Site icon Vistara News

PFI Members Arrested: 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರ ಮಾಡುವ ಗುರಿ, ಪಿಎಫ್‌ಐನ ಐವರ ಬಂಧನ

PFI Members Arrested

ಮುಂಬೈ: ಉಗ್ರರಿಗೆ ಹಣಕಾಸು ನೆರವು, ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ಸೇರಿ ಹಲವು ಕಾರಣಗಳಿಂದಾಗಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) (PFI Members Arrested) ಸಂಘಟನೆ ನಿಷೇಧಗೊಂಡಿದ್ದರೂ, ಅದರ ಕಾರ್ಯಕರ್ತರ ಉಪಟಳಗಳು ಮಾತ್ರ ನಿಂತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಮೂಲಭೂತವಾದಿ ಚಟುವಟಿಕೆಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಪಿಎಫ್‌ಐನ ಐವರು ಸದಸ್ಯರನ್ನು ಬಂಧಿಸಲಾಗಿದೆ.

365 ಡೇಸ್‌ ಥ್ರೋ ಎ ತೌಸಂಡ್‌ ಕಟ್ಸ್‌ (365 Days: Through a Thousand Cuts) ಎಂಬ ಮೂಲಭೂತವಾದಿ ಅಂಶಗಳಿರುವ ಪುಸ್ತಕಗಳನ್ನೂ ಜಪ್ತಿ ಮಾಡಲಾಗಿದೆ. ನಿಖರ ಮಾಹಿತಿ ಮೇರೆಗೆ ಮಹಾರಾಷ್ಟ್ರ ಉಗ್ರ ನಿಗ್ರಹ ದಳ (ATS)ದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಪಿಎಫ್‌ಐ ಕಚೇರಿಯ ಐವರು ಪದಾಧಿಕಾರಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಮೂಲಭೂತವಾದವನ್ನು ಪಸರಿಸುವ ಪುಸ್ತಕ ಸೇರಿ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ. ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದಾಗಿ ದುಷ್ಕರ್ಮಿಗಳು ಭಾವಿಸಿದ್ದಾರೆ. ಹಾಗಾಗಿಯೇ, 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್‌ ದೇಶವನ್ನಾಗಿ ನಿರ್ಮಾಣ ಮಾಡುವ ದಿಸೆಯಲ್ಲಿ ಪುಸ್ತಕದ ಅಧ್ಯಯನ ಮಾಡುತ್ತಿದ್ದರು ಎಂದು ಎಟಿಎಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ: PFI Suspects Detained: ಅಯೋಧ್ಯೆ ರಾಮಮಂದಿರ ಸ್ಫೋಟಿಸುವ ಬೆದರಿಕೆ, ನಿಷೇಧಿತ ಪಿಎಫ್‌ಐನ ಮೂವರು ವಶಕ್ಕೆ

Exit mobile version