ನವ ದೆಹಲಿ: ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವೀಯ ನೀಡಿರುವ ದೂರಿನ ಮೇರೆಗೆ ದಿಲ್ಲಿ ಪೊಲೀಸರು ನ್ಯೂಸ್ ವೆಬ್‌ಸೈಟ್ ದಿ ವೈರ್ (The Wire) ಹಾಗೂ ಅದರ ಸಂಪಾದಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ದಿ ವೈರ್ ನಕಲಿ ದಾಖಲಾತಿಗಳ ಮೂಲಕ ತಮ್ಮ ತೇಜೋ ವಧೆ ನಡೆಸಿದೆ. ನನಗೆ ಕಾನೂನು ಕ್ರಮ ಜರುಗಿಸದೆ ಬೇರೆ ಮಾರ್ಗ ಇಲ್ಲವಾಗಿದೆ ಎಂದು ಅಮಿತ್ ಮಾಲವೀಯ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವಾಟ್ಸ್ ಆ್ಯಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಪ್ರವರ್ತಕ ಕಂಪನಿಯಾಗಿರುವ ಮೆಟಾ, ಅಮಿತ್ ಮಾಲವೀಯ ಅವರಿಗೆ ವಿಶೇಷ ಸೌಲಭ್ಯವನ್ನು ನೀಡಿತ್ತು. ಅಮಿತ್ ಮಾಲವೀಯ ಅವರು ಈ ಪ್ರಭಾವವನ್ನು ಬಳಸಿಕೊಂಡು, ಈ ಜಾಲತಾಣಗಳಲ್ಲಿ ತಮ್ಮ ಪಕ್ಷಕ್ಕೆ ಪ್ರತಿಕೂಲ ಪರಿಣಾಮ ಬೀರುವ ಪೋಸ್ಟ್‌ಗಳನ್ನು ಅಳಿಸಿ ಹಾಕುತ್ತಿದ್ದರು ಎಂದು ದಿ ವೈರ್ ಆರೋಪಿಸಿತ್ತು. ಆದರೆ ತಮ್ಮ ವಿರುದ್ಧದ ಆರೋಪಗಳನ್ನು ಮಾಲವೀಯ ನಿರಾಕರಿಸಿದ್ದರು.