ಕೊಲಂಬೋ: ಶ್ರೀಲಂಕಾ(Shrilanka)ದ ಸಮುದ್ರ ಗಡಿಯಲ್ಲಿ ಅಕ್ರಮ ಮೀನುಗಾರಿಕೆ(Illegal Fisheries) ಮಾಡುತ್ತಿದ್ದ ಆರೋಪದಲ್ಲಿ ಅರೆಸ್ಟ್(Fishermen Arrest) ಆಗಿರುವ 10 ಮೀನುಗಾರರ ವಿರುದ್ಧ ನೌಕಾಪಡೆಯ ನಾವಿಕ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಸೋಮವಾರವಷ್ಟೇ ಈ ಮೀನುಗಾರರನ್ನು ಅಕ್ರಮ ಮೀನುಗಾರಿಕೆ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ. ಅವರ ದೋಣಿಯನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ವೇಳೆ ನೌಕಾಪಡೆ ನಾವಿಕ ಸಾವನ್ನಪ್ಪಿದ್ದರು. ಇದೀಗ ಇದೇ ಪ್ರಕರಣವನ್ನು ಮೀನುಗಾರರ ವಿರುದ್ಧ ಶ್ರೀಲಂಕಾ ಸರ್ಕಾರ ನಿರ್ಧರಿಸಿದೆ.
ಮೀನುಗಾರರ ದೋಣಿ ವಶಕ್ಕೆ ಪಡೆಯುವ ಕಾರ್ಯಾಚರಣೆ ವೇಳೆ ನೌಕಾಪಡೆಯ ವಿಶೇಷ ಬೋಟ್ ಸ್ಕ್ವಾಡ್ರನ್‌ನ ಹಿರಿಯ ನಾವಿಕ ಗಂಭಿರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅರೆಸ್ಟ್ ಆಗಿರುವ ಮೀನುಗಾರರನ್ನು ಕಂಕೆಸಂತುರೈ ಬಂದರಿಗೆ ಕರೆ ತರಲಾಗಿದ್ದು, ಮೈಲಾಡಿ ಮೀನುಗಾರರ ಇನ್ಸ್‌ಪೆಕ್ಟರ್‌ಗೆ ವಶಕ್ಕೆ ಒಪ್ಪಿಸಲಾಗಿದೆ. ಇನ್ನು ಜಾಫ್ನಾದಲ್ಲಿರುವ ಮಲ್ಲಕಂ ಕೋರ್ಟ್‌ನಲ್ಲಿ ಬಿ ರಿಪೋರ್ಟ್ ದಾಖಲಿಸಲಾಗಿದೆ.
ಮೃತ ನಾವಿಕನ ಮರಣೋತ್ತರ ಪರೀಕ್ಷೆಯನ್ನು ಜಾಫ್ನಾ ಮ್ಯಾಜಿಸ್ಟ್ರೇಟ್ ನಡೆಸಿದರು. ನಾವಿಕನ ಸಾವು ಅಪಘಾತವಾಗಿದ್ದು, ಬೆನ್ನುಹುರಿಗೆ ಹಾನಿಯಾಗಿದೆ ಎಂದು ಪರೀಕ್ಷೆಯಲ್ಲಿ ಬಯಲಾಗಿದೆ. ಕುರುನೆಗಾಲ ಜಿಲ್ಲೆಯಲ್ಲಿ ಮೃತ ನಾವಿಕನ ಅಂತ್ಯ ಸಂಸ್ಕಾರ ನಡೆಯಲಿದೆ.
ಶ್ರೀಲಂಕಾದಲ್ಲಿ ಅಕ್ರಮ ಮೀನುಗಾರಿಕೆ ಆರೋಪದ ಮೇಲೆ ಭಾನುವಾರ 18 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಮತ್ತು ಮೂರು ಮೀನುಗಾರಿಕಾ ಹಡಗುಗಳನ್ನು ಲಂಕಾ ನೌಕಪಡೆ ವಶಕ್ಕೆ ಪಡೆದುಕೊಂಡಿದೆ ಎಂದು ಮಾಧ್ಯಮ ವರದಿ ಮಾಡಿತ್ತು. ಶನಿವಾರ ರಾತ್ರಿ ಡೆಲ್ಫ್ಟ್ ದ್ವೀಪಗಳ ಬಳಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಉತ್ತರ ಸಮುದ್ರದಿಂದ ಮೀನುಗಾರರನ್ನು ಬಂಧಿಸಲಾಗಿದೆ ಎಂದು ನ್ಯೂಸ್ ಪೋರ್ಟಲ್ ದಿ ನ್ಯೂಸ್ ಫಸ್ಟ್ ವರದಿ ಮಾಡಿದೆ.
ಬಂಧಿತ ಮೀನುಗಾರರನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ಕಂಕೆಸಂತುರೈ ಮೀನುಗಾರಿಕಾ ಬಂದರಿಗೆ ಕರೆದೊಯ್ಯಲಾಗುವುದು ಎಂದು ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಗಯಾನ್ ವಿಕ್ರಮಸೂರ್ಯ ತಿಳಿಸಿದ್ದಾರೆ. ಕಳೆದ ವಾರ, ದ್ವೀಪ ರಾಷ್ಟ್ರದ ನೀರಿನಲ್ಲಿ ಬೇಟೆಯಾಡಿದ ಆರೋಪದ ಮೇಲೆ ನಾಲ್ವರು ಭಾರತೀಯ ಮೀನುಗಾರರನ್ನು ಬಂಧಿಸಲಾಗಿತ್ತು. ಅವರ ಟ್ರಾಲರ್ ನ್ನು ಶ್ರೀಲಂಕಾ ನೌಕಾಪಡೆ ವಶಪಡಿಸಿಕೊಂಡಿತ್ತು.
ಇದಕ್ಕೂ ಮುನ್ನಾ ಶ್ರೀಲಂಕಾಕ್ಕೆ ಸೇರಿದ ಜಲಮಾರ್ಗದಲ್ಲಿ ಅಕ್ರಮ ಮೀನುಗಾರಿಕೆ ಆರೋಪದ ಮೇರೆಗೆ 180 ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಬಂಧಿಸಲಾಗಿತ್ತು. ಅವರ 25 ಟ್ರಾಲರ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಕಳೆದ ವರ್ಷ ಸುಮಾರು 240 ರಿಂದ 245 ಮಂದಿಯನ್ನು ಬಂಧಿಸಲಾಗಿತ್ತು ಎಂದು ಶ್ರೀಲಂಕಾದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Bulldozer: ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಸದ್ದು; ರಸ್ತೆಯಲ್ಲಿ ಗುಂಡು ಹಾರಿಸಿದವರ ಹೋಟೆಲ್ ಧ್ವಂಸ!