Site icon Vistara News

Fire Accident: ಸಾವಿರಾರು ಪ್ರಯಾಣಿಕರಿದ್ದ ಕೋಲ್ಕೊತಾ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ

Fire Accident In Kolkata Airport

Fire breaks out inside Netaji Subhash Chandra Bose International Airport in Kolkata

ಕೋಲ್ಕೊತಾ: ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವ ಕೋಲ್ಕೊತಾದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ಅಗ್ನಿ ಅವಘಡ (Fire Accident) ಸಂಭವಿಸಿದೆ. ಚೆಕ್‌ ಇನ್‌ ಏರಿಯಾ ಪೋರ್ಟಲ್‌ ಡಿ ವಿಭಾಗದಲ್ಲಿ ರಾತ್ರಿ 9.12ರ ಸುಮಾರಿಗೆ ಭಾರಿ ಪ್ರಮಾಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ 9.40ರ ಸುಮಾರಿಗೆ ಅಗ್ನಿ ನಂದಿಸಿತು.

ಅಗ್ನಿ ಅವಘಡ ಸಂಭವಿಸುತ್ತಲೇ ನೂರಾರು ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಹಾಗೆಯೇ, ಚೆಕ್‌ ಇನ್‌ ಪ್ರಕ್ರಿಯೆಯನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಇನ್ನು, ರಾತ್ರಿ 10.15ಕ್ಕೆ ಮೊದಲಿನಂತೆ ಚೆಕ್‌ ಇನ್‌ ಪ್ರಕ್ರಿಯೆ ಆರಂಭಿಸಲಾಯಿತು.

ಇಲ್ಲಿದೆ ವಿಡಿಯೊ

ವಿಮಾನ ನಿಲ್ದಾಣದ ಸಿಬ್ಬಂದಿಯು ಅಗ್ನಿಯ ಕೆನ್ನಾಲಗೆಯು ವ್ಯಾಪಿಸದಂತೆ ನೋಡಿಕೊಂಡಿತು. ಅಲ್ಲದೆ, ಕ್ಷಿಪ್ರವಾಗಿ ಬೆಂಕಿ ನಂದಿಸುವ ಜತೆಗೆ ಪ್ರಯಾಣಿಕರನ್ನು ಬೇರೆಡೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಯಿತು. ಇದರಿಂದಾಗಿ ಯಾರೊಬ್ಬರಿಗೂ ತೊಂದರೆ ಆಗಲಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Fire Accident: ಅಗ್ನಿ ಅವಘಡಕ್ಕೆ ಅಡಿಕೆ ತೋಟ ಭಸ್ಮ; ಎಕರೆಗೂ ಅಧಿಕ ಜಾಗ ಬೆಂಕಿಗಾಹುತಿ, ಲಕ್ಷಾಂತರ ರೂ. ನಷ್ಟ

ವಿಮಾನ ನಿಲ್ದಾಣದಲ್ಲಿ ಏಕಾಏಕಿ ಅಗ್ನಿಯ ಅವಘಡ ಸಂಭವಿಸಲು ಕಾರಣವೇನು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಅಗ್ನಿ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

Exit mobile version