ನವದೆಹಲಿ: ದೇಶದಲ್ಲಿ ಕೊರೊನಾ (Coronavirus) ನಾಲ್ಕನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ದೇಶದ ಪ್ರತಿಯೊಂದು ರಾಜ್ಯದಲ್ಲಿ ವೈದ್ಯಕೀಯ ಮೂಲ ಸೌಕರ್ಯ ಹೆಚ್ಚಿಸಬೇಕು. ಅದರಲ್ಲೂ, ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್, ಹಾಸಿಗೆ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಸೂಚಿಸಿದೆ. ಮಾರ್ಗಸೂಚಿಯ ಪ್ರಮುಖ ಅಂಶಗಳು ಹೀಗಿವೆ.
- ಕೊರೊನಾ ವಿರುದ್ಧ ಹೋರಾಡಲು ಕೃತಕ ಆಮ್ಲಜನಕದ ಅತ್ಯವಶ್ಯವಿದೆ. ಹಾಗಾಗಿ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಕೃತಕ ಆಮ್ಲಜನಕ ಸಂಗ್ರಹಿಸಿಡಬೇಕು.
- ಕೇಂದ್ರ ಸರ್ಕಾರವು ದೇಶಾದ್ಯಂತ ಕೃತಕ ಆಮ್ಲಜನಕ ಘಟಕಗಳನ್ನು ಸ್ಥಾಪಿಸಿದೆ. ರಾಜ್ಯಗಳು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಆಕ್ಸಿಜನ್ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಜನರಿಗೆ ಕಡಿಮೆ ಬೆಲೆಯಲ್ಲಿ ಸಿಗಲು ಕ್ರಮ ತೆಗೆದುಕೊಳ್ಳಬೇಕು.
- ಪ್ರತಿ ವಾರ ಕೇಂದ್ರ ಸರ್ಕಾರದಿಂದ ಸಭೆ ನಡೆಸಲಾಗುತ್ತದೆ. ಮೂಲ ಸೌಕರ್ಯಗಳ ಲಭ್ಯತೆ ಜತೆಗೆ ಪ್ರತಿಯೊಂದು ಮಾಹಿತಿ ಪಡೆಯಲಾಗುತ್ತದೆ. ಇದರ ಜತೆಗೆ ವೈದ್ಯಕೀಯ ಸಿಬ್ಬಂದಿಗೆ ತರಬೇತಿಯ ಅಗತ್ಯವಿದೆ. ಇದರ ಕಡೆಗೂ ರಾಜ್ಯಗಳು ಗಮನ ಹರಿಸಬೇಕು.
- ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ, ವೆಂಟಿಲೇಟರ್‌ಗಳು, ಅಗತ್ಯ ಔಷಧಿ ಸೇರಿ ಎಲ್ಲ ಉಪಕರಣಗಳ ಲಭ್ಯತೆಯನ್ನು ದೃಢಪಡಿಸಿಕೊಳ್ಳಬೇಕು.
ಇದನ್ನೂ ಓದಿ | Coronavirus | ಅಗತ್ಯವಿದ್ದರೆ ಸಭೆ ಮಾಡೋಣ ಎಂದ ಸುಧಾಕರ್, ಅಶೋಕ್ ಕರೆದಿದ್ದ ಕೊರೊನಾ ಸಭೆ ಮುಂದೂಡಿಕೆ