Site icon Vistara News

Fire accident: ಮಾಲ್‌ನಲ್ಲಿ ಭೀಕರ ಅಗ್ನಿ ಅವಘಡ; ಭಾರೀ ಸಾವು-ನೋವಿನ ಶಂಕೆ

Fire accident

ನೋಯ್ಡಾ: ಉತ್ತರಪ್ರದೇಶದ ಮಾಲ್‌ವೊಂದರಲ್ಲಿ ಭಾರೀ ಅಗ್ನಿ ಅವಘಡ(Fire accident) ಸಂಭವಿಸಿದೆ. ನೋಯ್ಢಾದ ಲಾಜಿಕ್ಸ್‌ ಮಾಲ್‌(Logix Mall)ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಇದುವರೆಗೆ ಯಾವುದೇ ಸಾವು ನೋವು ಪ್ರಕರಣಗಳು ವರದಿ ಆಗಿಲ್ಲ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗುತ್ತಿದೆ.

ಮಾಲ್‌ನಲ್ಲಿದ್ದ ಬಟ್ಟೆಯ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡು ಏಕಾಏಕಿ ಇಡೀ ಮಾಲ್‌ಗೆ ಆವರಿಸಿತ್ತು. ದಟ್ಟ ಹೊಗೆ ತುಂಬಿಕೊಳ್ಳುತ್ತಿದ್ದಂತೆ ಗಾಬರಿಗೊಂಡ ಜನ ಸ್ಥಳದಿಂದ ಓಡಲು ಶುರು ಮಾಡಿದ್ದಾರೆ. ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಪೊಲೀಸರು ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನ ನಡೆಸಿವೆ. ತಕ್ಷಣ ಮಾಲ್‌ನ ಒಳಗಿದ್ದ ಜನರನ್ನು ಸುರಕ್ಷಿತವಾಗಿ ಹೊರ ಕರೆ ತರುವಲ್ಲಿ ಯಶಸ್ವಿ ಆಗಿದೆ.

ಇನ್ನು ಘಟನಾ ಸ್ಥಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಒಳಗೆ ಹಲವಾರು ಜನ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಅಗ್ನಿ ಅವಘಡಕ್ಕೆ ನಿಜವಾದ ಕಾರಣ ಏನೆಂಬುದು ತಿಳಿದಿಲ್ಲ. ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದೆಹಲಿಯ ವಿವೇಕ್‌ ವಿಹಾರ್‌ನಲ್ಲಿರುವ ನ್ಯೂ ಬಾರ್ನ್‌ ಬೇಬಿ ಕೇರ್‌ ಆಸ್ಪತ್ರೆ(Hospital)ಯ ಕಳೆದ ತಿಂಗಳು ಏಕಾಏಕಿ ಅಗ್ನಿ ಅವಘಡ ಸಂಭವಿಸಿದ್ದು, ವೆಂಟಿಲೇಟರ್‌ನಲ್ಲಿದ್ದ ಮಗು ಸೇರಿದಂತೆ ಒಟ್ಟು 7 ಮಕ್ಕಳು ಸಾವನ್ನಪ್ಪಿದ್ದರು. ಇನ್ನು ಘಟನೆಯಲ್ಲಿ 12 ಮಕ್ಕಳನ್ನು ರಕ್ಷಿಸಲಾಗಿತ್ತು. ಮೂರು ಅಂತಸ್ತಿನ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಬೆಂಕಿ ಕೆನ್ನಾಲೆ ವ್ಯಾಪಿಸುತ್ತಲೇ ಹೋಗಿತ್ತು. ತಕ್ಷಣ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಬೆಂಕಿಯ ಜ್ವಾಲೆಗೆ 7 ಜನ ಮಕ್ಕಳು ಬಲಿಯಾಗಿದ್ದಾರೆ.

ಇದಕ್ಕೂ ಮುನ್ನ ಗುಜರಾತ್‌ನ ರಾಜ್‌ಕೋಟ್‌ (Rajkot) ನಗರದಲ್ಲಿರುವ ಗೇಮಿಂಗ್‌ ಜೋನ್‌ (Gaming Zone) ಒಂದರಲ್ಲಿ ಶನಿವಾರ (ಮೇ 25) ಸಂಜೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 27ಜನ ಮೃತಪಟ್ಟಿದ್ದರು. 9 ಮಕ್ಕಳು, ಮಹಿಳೆಯರು ಸೇರಿ 27 ಮಂದಿ ಮೃತಪಟ್ಟಿರುವ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿತ್ತು.

ಇದನ್ನೂ ಓದಿ:Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ; 6 ಜನರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು

Exit mobile version