ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮೇ 4ರಂದು ಭಾರತೀಯ ವಾಯುಪಡೆಯ ಬೆಂಗಾವಲು ಪಡೆಯ (Indian Air Force) ಎರಡು ವಾಹನಗಳ ಮೇಲೆ ದಾಳಿ ನಡೆಸಿದ ಉಗ್ರರ (Poonch Terrorists) ಫೋಟೊಗಳು, ಅವರ ಹೆಸರು ಬಹಿರಂಗವಾಗಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಉಗ್ರರ ಫೋಟೊಗಳನ್ನು ಬಿಡುಗಡೆ ಮಾಡಲಾಗಿದ್ದು, ಭಾರತೀಯ ಸೇನೆಯು (Indian Army) ಇವರನ್ನು ಹೊಡೆದುರುಳಿಸಲು ಪ್ಲಾನ್ ರೂಪಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಾಯುಪಡೆ ವಾಹನಗಳ ಮೇಲೆ ದಾಳಿ ಮಾಡಿದ ಮೂವರನ್ನು ಇಲಿಯಾಸ್ (ಪಾಕಿಸ್ತಾನ ಸೇನೆಯ ಮಾಜಿ ಕಮಾಂಡೋ), ಲಷ್ಕರೆ ತಯ್ಬಾ ಕಮಾಂಡರ್ ಅಬು ಹಮ್ಜಾ ಹಾಗೂ ಹದೂನ್ ಎಂಬುದಾಗಿ ಗುರುತಿಸಲಾಗಿದೆ. ಇಲಿಯಾಸ್‌ನ ಕೋಡ್ ನೇಮ್ (ಗೌಪ್ಯ ಹೆಸರು) ಫೌಜಿ ಎಂಬುದಾಗಿದೆ ಎಂದು ಕೂಡ ತಿಳಿದುಬಂದಿದೆ. ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ಪೀಪಲ್ಸ್ ಆ್ಯಂಟಿ-ಫ್ಯಾಸಿಸ್ಟ್ ಫ್ರಂಟ್ ಎಂಬ ಅಂಗಸಂಸ್ಥೆಯ ಪರವಾಗಿ ಉಗ್ರರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
#WATCH | Poonch, J&K: Visuals from the incident spot at Jarran Wali Gali in the Poonch district, where an Indian Air Force vehicle convoy was attacked by terrorists on May 4 resulting in the loss of life of one IAF soldier.
— ANI (@ANI) May 8, 2024
Search operation is currently underway in the area. pic.twitter.com/dhP06XNhdC
ಮೇ 4ರಂದು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ವಾಯುಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದರು. ಅಲ್ಲದೆ, ಐವರು ಗಂಭೀರವಾಗಿ ಗಾಯಗೊಂಡಿದ್ದರು. ಪೂಂಚ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಮೊದಲೇ ಸೇನೆಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ನಿಟ್ಟಿನಲ್ಲಿ ಅರೆ ಸೈನಿಕ ಪಡೆ ಮತ್ತು ಪೊಲೀಸರು ಅವರ ಪತ್ತೆಗೆ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿತ್ತು.
ಸಿಸಿಟಿವಿ ದೃಶ್ಯಗಳು ಹಾಗೂ ಫೋಟೊಗಳನ್ನು ಪರಿಶೀಲನೆ ಮಾಡುತ್ತಿರುವ ಭಾರತೀಯ ಸೇನೆಯು ರಾಜೌರಿ ಹಾಗೂ ಪೂಂಚ್‌ನ ಅರಣ್ಯ ಪ್ರದೇಶದಲ್ಲಿ ಮೂವರ ಹತ್ಯೆಗಾಗಿ ಬೃಹತ್ ಕಾರ್ಯಾಚರಣೆ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಕೆಲವೆಡೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪೂಂಚ್ ದಾಳಿಯ ಬಳಿಕ ಕುಲ್ಗಾಮ್‌ನಲ್ಲಿ ಲಷ್ಕರೆ ತಯ್ಬಾದ ಮೂವರು ಉಗ್ರರನ್ನು ಹೊಡೆದುರುಳಿಸುವ ಮೂಲಕ ಯೋಧರು ಸೇಡು ತೀರಿಸಿಕೊಂಡಿದ್ದರು. ಮೇ 6ರಂದು ಕುಲ್ಗಾಮ್‌ನಲ್ಲಿ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಕಮಾಂಡರ್, ಮೋಸ್ಟ್ ವಾಂಟೆಡ್ ಉಗ್ರ ಸೇರಿ ಒಟ್ಟು ಮೂವರು ಹತ್ಯೆಗೈದಿದ್ದರು.
ಇದನ್ನೂ ಓದಿ: Kulgam: ಪೂಂಚ್ ದಾಳಿಗೆ ಸೇನೆ ಸೇಡು; ಒಬ್ಬ ಲಷ್ಕರ್ ಕಮಾಂಡರ್ ಸೇರಿ ಮೂವರು ಉಗ್ರರ ಖತಂ