ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ಅದರಲ್ಲೂ, ಮುಂದಿನ ಸಂಕ್ರಾಂತಿಯಂದೇ ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಿರುವ ಕಾರಣ ನಿರ್ಮಾಣ ಕಾರ್ಯಕ್ಕೆ ವೇಗ ನೀಡಿದೆ. ಇದರ ಬೆನ್ನಲ್ಲೇ ರಾಮಮಂದಿರದ ಗರ್ಭಗುಡಿಯ ಫೋಟೊ ಲಭ್ಯವಾಗಿದ್ದು, ರಾಮನ ಭಕ್ತರ ಗಮನ ಸೆಳೆದಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಗರ್ಭಗುಡಿಯ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರದ ಗುರ್ಭಗುಡಿಯ ಗೋಡೆ ಇದು. ಅದ್ಭುತವಾಗಿದೆ, ನೈಸರ್ಗಿಕವಾಗಿ ಕಾಣುತ್ತಿದೆ ಹಾಗೂ ದೇವಾಲಯವು ಅದ್ಧೂರಿಯಾಗಿ ಕಾಣುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಗರ್ಭಗುಡಿಯ ಗೋಡೆ
ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಸುಮಾರು 1,800 ಕೋಟಿ ರೂ. ವ್ಯಯವಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ನಿರ್ಮಾಣ ಕಾರ್ಯವು ಬಹುತೇಕ ಪೂರ್ಣಗೊಂಡಿದೆ. ಜನವರಿಯಲ್ಲಿಯೇ ರಾಮಮಂದಿರಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಈಗಾಗಲೇ ಘೋಷಣೆ ಮಾಡಿದ್ದಾರೆ.
ಹೀಗೆ ನಡೆಯುತ್ತಿದೆ ನಿರ್ಮಾಣ ಕಾರ್ಯ
ಮೈಸೂರಿನಿಂದ ಎರಡು ಶಿಲೆ ರವಾನೆ
ಶ್ರೀ ರಾಮಮಂದಿರ ಸಂಕೀರ್ಣ ನಿರ್ಮಾಣಕ್ಕಾಗಿ ದೇಶದ ವಿವಿಧ ಭಾಗಗಳಿಂದ ಕಲ್ಲುಗಳನ್ನು ಅಯೋಧ್ಯೆಗೆ ತರಿಸಿ, ಕರಸೇವಕಪುರಂ ಕಾರ್ಯಾಗಾರದಲ್ಲಿ ಸಂಗ್ರಹಿಸಿ ಇಡಲಾಗಿದೆ. ಅದಾದ ಮೇಲೆ ಕೂಡ ನೇಪಾಳ, ಮೈಸೂರಿನಿಂದ ತಲಾ ಎರಡು ಶಿಲೆಗಳನ್ನು ತರಿಸಲಾಗಿದೆ. ಇನ್ನೂ 10 ಕಲ್ಲುಗಳನ್ನು ಇಲ್ಲಿಗೆ ತರುವುದು ಬಾಕಿಯಿದ್ದು, ತಂದಾದ ಮೇಲೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೆಲ ತಿಂಗಳ ಹಿಂದೆ ಮಾಹಿತಿ ನೀಡಿದೆ. ಮೈಸೂರಿನಿಂದ ಇನ್ನೂ ಹಲವು ಶಿಲೆಗಳನ್ನು ಅಯೋಧ್ಯೆಗೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Ayodhya Ram Temple: ರಾಮಮಂದಿರ ನಿರ್ಮಾಣಕ್ಕೆ ಮೈಸೂರಿನ ಶಿಲೆಗಳು; ಈಗಾಗಲೇ ಅಯೋಧ್ಯೆ ತಲುಪಿವೆ 2 ಕಲ್ಲುಗಳು