Site icon Vistara News

Fire Incident | ಮೂರಂತಸ್ತಿನ ಕಟ್ಟಡಕ್ಕೆ ಬೆಂಕಿ; ಮೂವರು ಮಕ್ಕಳ ಸಹಿತ 5 ಜನ ಸಾವು

Fire

ಲಖನೌ: ಉತ್ತರ ಪ್ರದೇಶದ ಮೊರಾದಾಬಾದ್​ ಜಿಲ್ಲೆಯ ಮೂರಂತಸ್ತಿನ ಕಟ್ಟಡವೊಂದರಲ್ಲಿ ಭಾರಿ ಅಗ್ನಿ ಅವಘಡ ಉಂಟಾಗಿ 5 ಮಂದಿ ಮೃತಪಟ್ಟಿದ್ದಾರೆ. ಇದೊಂದು ಮದುವೆ ನಡೆಯುವ ಸ್ಥಳ ಎಂದು ಹೇಳಲಾಗಿದೆ. ಮೃತಪಟ್ಟ ಐವರಲ್ಲಿ ಮೂವರು ಮಕ್ಕಳೇ ಆಗಿದ್ದು, ಇನ್ನಿಬ್ಬರು ಮಹಿಳೆಯರು ಆಗಿದ್ದಾರೆ.

ಮೂರಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳದ ಐದು ತಂಡಗಳು ಇಲ್ಲಿಗೆ ಆಗಮಿಸಿ, ಬೆಂಕಿ ನಂದಿಸಿದ್ದಾರೆ. ಸುಮಾರು ಏಳು ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಟ್ಟಡದಲ್ಲಿ ಶಾರ್ಟ್​ ಸರ್ಕ್ಯೂಟ್​​ನಿಂದ ಬೆಂಕಿ ಕಾಣಿಸಿಕೊಂಡಿದ್ದಾಗಿಯೂ ವರದಿಯಾಗಿದೆ.

ಇದನ್ನೂ ಓದಿ: Fire Accident | ತ್ಯಾಗಿ ಸರ್ಕಲ್ ಪ್ಯಾಲೇಸ್ ಮಾಲ್‌ನಲ್ಲಿ ಅಗ್ನಿ ಅವಘಡ : ಗಾಜಿನ ಸಾಮಗ್ರಿಗಳು ಬೆಂಕಿಗಾಹುತಿ

Exit mobile version