದು ಪ್ರಿಯಾಂಕಾ ವಾದ್ರಾ ಟ್ವೀಟ್ ಮಾಡಿದ್ದರು. ಇದನ್ನು ಮಾಜಿ ಸಿಎಂ ಸೇರಿ ಹಲವರು ರಿಟ್ವೀಟ್ (X) ಮಾಡಿದ್ದರು.
ಪ್ರಿಯಾಂಕಾ ವಾದ್ರಾ ಟ್ವೀಟ್
ಪ್ರಿಯಾಂಕಾ ವಾದ್ರಾ ಆರೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ 41 ಜಿಲ್ಲೆಗಳಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಾಗೆಯೇ, ಕಮಲ್ ನಾಥ್, ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಹಾಗೂ ಅರುಣ್ ಯಾದವ್ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಅಷ್ಟೇ ಅಲ್ಲ, ಇವರ ಸೋಷಿಯಲ್ ಮೀಡಿಯಾ ಹ್ಯಾಂಡ್ಲರ್‌ಗಳ ವಿರುದ್ಧವೂ ಕೇಸ್ ದಾಖಲಿಸಲಾಗಿದೆ.
ಇದನ್ನೂ ಓದಿ: Viral Video: ಬಿಜೆಪಿ ‘ಭ್ರಷ್ಟಾಚಾರ’ ಪಟ್ಟಿ ಓದಲು ತಡಕಾಡಿದ ಪ್ರಿಯಾಂಕಾ ವಾದ್ರಾ; ಅಂಕಿ-ಅಂಶ ಹೇಳುವಾಗಲೂ ಎಡವಟ್ಟು
ಕಾಂಗ್ರೆಸ್ ಟೀಕಾಸ್ತ್ರ
ಬಿಜೆಪಿಯು ರಾಜ್ಯದ 41 ಜಿಲ್ಲೆಗಳಲ್ಲಿ ಎಫ್‌ಐಆರ್ ದಾಖಲಿಸಿರುವುದನ್ನು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. “ರಾಜ್ಯದ 41 ಜಿಲ್ಲೆಗಳಲ್ಲಿ ಪ್ರಿಯಾಂಕಾ ವಾದ್ರಾ, ಕಮಲ್ ನಾಥ್ ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಧ್ಯಪ್ರದೇಶದ ಕ್ರೈಮ್ ಬ್ರ್ಯಾಂಚ್ ಎಂಬುದು ಬಿಜೆಪಿ ಪಕ್ಷವಾಗಿ ಬದಲಾಗಿದೆ. ಇದನ್ನು ಖಂಡಿಸಿ ರಾಜ್ಯದ 52 ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಲಾಗಿದೆ” ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮೀಡಿಯಾ ಸೆಲ್ ಚೇರ್ಮನ್ ಕೆ.ಕೆ.ಮಿಶ್ರಾ ಹೇಳಿದ್ದಾರೆ.