Site icon Vistara News

2026ರ ಹೊತ್ತಿಗೆ ಬುಲೆಟ್ ಟ್ರೈನ್ ಮಾರ್ಗದ 50 ಕಿ.ಮೀ ಪೂರ್ಣ! ಸಚಿವ ವೈಷ್ಣವ್ ಹೇಳಿದ್ದೇನು?

Bullet Train

What Is The Status Of Bullet Train? Railway Minister Shares A Video

ನವದೆಹಲಿ: ಭಾರತದ ಮೊದಲ ಅಹಮದಾಬಾದ್-ಮುಂಬೈ (Ahmadabad-Mumbai) ಬುಲೆಟ್ ಟ್ರೈನ್ (bullet train) ಮಾರ್ಗ ನಿಧಾನವಾಗಿ ರೂಪುಗೊಳ್ಳುತ್ತಿದೆ. 2026ರ ಆಗಸ್ಟ್ ಹೊತ್ತಿಗೆ, ಗುಜರಾತ್‌ನ ಬಿಲಿಮೋರಾ ಮತ್ತು ಸೂರತ್ ಮಾರ್ಗದ 50 ಕಿ.ಮೀ ಸಿದ್ಧವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Railway Minister Ashwini Vaishnaw) ಅವರು ಹೇಳಿದ್ದಾರೆ. ಇದೇ ವೇಳೆ, ವೈಷ್ಣವ್ ಅವರು ಕವಚ್ ವ್ಯವಸ್ಥೆಯ (Kavach System) ಬಗ್ಗೆ ಮಾಹಿತಿ ನೀಡಿದ್ದಾರೆ. ಜೂನ್‌ನಲ್ಲಿ ಒಡಿಶಾದ ಬಾಲಸೋರ್‌ನಲ್ಲಿ ಸುಮಾರು 300 ಜನರ ಸಾವಿಗೆ ಕಾರಣವಾದ ಭೀಕರ ಅಪಘಾತದ ನಂತರ ಕವಚ್ ಬಗ್ಗೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ರೈಲುಗಳು ಡಿಕ್ಕಿಯಾಗುವುದನ್ನು ತಪ್ಪಿಸುವ ತಂತ್ರಜ್ಞಾನವನ್ನು ಕವಚ್ ಸಿಸ್ಟಮ್ ಒಳಗೊಂಡಿದೆ.

ಇದೇ ವೇಳೆ, ಗಜರಾಜ್ ಸಿಸ್ಟಮ್ ಬಗ್ಗೆಯೂ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರೈಲುಗಳು ಮತ್ತು ಆನೆಗಳ ನಡುವೆ ಡಿಕ್ಕಿಯಾಗಿ, ಆನೆಗಳ ಸಾವಿನ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಈ ಅವಘಡಗಳನ್ನು ತಪ್ಪಿಸಲು ಗಜರಾಜ್ ಸಿಸ್ಟಮ್ ಜಾರಿ ತರಲಾಗುತ್ತಿದೆ. ಇದಕ್ಕಾಗಿ ದೇಶದ ವಿವಿಧ ಭಾಗಗಳನ್ನು ಉತ್ತಮವಾಗಿ ಸಂಪರ್ಕಿಸಲು ಹೆಚ್ಚಿನ ಟ್ರ್ಯಾಕ್‌ಗಳನ್ನು ನಿರ್ಮಿಸಲು ತಂತ್ರಜ್ಞಾನವನ್ನು ಇದು ಒಳಗೊಂಡಿದೆ.

ಕೋವಿಡ್ ಸಾಂಕ್ರಮಿಕ ಮುಂಚೆ ಇದ್ದ 1768 ಮೇಲ್/ಎಕ್ಸ್‌ಪ್ರೆಸ್ ರೈಲು ಸಂಖ್ಯೆ ಈಗ 2124ಕ್ಕೆ ಏರಿಕೆಯಾಗಿದೆ. ಹಾಗೆಯೇ ಉಪನಗರಗಳಿಗೆ ಸಂಪರ್ಕ ಕಲ್ಪಿಸುವ 5,626 ರೈಲುಗಳು ಈಗ 5,774 ಏರಿಕೆಯಾಗಿದೆ. ಇದೇ ಅವಧಿಯಲ್ಲಿ 2,792 ಪ್ಯಾಸೆಂಜರ್ ರೈಲುಗಳನ್ನು 2,856 ಕ್ಕೆ ಹೆಚ್ಚಿಸಲಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ರೈಲ್ವೆಯು 2022/23 ಅವಧಿಯಲ್ಲಿ 640 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸಿದೆ. ಮತ್ತು 2023/24ರ ಅವಧಿಯಲ್ಲಿ 750 ಕೋಟಿ ಪ್ರಯಾಣಿಕರಿಗೆ ಹೆಚ್ಚಿಸುವ ಗುರಿ ಇದೆ.

2021ರ ನವೆಂಬರ್‌ನಲ್ಲಿ ಕೆಲಸ ಪ್ರಾರಂಭವಾದಾಗಿನಿಂದ ಮುಂಬೈ-ಅಹಮದಾಬಾದ್ ಕಾರಿಡಾರ್ ಸ್ಥಿರ ಮತ್ತು ನಿರಂತರ ಕಾಮಗಾರಿಯನ್ನು ಕಾಣುತ್ತಿದೆ. ಮೊದಲ ಒಂದು ಕಿಲೋಮೀಟರ್ ವಯಡಕ್ಟ್ ಅಳವಡಿಕೆಯನ್ನು ಆರು ತಿಂಗಳಲ್ಲಿ ಮತ್ತು 50 ನೇ ಕಿಲೋಮೀಟರ್ ಅನ್ನು ಈ ವರ್ಷದ ಏಪ್ರಿಲ್‌ನಲ್ಲಿ ಪೂರ್ತಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ, ಮುಂಬೈ-ಅಹಮದಾಬಾದ್ ಕಾರಿಡಾರ್‌ನ ಭಾಗವಾಗಿ ಆರು ನದಿಗಳಿಗೆ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ವಲ್ಸಾದ್ ಜಿಲ್ಲೆಯ ಪರ್ ಮತ್ತು ಔರಂಗ ಮತ್ತು ನವಸಾರಿಯಲ್ಲಿ ಪೂರ್ಣ, ಮಿಂಧೋಲಾ, ಅಂಬಿಕಾ ಮತ್ತು ವೆಂಗನಿಯಾ ನದಿಗಳಿಗೆ ಅಡ್ಡಲಾಗಿ ಬುಲೆಟ್ ಟ್ರೈನ್ ಮಾರ್ಗಕ್ಕಾಗಿ ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ವಿವಿಧ ನದಿಗಳಿಗೆ ನಿರ್ಮಿಸಲಾದ ಸೇತುವೆಗಳ ಕುರಿತಾದ ವಿಡಿಯೋವೊಂದನ್ನು ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿ. ಪೋಸ್ಟ್ ಮಾಡಿದೆ.

ಈ ಸುದ್ದಿಯನ್ನೂ ಓದಿ: ಇನ್ನು ಬೆಂಗಳೂರಿನಿಂದ ಚೆನ್ನೈಗೆ ಎರಡೇ ಗಂಟೆ ಸಾಕು, ಶೀಘ್ರ ಮೈಸೂರು-ಬೆಂಗಳೂರಿಗೂ ಬರಲಿದೆ ಬುಲೆಟ್ ಟ್ರೈನ್!

Exit mobile version