Site icon Vistara News

Agniveer in Hyderabad | ಹೈದ್ರಾಬಾದ್‌ನಲ್ಲಿ ಮೊದಲ ಬ್ಯಾಚಿನ ಅಗ್ನಿವೀರರಿಗೆ ತರಬೇತಿ

Agnipath

ಹೈದ್ರಾಬಾದ್: ಇಲ್ಲಿನ ಗೋಲ್ಕೊಂಡಾದಲ್ಲಿರುವ ಆರ್ಟಿಲರಿ ಸೆಂಟರ್‌ನಲ್ಲಿ (Agniveer in Hyderabad) ಅಗ್ನಿವೀರರ ಮೊದಲ ಬ್ಯಾಚ್‌ನ ತರಬೇತಿ ಆರಂಭವಾಗಿದೆ. ತರಬೇತಿ ಮುಗಿದ ತಕ್ಷಣ ಸೇನಾ ಸೇವೆಗೆ ನಿಯೋಜನೆಯಾಗಲಿದ್ದಾರೆ. ಸುಮಾರು 40 ಸಾವಿರ ಅಭ್ಯರ್ಥಿಗಳ ಪೈಕಿ 5,500 ಅಭ್ಯರ್ಥಿಗಳು ಈ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ತರಬೇತಿಯ ಮೊದಲ ಹಂತದಲ್ಲಿ ಅಭ್ಯರ್ಥಿಗಳಿಗೆ ಸೇನಾ ಕಾರ್ಯಾಚರಣೆಯ ವಿವಿಧ ಮೂಲಭೂತ ಸಂಗತಿಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಇದರಲ್ಲಿ ಸೈಬರ್ ಸೆಕ್ಯುರಿಟಿ, ಫೈರಿಂಗ್, ಕಮ್ಯುನಿಕೇಷನ್ಸ್ ಇತ್ಯಾದಿ ವಿಷಯಗಳಿರುತ್ತವೆ. ಬಳಿಕ ಫೀಲ್ಡ್ ಕಾರ್ಯಾಚರಣೆಯ ಬಗ್ಗೆ ತರಬೇತಿ ನೀಡಲಾಗುತ್ತದೆ.

3,300 ಅಭ್ಯರ್ಥಿಗಳಿರುವ ಅಗ್ನಿವೀರ್ ಎರಡನೇ ಬ್ಯಾಚ್ ಫೆಬ್ರವರಿ ಮಧ್ಯದಲ್ಲಿ ರಿಪೋರ್ಟ್ ಮಾಡಿಕೊಳ್ಳಲಿದ್ದು, ತರಬೇತಿಯು ಮಾರ್ಚ್ 1ರಿಂದ ಆರಂಭವಾಗಲಿದೆ. ಅಗ್ನಿವೀರರಾಗಿ ತರಬೇತಿ ಪಡೆದು ಸೇನೆಯನ್ನು ಸೇರುವ ಅಭ್ಯರ್ಥಿಗಳು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ಇದಾದ ಬಳಿಕ, ಒಟ್ಟು ಅಭ್ಯರ್ಥಿಗಳ ಪೈಕಿ ಶೇ.25ರಷ್ಟು ಅಗ್ನಿವೀರರನ್ನು ಸೇನೆಯಲ್ಲಿ ಉಳಿಸಿಕೊಳ್ಳಲಾಗುತ್ತದೆ. ಉಳಿದರನ್ನು ಸೇವೆಯಿಂದ ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ | ವಿಸ್ತಾರ Explainer: ಸೇನಾ ನೇಮಕಾತಿಯಲ್ಲಿ ‘ಅಗ್ನಿ’ ಕ್ರಾಂತಿ

Exit mobile version