Site icon Vistara News

ಉಂಡು ಮಲಗಿದವರು ಬೆಳಗ್ಗೆ ಹೆಣವಾದರು; 4 ಬಾಲಕರು ಸೇರಿ ಐವರ ಸಾವಿಗೆ ಕಾರಣವೇನು?

Body

Five Children Of Family Die In Sleep In Uttar Pradesh, Suffocation Suspected

ಲಖನೌ: ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ (Amroha District) ರಾತ್ರಿ ಊಟ ಮಾಡಿ ಮಲಗಿದ ಐವರು ಬೆಳಗ್ಗೆ ಹೆಣವಾಗಿದ್ದಾರೆ. ಒಂದೇ ಕುಟುಂಬದ ಏಳು ಜನರ ಪೈಕಿ ನಾಲ್ವರು ಬಾಲಕರು ಸೇರಿ ಐವರು ಮೃತಪಟ್ಟಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರು ಉಸಿರುಗಟ್ಟಿ (Saffocation) ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಏಳು ಜನ ಮನೆಯಲ್ಲಿ ಮಲಗಿದ್ದರು. ಅವರು ಮಲಗಿದ ಕೋಣೆಯಲ್ಲಿ ಕಲ್ಲಿದ್ದಲು ಸುಟ್ಟಿದ್ದರು (Angeethi). ರಾತ್ರಿ ಎಲ್ಲರೂ ಮಲಗಿದ್ದಾಗ ಕಲ್ಲಿದ್ದಿಲಿನ ಹೊಗೆ ಆವರಿಸಿದೆ. ಇದೇ ವೇಳೆ ಮಲಗಿದವರು ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ಸಾವಿಗೆ ನಿಖರ ಕಾರಣ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Bomb Threat Call To Mumbai Police

ಬೆಳಗ್ಗೆ ತುಂಬ ಹೊತ್ತಾದರೂ ಕುಟುಂಬಸ್ಥರು ಹೊರಗೆ ಬರದಿರುವುದನ್ನು ಕಂಡು ಅಕ್ಕಪಕ್ಕದ ಮನೆಯವರು ಬಾಗಿಲು ಬಡಿದಿದ್ದಾರೆ. ಎಷ್ಟು ಬಾಗಿಲು ಬಡಿದರೂ ಯಾರೂ ಹೊರಗೆ ಬರದ ಕಾರಣ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆಗ ಮನೆಯಲ್ಲಿದ್ದ ಎಲ್ಲರೂ ಪ್ರಜ್ಞೆ ಇಲ್ಲದೆ ಮಲಗಿದ್ದನ್ನು ನೋಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ ಬಳಿಕವೇ ಐವರು ಮೃತಪಟ್ಟಿರುವುದು ಗೊತ್ತಾಗಿದೆ.

ಇದನ್ನೂ ಓದಿ: Sirsi News: ಒಂದೇ ಕುಟುಂಬದ ಐವರು ಸಾವು; ಶಾಲ್ಮಲಾ ನದಿಯಲ್ಲಿ ನಿಜಕ್ಕೂ ನಡೆದಿದ್ದೇನು?

ರಹೀಜುದ್ದೀನ್‌ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಇವರ ಮೂವರು ಮಕ್ಕಳು ಹಾಗೂ ಸಂಬಂಧಿಕರ ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೃತರನ್ನು ಸೋನಮ್‌ (19), ವಾರಿಸ್‌ (17), ಮೇಹಕ್‌ (16), ಜೈದ್‌ (15) ಹಾಗೂ ಮಹೀರ್‌ (12) ಎಂದು ಗುರುತಿಸಲಾಗಿದೆ. ರಹೀಜುದ್ದೀನ್‌ ಅವರ ಪತ್ನಿ ಹಾಗೂ ಸಹೋದರನ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version