ನವದೆಹಲಿ: ಬಡ್ಡಿ ದರಗಳು ಪರಿಷ್ಕರಣೆಗೊಂಡಾಗ (interest rate reset) ಸಾಲಗಾರರಿಗೆ ಬಡ್ಡಿದರವನ್ನು ಸ್ಥಿರ ದರಕ್ಕೆ ಬದಲಾಯಿಸುವ ಆಯ್ಕೆಯನ್ನು ಸಾಲದಾತ ಬ್ಯಾಂಕುಗಳು (Banks) ಒದಗಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಎಲ್ಲ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ರಿಸರ್ವ್ ಬ್ಯಾಂಕ್ ಶುಕ್ರವಾರ ಬ್ಯಾಂಕ್‌ಗಳು ಮತ್ತು ಇತರ ಸಾಲದಾತರಿಗೆ ವೈಯಕ್ತಿಕ ಸಾಲಗಾರರಿಗೆ ಬಡ್ಡಿದರಗಳನ್ನು ಮರುಹೊಂದಿಸುವ ಸಮಯದಲ್ಲಿ ಸ್ಥಿರ ದರಕ್ಕೆ ಬದಲಾಯಿಸುವ ಆಯ್ಕೆಯನ್ನು ಒದಗಿಸುವಂತೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಇಎಂಐ ಆಧಾರಿತ ಫ್ಲೋಟಿಂಗ್ ದರದ ವೈಯಕ್ತಿಕ ಸಾಲಗಳಿಗೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ಬಡ್ಡಿದರಗಳ ಹಿನ್ನೆಲೆಯಲ್ಲಿ ಸಾಲದ ಅವಧಿಯ ವಿಸ್ತರಣೆ ಮತ್ತು/ಅಥವಾ ಇಎಂಐ ಮೊತ್ತದ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರಿಯಾದ ಸಂವಹನ ಮತ್ತು/ಅಥವಾ ಒಪ್ಪಿಗೆಯಿಲ್ಲದೆ ಕೈಗೊಳ್ಳಲಾಗುತ್ತಿದೆ ಎಂದು ಗ್ರಾಹಕರ ದೂರುಗಳು ಹಿನ್ನೆಲೆಯಲ್ಲಿ ಕೇಂದ್ರ ಬ್ಯಾಂಕ್ ಈ ಅಧಿಸೂಚನೆ ಹೊರಡಿಸಿದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಆರ್‌ಬಿಐ, ನಿರ್ದಿಷ್ಟ ನೀತಿಯನ್ನು ರೂಪಿಸುವಂತೆ ಸೂಚಿಸಿದೆ.
ಸಾಲ ಮಂಜೂತಿಯ ಸಮಯದಲ್ಲಿ ಇಎಂಐ ಮತ್ತು/ಅಥವಾ ಅವಧಿ ಅಥವಾ ಎರಡರಲ್ಲೂ ಬದಲಾವಣೆಗಳಿಗೆ ಕಾರಣವಾಗುವ ಸಾಲದ ಮೇಲಿನ ಬಡ್ಡಿ ದರದಲ್ಲಿನ ಬದಲಾವಣೆಯ ಸಂಭವನೀಯ ಪ್ರಭಾವದ ಬಗ್ಗೆ ಆರ್‌ಇಗಳು (Regulated Entities) ಸಾಲಗಾರರಿಗೆ ಸ್ಪಷ್ಟವಾಗಿ ತಿಳಿಸಬೇಕು. ತರುವಾಯ, ಇಎಂಐ/ ಅವಧಿಯಲ್ಲಿ ಯಾವುದೇ ಹೆಚ್ಚಳ ಅಥವಾ ಮೇಲಿನ ಎರಡರ ಕಾರಣದಿಂದಾಗಿ ಸಾಲಗಾರನಿಗೆ ಸೂಕ್ತ ಮಾರ್ಗಗಳ ಮೂಲಕ ತಕ್ಷಣವೇ ತಿಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಈ ಸುದ್ದಿಯನ್ನೂ ಓದಿ: RBI Monetary Policy: ಸಾಲಗಾರರಿಗೆ ಸಿಹಿ ಸುದ್ದಿ, ರೆಪೋ ದರ ಯಥಾಸ್ಥಿತಿ; ಹಣದುಬ್ಬರ ಜೇಬಿಗೆ ಮತ್ತಷ್ಟು ಭಾರ
ಬಡ್ಡಿ ದರಗಳನ್ನು ಮರು ಹೊಂದಿಸುವ ಸಮಯದಲ್ಲಿ ಆರ್‌ಇಗಳು, ಗ್ರಾಹಕರು ತಮ್ಮ ಬೋರ್ಡ್ ಅಪ್ರೂವ್ಡ್ ಪಾಲಿಸಿ ಅನ್ವಯ ಸ್ಥಿರ ದರಕ್ಕೆ ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ನೀಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಸಾಲದ ಅವಧಿಯ ಸಮಯದಲ್ಲಿ ಸಾಲಗಾರನಿಗೆ ಎಷ್ಟು ಬಾರಿ ಬದಲಾಯಿಸಲು ಅನುಮತಿಸಲಾಗುತ್ತದೆ ಎಂಬುದನ್ನು ತಿಳಿಸಬೇಕಾಗುತ್ತದೆ. ಸಾಲದ ಅವಧಿಯ ಸಮಯದಲ್ಲಿ ಯಾವುದೇ ಹಂತದಲ್ಲಿ ಭಾಗಶಃ ಅಥವಾ ಪೂರ್ಣವಾಗಿ ಪೂರ್ವಪಾವತಿ ಮಾಡುವ ಆಯ್ಕೆಯನ್ನು ಅವರಿಗೆ ನೀಡಬೇಕು ಎಂದೂ ಹೇಳಿದೆ.
ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.