Site icon Vistara News

Madurai Train Fire Accident: ಭಾರತ್ ಗೌರವ್ ವಿಶೇಷ ರೈಲಿನಲ್ಲಿ ಅಗ್ನಿ ಅವಘಡ; 9 ಪ್ರಯಾಣಿಕರ ಸಾವು; 20ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

Madurai Train Fire Accident

ಮದುರೈ: ಇತ್ತೀಚೆಗಷ್ಟೇ ಒಡಿಶಾದ ಬಾಲಾಸೋರ್‌ನಲ್ಲಿ 3 ರೈಲುಗಳ ನಡುವೆ ಭೀಕರ ರೈಲು ಅಪಘಾತ ಸಂಭವಿಸಿ 300 ಅಧಿಕ ಜನ ಮೃತಪಟ್ಟಿದ್ದರು. ಇದೀಗ ಮಧುರೈ(Madurai Train Fire Accident) ಸಮೀಪ ಪ್ರವಾಸಿ ರೈಲಿಗೆ ಬೆಂಕಿ ತಗುಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 9 ಜನರು ಮೃತಪಟ್ಟಿದ್ದಾರೆ(Madurai Train) ಎಂದು ತಿಳಿದು ಬಂದಿದೆ. 20ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ಲಖಿಪುರದಿಂದ(Lucknow to Rameshwaram) ಬಂದಿದ್ದ ಪ್ರವಾಸಿ ರೈಲು ಮಧುರೈ ಸಮೀಪ ಬೆಂಕಿ ತಗುಲಿ ಈ ಘಟನೆ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದವ ಪೈಕಿ 9 ಜನರು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಲ್ಲಿನ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ Odisha Train Accident: ಅಪಘಾತಕ್ಕೆ ಕರ್ತವ್ಯ ಲೋಪ ಕಾರಣ, 7 ನೌಕರರನ್ನು ಅಮಾನತು ಮಾಡಿದ ರೈಲ್ವೆ ಇಲಾಖೆ

ಸದ್ಯ ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ರೈಲಿನಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸುವ ಪ್ರಯತ್ನದಲ್ಲಿ ತೊಡಗಿದ್ದು, ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ.(Tamil Nadu train fire) ಉತ್ತರ ಪ್ರದೇಶದಿಂದ ಬರುತ್ತಿದ್ದ ಈ ರೈಲಿನ 2 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಧುರೈ ನಿಲ್ದಾಣದಲ್ಲಿ ರೈಲು ನಿಂತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ರಾಮೇಶ್ವರದಿಂದ ಕನ್ಯಾಕುಮಾರಿಗೆ ಹೊರಟ್ಟಿದ ಭಾರತ್ ಗೌರವ್ ವಿಶೇಷ ರೈಲು ಇದಾಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಈ ರೈಲಿನಲ್ಲಿದ್ದ ಭಕ್ತರು ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಿದ್ದ ಕಾರಣ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದಿಂದ ರಾಮೇಶ್ವರಕ್ಕೆ(Lucknow to Rameshwaram) ತೆರಳುತ್ತಿದ್ದ ರೈಲು ಇದಾಗಿದೆ.

Exit mobile version