Site icon Vistara News

Firing at military station : ಪಂಜಾಬ್‌ ಸೇನಾ ನೆಲೆ ಪ್ರವೇಶಕ್ಕೆ ಉಗ್ರರ ಯತ್ನ: ನಾಲ್ವರನ್ನು ಹೊಡೆದುರುಳಿಸಿದ ಸೇನೆ

Punjab police arrested soldier Over Bathinda Military Station Shooting

ಬತಿಂಡಾ: ಪಂಜಾಬ್‌ನ ಭತಿಂಡಾ ಮಿಲಿಟರಿ ನೆಲೆಯ (Bathinda military station) ಒಳಗೆ ಬುಧವಾರ ಮುಂಜಾನೆ ಸಂಭವಿಸಿದ ಗುಂಡಿನ ದಾಳಿದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆಯ ನೈಋತ್ಯ ಕಮಾಂಡ್‌ ತಿಳಿಸಿದೆ.

ಬೆಳಗ್ಗೆ 4.35ರ ಹೊತ್ತಿಗೆ ಮಿಲಿಟರಿ ನೆಲೆಯ ಒಳಗೆ ಗುಂಡಿನ ದಾಳಿ ನಡೆದಿದೆ. ಪ್ರದೇಶದ ಒಳಗೆ ಯಾರೋ ಅಪರಿಚಿತರು ಪ್ರವೇಶ ಮಾಡಿದ್ದನ್ನು ಅರಿತ ಕೂಡಲೇ ತುರ್ತು ಪ್ರತಿರೋಧ ತಂಡಗಳು ಕಾರ್ಯಾಚರಣೆಗೆ ಇಳಿದವು. ಶೋಧ ಕಾರ್ಯಾಚರಣೆ ಈಗಲೂ ಮುಂದುವರಿಯುತ್ತಿವೆ ಎಂದು ಸೇನೆ ತಿಳಿಸಿದೆ.

ಒಳನುಸುಳಿದ ಉಗ್ರರಿಗಾಗಿ ಶೋಧ

ಸಂರಕ್ಷಿತ ಕ್ಯಾಂಪಸ್‌ನ ಒಳಗೆ ಯಾರೋ ಬಂದಿದ್ದನ್ನು ಅರಿತು ಸೇನಾ ಯೋಧರೊಬ್ಬರು ಗುಂಡಿನ ದಾಳಿ ನಡೆಸಿದ್ದರೆ ಎಂದು ಬತಿಂಡಾದ ಎಸ್‌ಎಸ್‌ಪಿ ಗುಲ್‌ನೀತ್‌ ಖುರಾನಾ ತೀಳಿಸಿದ್ದಾರೆ. ಘಟನೆಯ ಹೆಚ್ಚಿನ ವಿವರ ತಿಳಿದುಬಂದಿಲ್ಲ.

ಇದನ್ನೂ ಓದಿ : Salman khan: ಸಲ್ಮಾನ್​ ಖಾನ್​​ರನ್ನು ಏ.30ರೊಳಗೆ ಕೊಲ್ಲುವುದಾಗಿ ಹೇಳಿದ್ದವ ಅರೆಸ್ಟ್​; ಆತ ಬಾಲಕ!

Exit mobile version