ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್ (Rajkot) ನಗರದಲ್ಲಿರುವ ಗೇಮಿಂಗ್ ಜೋನ್ (Gaming Zone) ಒಂದರಲ್ಲಿ ಶನಿವಾರ (ಮೇ 25) ಸಂಜೆ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ (Fire Accident) ನಿಜವಾದ ಕಾರಣ ಏನೆಂಬುದು ಬಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಯೊಂದು ವೈರಲ್ ಆಗಿದ್ದು, ವೆಲ್ಡಿಂಗ್ ನಡೆಯುತ್ತಿದ್ದ ಜಾಗದಲ್ಲಿ ಅಚಾನಕ್ಕಾಗಿ ಬೆಂಕಿ ಕಾಣಿಸಿಕೊಂಡಿದ್ದು, ಏಕಾಏಕಿ ಬೆಂಕಿ ಕೆನ್ನಾಲಿಗೆ ಜೋರಾಗುತ್ತಲೇ ಹೋಗುತ್ತದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?
ವೆಲ್ಡಿಂಗ್ ನಡೆಯುತ್ತಿದ್ದ ಪ್ರದೇಶದಲ್ಲಿ ಬೆಂಕಿ ಕಿಡಿ ಕಾಣಿಸಿಕೊಳ್ಳುತ್ತದೆ. ನೋಡ ನೋಡ್ತಿದ್ದಂತೆ ಕಿಡಿ ಬೆಂಕಿಯ ಜ್ವಾಲೆಯಾಗಿ ಹೊತ್ತಿಕೊಳ್ಳುತ್ತದೆ. ಕೆಲವು ಕಿಡಿಗಳು ಅಲ್ಲೇ ಇದ್ದ ಪ್ಲಾಸ್ಟಿಕ್‌ಗೆ ಬಿದ್ದು, ಜೋರಾಗಿ ಹೊತ್ತಿಕೊಳ್ಳುತ್ತದೆ. ಬೆಂಕಿ ಆವರಿಸಿಕೊಳ್ಳುವುದುನ್ನು ತಡೆಯಲು ಅಲ್ಲೇ ಇದ್ದ ಸಿಬ್ಬಂದಿ ಅದನ್ನು ನಂದಿಸುವ ಪ್ರಯತ್ನಪಟ್ಟರೂ ಯಶಸ್ವಿಯಾಗಲಿಲ್ಲ. ಅಲ್ಲದೇ ನಿರ್ಮಿಸಲಾಗಿದ್ದ ತಾತ್ಕಾಲಿಕ ಅಲಂಕಾರಿಕಾ ವಸ್ತುಗಳಿಗೆ ಬೆಂಕಿ ಆವರಿಸಿದ ಪರಿಣಾಮವಾಗಿ ಈ ಭೀಕರ ದುರಂತ ಸಂಭವಿಸಿದೆ. ಇನ್ನು ಗೇಮಿಂಗ್ ಜೋನ್‌ನಲ್ಲಿ ಕೇವಲ ಒಂದೇ ಎಮರ್ಜೆನ್ಸಿ ಬಾಗಿಲು ಇದ್ದ ಕಾರಣ ಅನೇಕರು ಅದರ ಒಳಗೇ ಸಿಲುಕುವಂತೆ ಆಯಿತು. ಅದೂ ಅಲ್ಲದೇ ಫೈರ್ ಸೇಫ್ಟಿ ವಸ್ತುಗಳೂ ಸ್ಥಳದಲ್ಲಿರಲಿಲ್ಲ.
Gujarat: CCTV footage of the Rajkot TRP gaming zone fire has emerged. The fire started due to welding in the extension area. pic.twitter.com/LBSWlkeD0H
— IANS (@ians_india) May 26, 2024
ಶನಿವಾರ ರಾಜ್‌ಕೋಟ್‌ನಲ್ಲಿರುವ ಗೇಮಿಂಗ್ ಜೋನ್ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. 9 ಮಕ್ಕಳು, ಮಹಿಳೆಯರು ಸೇರಿ 32 ಮಂದಿ ಮೃತಪಟ್ಟಿರುವ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿದೆ. ಗೇಮಿಂಗ್ ಜೋನ್ ಕಟ್ಟಡದಲ್ಲಿ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ವೀಕೆಂಡ್ ಇರುವ ಕಾರಣ ಮಕ್ಕಳು ಆಟವಾಡಲಿ ಎಂಬುದಾಗಿ ಟಿಆರ್‌ಪಿ ಗೇಮಿಂಗ್ ಜೋನ್‌ಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಏಕಾಏಕಿ ಅಗ್ನಿ ದುರಂತ ಸಂಭವಿಸಿದ ಕಾರಣ 32 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ.
ಇನ್ನು ಎರಡು ಅಂತಸ್ತಿನ ಶೆಡ್‌ನಲ್ಲಿ ನಿರ್ಮಿಸಲಾಗಿದ್ದ ರಾಜ್‌ಕೋಟ್ ಗೇಮಿಂಗ್ ಜೋನ್‌ಗೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವೇ ಸಿಕ್ಕಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ರಾಜ್‌ಕೋಟ್ ಮೇಯರ್ ನಯನಾ ಪೆಢಾದಿಯಾ ಅವರೇ ಮಾಹಿತಿ ನೀಡಿದ್ದಾರೆ. “ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಇಲ್ಲದೆಯೇ ಗೇಮಿಂಗ್ ಜೋನ್ ಕಾರ್ಯನಿರ್ವಹಿಸುತ್ತಿದ್ದ ಕುರಿತು ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೇ ರೀತಿಯಾದ ರಾಜಕೀಯ ನುಸುಳದಂತೆ ತನಿಖೆ ನಡೆಸಲಾಗುತ್ತದೆ. ಇದು ಸಣ್ಣ ಸಂಗತಿ ಅಲ್ಲ” ಎಂಬುದಾಗಿ ಮಾಹಿತಿ ನೀಡಿದ್ದಾರೆ.ಖ್ಯೆ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.