Site icon Vistara News

Fire Accident: ಬೆಚ್ಚಿ ಬೀಳಿಸಿದ ಮತ್ತೊಂದು ಅಗ್ನಿ ಅವಘಡ; ಆಸ್ಪತ್ರೆಯಲ್ಲಿ ಭಾರೀ ದುರಂತ- 7 ನವಜಾತ ಶಿಶುಗಳು ಸಜೀವ ದಹನ

Fire accident

ನವದೆಹಲಿ: ಗುಜರಾತ್‌(Gujarat)ನ ಅಗ್ನಿ ದುರಂತ (Fire Accident)ದ ಬೆನ್ನಲ್ಲೇ ದೆಹಲಿಯಲ್ಲೂ ಭೀಕರ ದುರ್ಘಟನೆಯೊಂದು ನಡೆದಿದೆ. ಮಕ್ಕಳ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 7 ಮಕ್ಕಳು ದುರ್ಮರಣಕ್ಕೀಡಾಗಿದ್ದಾರೆ. ದೆಹಲಿಯ ವಿವೇಕ್‌ ವಿಹಾರ್‌ನಲ್ಲಿರುವ ನ್ಯೂ ಬಾರ್ನ್‌ ಬೇಬಿ ಕೇರ್‌ ಆಸ್ಪತ್ರೆ(Hospital)ಯಲ್ಲಿ ಶನಿವಾರ ತಡರಾತ್ರಿ ಏಕಾಏಕಿ ಅಗ್ನಿ ಅವಘಡ ಸಂಭವಿಸಿದ್ದು, ವೆಂಟಿಲೇಟರ್‌ನಲ್ಲಿದ್ದ ಮಗು ಸೇರಿದಂತೆ ಒಟ್ಟು 7 ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ 12 ಮಕ್ಕಳನ್ನು ರಕ್ಷಿಸಲಾಗಿದೆ.

ಘಟನೆ ವಿವರ:

ಮೂರು ಅಂತಸ್ತಿನ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಬೆಂಕಿ ಕೆನ್ನಾಲೆ ವ್ಯಾಪಿಸುತ್ತಲೇ ಹೋಗಿತ್ತು. ತಕ್ಷಣ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಬೆಂಕಿಯ ಜ್ವಾಲೆಗೆ 7 ಜನ ಮಕ್ಕಳು ಬಲಿಯಾಗಿದ್ದಾರೆ. ಇನ್ನು ಉಳಿದ ಮಕ್ಕಳನ್ನು ರಕ್ಷಿಸಲಾಗಿದೆ. ಇನ್ನು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ಬೆಂಕಿ ಅವಘಡಕ್ಕೆ ಸೂಕ್ತ ಕಾರಣ ಏನೆಂಬುದು ಇನ್ನೂ ತಿಳಿದಿಲ್ಲ ಎಂದು ಡಿಎಸ್‌ಎಫ್‌ ಮುಖ್ಯಸ್ಥ ಅತುಲ್‌ ಗರ್ಗ್‌ ಮಾಹಿತಿ ನೀಡಿದ್ದಾರೆ.

ಗುಜರಾತ್‌ನ ರಾಜ್‌ಕೋಟ್‌ (Rajkot) ನಗರದಲ್ಲಿರುವ ಗೇಮಿಂಗ್‌ ಜೋನ್‌ (Gaming Zone) ಒಂದರಲ್ಲಿ ಶನಿವಾರ (ಮೇ 25) ಸಂಜೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 27ಜನ ಮೃತಪಟ್ಟಿದ್ದರು. 9 ಮಕ್ಕಳು, ಮಹಿಳೆಯರು ಸೇರಿ 27 ಮಂದಿ ಮೃತಪಟ್ಟಿರುವ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿದೆ. ಈಗಲೂ ಅಗ್ನಿ ನಂದಿಸುವ ಕಾರ್ಯವನ್ನು ಅಗ್ನಿಶಾಮಕದ ದಳದ ಸಿಬ್ಬಂದಿಯು ಮುಂದುವರಿಸಿದ್ದಾರೆ. ಇನ್ನೂ ಹಲವು ಜನ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ರಾಜ್‌ಕೋಟ್‌ ಗೇಮಿಂಗ್‌ ಜೋನ್‌ಗೆ ನಿರಾಕ್ಷೇಪಣಾ ಪತ್ರವೇ (NOC) ಸಿಕ್ಕಿರಲಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.

ಇದನ್ನೂ ಓದಿ: Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Exit mobile version